fbpx
ಸಮಾಚಾರ

ರೋಹಿತ್ ಕಳಪೆ ಪ್ರದರ್ಶನ! ರೋಹಿತ್ ಬದಲು ಕಾಪ್ಟನ್ ಸ್ಥಾನಕ್ಕೆ 3 ಜನರ ನಡುವೆ ಫೈಟ್

ಭಾರತ T20 ವಿಶ್ವಕಪ್ ನಲ್ಲಿ ಸೆಮಿಫೈನಲ್ಸ್ ಹಂತ ತಲುಪಿ ಇಂಗ್ಲೆಂಡ್ ತಂಡದ ವಿರುದ್ಧ ಹೀನಾಯವಾಗಿ ಸೋತರು. ಇದು ಅಭಿಮಾನಿಗಳಿಗೆ ಬಹಳಷ್ಟು ಬೇಸರವನ್ನು ಸಹ ತಂದಿತ್ತು. ರೋಹಿತ್ ಶರ್ಮ ಅವರ ಕಳಪೆ ಆಟ ಮತ್ತು ನಾಯಕತ್ವದಿಂದ ಭಾರತ ಸೋತಿತ್ತು ಎಂದು ಅಭಿಮಾನಿಗಳು ಆರೋಪ ಮಾಡುತ್ತಿದ್ದರು. ಹೀಗಾಗಿ ಭಾರತ ಟಿ20 ತಂಡದ ನಾಯಕತ್ವದಿಂದ ರೋಹಿತ್ ಕೆಳಗಿಳಿಸಿ ನೂತನ ಕ್ಯಾಪ್ಟನ್ ಮಾಡುವ ಬಗ್ಗೆ ಬಿಸಿಸಿಐ ಯೋಚಿಸುತ್ತಿದೆ ಎಂದು ಕೆಲ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಒಂದು ವೇಳೆ ರೋಹಿತ್ ನಾಯಕತ್ವದಿಂದ ಕೆಳಗಿಳಿದರೆ ಭಾರತ ತಂಡವನ್ನು ಮುನ್ನೆಡೆಸುವ ನಾಯಕ ಯಾರಾಗಬಹುದು ಎಂಬುದರ ಕುರಿತು ಹಲವಾರು ಪ್ರಶ್ನೆಗಳು ಕೇಳಿ ಬರುತ್ತಿತ್ತು. ಹೀಗಾಗಿ ಬಿಸಿಸಿಐ ಅವರ ಮನಸಲ್ಲಿ 3 ಹೆಸರುಗಳು ಇದೆ ಎಂದು ಹೇಳಲಾಗುತ್ತಿದೆ. ಆ 3 ಹೆಸರುಗಳು ಯಾವುವು ಗೊತ್ತಾ?

1. ಕೆ.ಎಲ್ ರಾಹುಲ್:
ಪ್ರಸ್ತುತ ಭಾರತ ತಂಡ ಉಪನಯನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾಟಿಂಗ್ ಅಂತ ಬಂದರೆ ನಮ್ಮ ಕನ್ನಡದ ಹುಡುಗ ಚಾಣಾಕ್ಷತನದಿಂದ ಆಡುವುದರಲ್ಲಿ ಪಂಡಿತ. ಆದರೆ ಈ ಬಾರಿಯ ವಿಶ್ವಕಪ್ ನಲ್ಲಿ ಇವರ ಬ್ಯಾಟ್ ಹೇಳಿಕೊಳ್ಳುವಷ್ಟು ಸದ್ದು ಮಾಡಿರಲಿಲ್ಲ. ಆದರೆ ಇವರು ಒಂದು ಸಲ ಬ್ಯಾಟ್ ಬೀಸಲು ಶುರುಮಾಡಿದರೆ ಇವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಇವರು ನಾಯಕನಾಗುವ ಎಲ್ಲ ಅರ್ಹತೆಗಳಿವೆ.

 

 

2. ಹಾರ್ಧಿಕ್ ಪಾಂಡ್ಯ:
ಭಾರತ ತಂಡದ ಅಲ್ಲ್ರೌಂಡರ್ ಹಾರ್ಧಿಕ್ ಪಾಂಡ್ಯ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ನಲ್ಲೂ ಮಿಂಚುತ್ತಾರೆ. ಇಷ್ಟೇಅಲ್ಲದೆ ಪ್ರಸ್ತುತ 2022 ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನೆಡಿಸಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದರು. ಹೀಗಾಗಿ ಇವರಿಗೆ ನಾಯಕನಾಗಿ ಭಾರತ ತಂಡವನ್ನು ಮುನ್ನೆಡುಸುವ ಎಲ್ಲ ಅರ್ಹತೆಗಳು ಇದೆ. ಹೀಗಾಗಿ ಕ್ಯಾಪ್ಟನ್ಸಿ ರೇಸ್ ನಲ್ಲಿ ಇವರು ಸಹ ಇದ್ದಾರೆ.

 

3. ರಿಷಬ್ ಪಂತ್:
ರಿಷಭ್ ಪಂತ್ ಈಗಾಗಲೇ ಭಾರತ ಟಿ20 ತಂಡವನ್ನು ಐದು ಬಾರಿ ನಾಯಕನಗಿ ಮುನ್ನಡೆಸಿದ್ದಾರೆ. ಐಪಿಎಲ್​ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿದ್ದಾರೆ. ಹೀಗಾಗಿ ಇವರಿಗೆ ನಾಯಕತ್ವದ ಜವಾಬ್ದಾರಿ ಬಗ್ಗೆ ತಿಳಿದಿದೆ. ಹೀಗಾಗಿ ಇವರು ಸಹ ಭಾರತ ತಂಡದ ನಾಯಕನಾಗುವ ಎಲ್ಲ ಅರ್ಹತೆಗಳಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top