ಆಸ್ಟ್ರೇಲಿಯಾ ಮತ್ತು ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಶನಿವಾರ ರಾತ್ರಿ ಮೆಲ್ಬೋರ್ನ್ನಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದಾಗ ಆಕಸ್ಮಿಕ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಗ್ಲೆನ್ ಮ್ಯಾಕ್ಸ್ವೆಲ್ ಶನಿವಾರ ರಾತ್ರಿ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ನಿವಾಸದಲ್ಲಿ ಟೆನಿಸ್ ಕೋರ್ಟ್ನಲ್ಲಿ ಓಡುತ್ತಿದ್ದಾಗ ಇಬ್ಬರೂ ಎಡವಿ ಬಿದ್ದಿದ್ದಾರೆ ಈ ವೇಳೆ ಮ್ಯಾಕ್ಸ್ ವೆಲ್ ಕಾಲು ಮುರಿದಿದೆ.
In an unfortunate incident, our ⭐ all-rounder fractured his left leg and has undergone surgery.
Wishing you a speedy recovery, @Gmaxi_32. ❤️🩹 Can’t wait to see you smash them cricket balls again! 🙏👊 pic.twitter.com/AdnizfEU0A
— Royal Challengers Bangalore (@RCBTweets) November 13, 2022
ಕಾಲಿನ ಗಾಯದಿಂದಾಗಿ ಆರ್ಸಿಬಿಯ ಪ್ರಮುಖ ಆಟಗಾರ ಮೂರ್ನಾಲ್ಕು ತಿಂಗಳವರೆಗೆ ಕ್ರಿಕೆಟ್ನಿಂದ ದೂರವಿರುತ್ತಾರೆ. ಈ ಸುದ್ದಿ RCB ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಏಕೆಂದರೆ ಮುಂದಿನ ಐಪಿಎಲ್ ಆವೃತ್ತಿ ಆರಂಭವಾಗಲು ಇನ್ನು ಕೇವಲ ನಾಲ್ಕು ತಿಂಗಳು ಮಾತ್ರವೇ ಉಳಿದಿದ್ದು ಈ ಹಂತದಲ್ಲಿ ಪ್ರಮುಖ ಆಟಗಾರ ಗಾಯದಿಂದ ಹೊರಗುಳಿಯುತ್ತಿರುವುದು RCB ತಂಡಕ್ಕೆ ಭಾರಿ ಹಿನ್ನಡೆಯಾಗಲಿದೆ.
ಸದ್ಯ ಮ್ಯಾಕ್ಸ್ ವೆಲ್ ಅವರ ಮುರಿದ ಕಾಲಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಮೂರು ತಿಂಗಳು ಬೆಡ್ ರೆಸ್ಟ್ ನಲ್ಲಿಯೇ ಇರಲಿದ್ದಾರೆ. ಸದ್ಯ ಮ್ಯಾಕ್ಸ್ ವೆಲ್ ಅವರು ಮುಂದಿನ ಮೂರು ತಿಂಗಳಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.. ಆಸ್ಟ್ರೇಲಿಯಾದಲ್ಲಿ ನಡೆಯಲಿರು ಬಿಗ್ ಬ್ಯಾಷ್ ಲೀಗ್ ಅನ್ನು ಕೂಡ ಮಿಸ್ ಮಾಡಿಕೊಳ್ಳಲಿದ್ದಾರೆ. ಐಪಿಎಲ್ಗೆ ಪರಿಗಣಿಸಬೇಕಾದ ಸಮಯದಲ್ಲಿ ಅವರು ಚೇತರಿಸಿಕೊಳ್ಳುತ್ತಾರೆಯೇ? ಇಲ್ಲವೇ? ಎಂಬುದನ್ನ ಈಗಲೇ ಏನೂ ಹೇಳಲಾಗುವುದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
