fbpx
ಸಮಾಚಾರ

ಟೀಮ್ ಇಂಡಿಯಾಗೆ ”ಚೋಕರ್ಸ್”​ ಪಟ್ಟಕಟ್ಟಿದ 1983ರ ವಿಶ್ವಕಪ್ ಹೀರೋ..! ಹೇಳಿದ್ದೇನು ಗೊತ್ತಾ?

ಐಸಿಸಿ ಟಿ20 ವಿಶ್ವಕಪ್ 2022 ಸೆಮಿ ಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ಭಾರತ ಕ್ರಿಕೆಟ್ ತಂಡ ಟೂರ್ನಿಯಿಂದ ಹೊರಬಿದ್ದಾಗಿದೆ. ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ ಪಂದ್ಯದಲ್ಲಿ 10 ವಿಕೆಟ್​ಗಳ ಹೀನಾಯ ಸೋಲನುಭವಿಸಿರುವ ರೋಹಿತ್ ಪಡೆಯ ಮೇಲೆ ಟೀಕೆಗಳ ಸುರಿಮಳೆಯಾಗುತ್ತಿದೆ. ಅದರಲ್ಲೂ 1983ರ ವಿಶ್ವಕಪ್ ಹೀರೋ ಕಪಿಲ್ ದೇವ್ ಟೀಂ ಇಂಡಿಯಾವನ್ನು ಕ್ರಿಕೆಟ್ ದುನಿಯಾದ ಹೊಸ ಚೋಕರ್ಸ್’ಎಂದು ಕರೆದಿದ್ದಾರೆ.

 

 

ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್‌, ಸತತವಾಗಿ ಐಸಿಸಿ ಟೂರ್ನಿಗಳ ನಾಕ್‌ಔಟ್‌ ಹಂತದಲ್ಲಿ ಮುಗ್ಗರಿಸುತ್ತಿರುವ ಟೀಮ್ ಇಂಡಿಯಾವನ್ನು ಈಗ ಚೋಕರ್ಸ್‌ ಎಂದು ಕರೆಯಬೇಕು ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

‘ಹೌದು, ನಾವು ಭಾರತವನ್ನು ಚೋಕರ್ಸ್ ಎಂದು ಕರೆಯಬಹುದು. ಇದು ಪರವಾಗಿಲ್ಲ. ವಿಶ್ವಕಪ್ ಹತ್ತಿರ ಬರುತ್ತಿದ್ದಂತೆ ತಂಡ ಉಸಿರುಗಟ್ಟಿಸಿತು. ಆದರೆ ತಂಡವನ್ನು ಹೆಚ್ಚು ಟೀಕಿಸಬೇಡಿ. ಭಾರತ ಕೆಟ್ಟ ಕ್ರಿಕೆಟ್ ಆಡಿದೆ ಎಂದು ನಾನು ಒಪ್ಪುತ್ತೇನೆ ಆದರೆ ಕೇವಲ ಒಂದು ಆಟದ ಆಧಾರದ ಮೇಲೆ, ನಾವು ಅವರನ್ನು ಹೆಚ್ಚು ಪ್ರಶ್ನಿಸಲು ಸಾಧ್ಯವಿಲ್ಲ‘ ಎಂದು ಕಪಿಲ್ ದೇವ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top