fbpx
ಸಮಾಚಾರ

T20 ವಿಶ್ವಕಪ್ ಫೈನಲ್ ನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್! 1992 ವಿಶ್ವಕಪ್‌ ಇತಿಹಾಸ ರಿಪೀಟ್ ಆಗುತ್ತಾ ಅಥವಾ ರಿವೆಂಜ್- ಇಲ್ಲಿದೆ ಇದರ ಸಂಪೂರ್ಣ ಲೆಕ್ಕಾಚಾರ

ಅದೃಷ್ಟ ಯಾವಾಗ ಯಾರ ಕೈ ಇಡಿಯುತ್ತದೆ ಎಂದು ಹೇಳಲು ಅಸಾಧ್ಯ. ಪಾಕಿಸ್ತಾನ ತಂಡಕ್ಕೆ ಇದು ಅನ್ವ್ಯವಾಗುತ್ತದೆ. ಏಕೆಂದರೆ ಕೇವಲ ಸೆಮಿಫೈನಲ್ಸ್ ಹಂತವನ್ನು ತಲುಪುವುದಿಲ್ಲ ಎಂದು ಅಂದುಕೊಂಡಿದ್ದ ಜನರಿಗೆ ಶಾಕ್ ನೀಡಿದ್ದಾರೆ. ಇದೀಗ ಫೈನಲ್ ಹಂತವನ್ನು ಸಹ ತಲುಪಿದ್ದು, ಈ ಹಿಂದೆ ನಡೆದ ಇತಿಹಾಸ ಮತ್ತೆ ಮರುಕಳಿಸಬಹುದು ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರವಾಕುತ್ತಿದ್ದಾರೆ.

ಪಾಕಿಸ್ತಾನ ತಂಡ ಫೈನಲ್ಸ್ ಹಂತ ತಲುಪಿದ್ದು ಒಂದು ರೋಚಕತೆ ಎಂದು ಹೇಳಿದರೆ ತಪ್ಪಾಗಲಾರದು. ಮೊದಲೆರಡು ಪಂದ್ಯವನ್ನು ಸೋತ ನಂತರ ಉತ್ತಮ ಕಮ್ ಬ್ಯಾಕ್ ಮಾಡಿದ ತಂಡ ಉಳಿದ ಎಲ್ಲ ಪಂದ್ಯವನ್ನು ಗೆದ್ದು ಇದೀಗ ಫೈನಲ್ ಹಂತವನ್ನು ತಲುಪಿದೆ. ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇದೀಗ 1992 ವಿಶ್ವಕಪ್‌ ಇತಿಹಾಸ ರಿಪೀಟ್ ಆಗಲಿದೆಯೇ ಎಂಬ ಮಾತುಗಳು ಕೇಳಿಬರುತ್ತಿದೆ.

ಪಾಕಿಸ್ತಾನ ಕ್ರಿಕೆಟ್ ತಂಡ ಈ ವಿಶ್ವಕಪ್‌ನಲ್ಲಿ ಹಲವು ಏರಿಳಿತಗಳೊಂದಿಗೆ ಫೈನಲ್ ತಲುಪಿದೆ. ಈ ಹಿಂದೆಯೂ ಪಾಕಿಸ್ತಾನದ ವಿಷಯದಲ್ಲಿ ಹೀಗೇ ಆಗಿತ್ತು. 1992ರ ವಿಶ್ವಕಪ್​ನಲ್ಲೂ ಇದೇ ರೀತಿಯಲ್ಲಿ ಪಾಕಿಸ್ತಾನ ತಂಡ ಫೈನಲ್‌ ಪ್ರವೇಶಿಸಿತ್ತು. ಇದಾದ ಬಳಿಕ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದುಕೊಂಡಿತ್ತು. ಇದೀಗ ಈ ಘಟನೆ ಮತ್ತೆ ಮರುಕಳಿಸುತ್ತದೆ ಎಂದು ಹೇಳಲಾಗುತ್ತಿದೆ. ಇಲ್ಲಿದೆ ಇದರ ಲೆಕ್ಕಾಚಾರ.

1. ಈ ಬಾರಿಯಂತೆ 1992 ರಲ್ಲೂ ಆಸ್ಟ್ರೇಲಿಯಾವೇ ವಿಶ್ವಕಪ್‌ ಆತಿಥ್ಯ ವಹಿಸಿತ್ತು.
2. 1992 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಮೆಲ್ಬೋರ್ನ್‌ನಲ್ಲಿಯೇ ಸೋತಿತ್ತು. ಈ ಬಾರಿಯೂ ಪಾಕಿಸ್ತಾನ ಭಾರತದೆದುರು ಸೋತಿದೆ.
3. ಈ ಸೀಸನ್​ನಂತೆಯೇ 1992 ರ ವಿಶ್ವಕಪ್‌ನಲ್ಲಿ ಲೀಗ್ ಸುತ್ತಿನಿಂದಲೇ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿತ್ತು.
4. ಈ ಬಾರಿಯಂತೆ 1992 ರ ವಿಶ್ವಕಪ್‌ನಲ್ಲೂ ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು.
5. ಇದಲ್ಲದೇ 1992ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಕನಿಷ್ಠ 9 ಅಂಕಗಳೊಂದಿಗೆ ಸೆಮಿಫೈನಲ್ ತಲುಪಿತ್ತು. ಈ ಬಾರಿಯ ಟಿ-20 ವಿಶ್ವಕಪ್‌ನಲ್ಲೂ ಇದೇ ರೀತಿ ಆಗಿದೆ.
6. ಸೆಮಿಫೈನಲ್ ಪ್ರವೇಶಿದ ಎಲ್ಲಾ 4 ತಂಡಗಳ ಪೈಕಿ ಪಾಕಿಸ್ತಾನದ್ದೇ ಅಂತ್ಯತ ಕಡಿಮೆ ಅಂಕಗಳಾಗಿದೆ. 1992 ರ ವಿಶ್ವಕಪ್​ನಲ್ಲೂ ಇದೇ ಪರಿಸ್ಥಿತಿ ಇತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top