fbpx
ಸಮಾಚಾರ

ವಾರ ಭವಿಷ್ಯ: ನವೆಂಬರ್ 13 ರಿಂದ 19

ಮೇಷ (Mesha)

 

ಗುರುವಿನ ಪೂರ್ಣ ಅನುಗ್ರಹವಿದ್ದು. ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ   ಯಶಸ್ಸನ್ನು  ತ೦ದು ಕೊಡುತ್ತದೆ.  ಕುಟುಂಬದಲ್ಲಿ ನೆಮ್ಮದಿಯ ಜೀವನ ನಡೆಸುವಿರಿ. ಮಾತೃ ವರ್ಗದಲ್ಲಿ ತೀವ್ರ ತರಹದ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಸ್ವಯಂ ಪ್ರತಿಭೆ ಹಾಗೂ ಕಠಿಣ ಪರಿಶ್ರಮದಿಂದ ಧನ ಹಾಗೂ ಆಸ್ತಿ ಸಂಪಾದನೆಯಾಗಲಿದೆ. ವೃತ್ತಿಯಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಸೌಹಾರ್ದಯುತವಾಗಿ ನಡೆದುಕೊಳ್ಳಿ. ವಿದ್ಯಾವಂತರಿಗೆ ಸಾಧಾರಣ ವೇತನದ ನೌಕರಿ ದೊರೆಯುವುದು. ಕುಲದೇವರ ಪ್ರಾರ್ಥನೆಯನ್ನು ಹೆಚ್ಚು ಮಾಡಿದರೆ ಒಳ್ಳೆಯದಾಗುವುದು.

 

ವೃಷಭ (Vrushabha)

 

ನಿಮಗೆ ಮಿಶ್ರಫಲವಿದ್ದು, ಋಣಾತ್ಮಕ ಚಿಂತನೆಗಳಿಂದ ಹೊರಬನ್ನಿ. ಮನುಜ ಸಂಘಜೀವಿ. ಹಾಗಾಗಿ ನೀವು ಒಬ್ಬಂಟಿಯಾಗಿ ಚಿಂತಿಸದೆ, ನಿಮ್ಮ ಮನಸ್ಸಿನ ತಳಮಳಗಳನ್ನು ನಿಮ್ಮ ಸ್ನೇಹಿತರ ಸಂಘ ಇಲ್ಲವೆ ಬಂಧುಗಳ ಮುಂದೆ ಹೇಳಿಕೊಂಡು ಮನಸ್ಸನ್ನು  ಹಗುರ ಮಾಡಿಕೊಳ್ಳಿ. ಉದ್ಯೋಗದ ವಿಚಾರದಲ್ಲಿ ಒಮ್ಮತ ನಿರ್ಧಾರ ತೆಗೆದುಕೊಳ್ಳುವಲ್ಲಿ  ನೀವು ವಿಫಲರಾಗುವುದರಿಂದ ಒಂದು ಉತ್ತಮ ಅವಕಾಶವನ್ನು ಕಳೆದುಕೊಳ್ಳುವಿರಿ. ಈ ವಾರ ದಿಢೀರನೇ ದೀರ್ಘ ಪ್ರಯಾಣ ಎದುರಾಗುವುದು. ಖರ್ಚು ಹೆಚ್ಚಾಗುವುದು .

 

ಮಿಥುನ (Mithuna)

ಮನೆಯಲ್ಲಿ ಸಂಗಾತಿಯ ನಗು ನಗುತ್ತಾ ಇದ್ದರೆ ನಿಮಗೆ ಯಾವ ಕೆಲಸವೂ ಕಠಿಣವೆನಿಸುವುದಿಲ್ಲ. ಆದರೆ ಪತಿ ಪತ್ನಿಯರಲ್ಲಿ ಅನುಮಾನ ಪ್ರಸಂಗಗಳು ನಿಮ್ಮ ಚಿಂತನಾ ಲಹರಿಯ ದಿಕ್ಕನ್ನು ತಪ್ಪಿಸುತ್ತವೆ. ಹಿರಿಯರ ಮಧ್ಯಸ್ಥಿಕೆಯಿಂದ ಸಂಸಾರದಲ್ಲಿ ಹೊಸತನವನ್ನು ಕಾಣುವಿರಿ. ಮಕ್ಕಳ ವಿದ್ಯಾಭ್ಯಾಸ ನಿಮಗೆ ಸಂತಸ ನೀಡುವುದು. ಬೆಲೆ ಬಾಳುವ ವಸ್ತುಗಳ ಖರೀದಿಯು ನಿಮಗೆ ಈ ವಾರ ಜಾಸ್ತಿ ಇರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು ಆದರೆ ಹಣವನ್ನು ವಾಮ ಮಾರ್ಗದಲ್ಲಿ ಪಡೆಯುವುದು ಒಳ್ಳೆಯದಲ್ಲ.

 

ಕರ್ಕ (Karka)

ಈ ವಾರ ಶತ್ರುಗಳ ಮೇಲೆ ವಿಜಯವನ್ನು ಸಾಧಿಸುವಿರಿ. ಆರೋಗ್ಯ ಭಾಗ್ಯವೂ ದಿನದಿನಕ್ಕೆ ವೃದ್ಧಿಯಾಗಿ ಗುಣಮುಖರಾಗುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದರಿಂದ ಸ್ಥಿರಾಸ್ತಿ ಇಲ್ಲವೇ ವಾಹನ ಖರೀದಿಯ ಬಗ್ಗೆ ಚಿಂತಿಸುವಿರಿ. ನಿಮ್ಮ ಮನೋಕಾಮನೆಯು ಶೀಘ್ರದಲ್ಲಿ ಕೈಗೂಡುವುದು. ಯುವಕರು ಪ್ರೇಮ ಪ್ರಕರಣಗಳಿಂದ ದೂರ ಇರುವುದು ಒಳ್ಳೆಯದು. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಕಂಡುಬರುವುದು. ಜನ್ಮದಲ್ಲಿರುವ ರಾಹು ಮನಸ್ಸಿನ ಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡುವನು. ತಾಳ್ಮೆಯಿಂದ ವ್ಯವಹರಿಸಿ.

 

ಸಿಂಹ (Simha)

 

ನಿಷ್ಠುರವಾದಿ, ಲೋಕಕ್ಕೆ ವಿರೋಧಿ, ಎನ್ನುವಂತೆ ಕೆಲವೊಮ್ಮೆ ನೀವಾಡುವ ಮಾತುಗಳು ಬೇರೆಯವರನ್ನು ನೋಯಿಸುವುದು. ಪಂಚಮ ಶನಿಯು ಮಕ್ಕಳ ವಿವಾಹ ಮತ್ತು ಅಭಿವೃದ್ಧಿಯ ಬಗೆಗಿನ ಚಿಂತೆಯನ್ನು ಹೆಚ್ಚು ಮಾಡುವನು. ದಶರಥ ಕೃತ ಶನಿ ಸ್ತೋತ್ರವನ್ನು ಪಠಿಸಿ. ಲಕ್ಷ್ಮೀನಾರಸಿಂಹ ದೇವರನ್ನು ಪೂಜಿಸಿ. ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಉಂಟಾಗುವ ಸಾಧ್ಯತೆ ಇದೆ. ಗುರು ಹಿರಿಯರ ಸಲಹೆಯನ್ನು ಸ್ವೀಕರಿಸಿ ಅದರಂತೆ ಮುನ್ನಡೆಯಿರಿ. ಆರ್ಥಿಕ ಸದೃಢತೆ ಇರುವುದಿಲ್ಲ  ಹಾಗಾಗಿ ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ.

 

ಕನ್ಯಾರಾಶಿ (Kanya)

 

ನಿಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು ಕಂಡು ಬೇಸರಗೊಳ್ಳುವಿರಿ  ಮತ್ತು ಅದರಿಂದ ನಿರಾಶರಾಗದಿರಿ. ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನಸ್ಸನ್ನು ನೀವೇ ಸಂತೈಸಿಕೊಳ್ಳಿ ಎಂಬ ದಾರ್ಶನಿಕರ ಮಾತನ್ನು ನೆನಪಿಸಿಕೊಳ್ಳಿ. ಜಗತ್ತನ್ನು ಬದಲಿಸುವ ಶಕ್ತಿ ನಿಮಗಿಲ್ಲ. ನೀವೇ ಬದಲಾಗಿ ಇದ್ದಿದ್ದರಲ್ಲೇ ತೃಪ್ತಿ ಮತ್ತು ನೆಮ್ಮದಿಯನ್ನು ಕಂಡರೆ ನಿಮಗೂ ನಿಮ್ಮ ಪರಿವಾರಕ್ಕೂ ಒಳ್ಳೆಯದಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ದುಡಿದ ಹಣ ನೀರಿನಂತೆ ಖರ್ಚಾಗುವುದು.

 

ತುಲಾ (Tula)

 

ಜನ್ಮಸ್ಥ ಗುರು ಉತ್ತಮ ಫಲ ನೀಡುವನು. ಪರಾಕ್ರಮ ಸ್ಥಾನದಲ್ಲಿನ ಶನಿ ಗ್ರಹ ಸೋದರರೊಂದಿಗಿನ ಭಿನ್ನಾಭಿಪ್ರಾಯವನ್ನು ಸೂಚಿಸುವನು. ನಿಮ್ಮ ಈ ಹಿಂದಿನ ನಡವಳಿಕೆಯೂ ನಿಮ್ಮ ಹಿರಿಯರ ಮೇಲೆ ಪ್ರಭಾವ ಬೀರುವುದರಿಂದ ನಿಮಗೆ ದಕ್ಕಬೇಕಾದ ಪಿತ್ರಾರ್ಜಿತ ಆಸ್ತಿ ತಪ್ಪಿ ಹೋಗುವ ಸಾಧ್ಯತೆ ಇದೆ. ಸದಾ ನಿಮ್ಮ ಮಾತನ್ನು ಇತರರು ಕೇಳಬೇಕೆಂಬುದನ್ನು  ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

 

ವೃಶ್ಚಿಕ (Vrushchika)

 

ನಿಮ್ಮ ಮಾತಿನ ನಾಲಿಗೆಯಲ್ಲಿರುವ ಶನಿಯು ನಿಮ್ಮಿಂದ ಸುಳ್ಳನ್ನು ನುಡಿಸುವ ಸಾಧ್ಯತೆ ಇದೆ. ಇದರಿಂದ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ. ಮಿತ್ರರೊಂದಿಗೆ ವಿನಾ ಕಾರಣ ಕಲಹಗಳು ಉಂಟಾಗುವ ಸಾಧ್ಯತೆ ಇದೆ. ಲೋಹದ ಪದಾರ್ಥಗಳು ಮಾರಾಟದಿಂದ ಹೆಚ್ಚಿನ ಆದಾಯ ಬರುವುದು. ಗುರು ಹಿರಿಯರ ಆಶೀರ್ವಾದ ಪಡೆಯುವಿರಿ. ಧಾರ್ಮಿಕ ಕಾರ್ಯಗಳಿಗೆ ಅಧಿಕ ಹಣ ಖರ್ಚಾಗುವುದು. ಒಂಟಿತನ ನಿಮಗೆ ಕಾಡುವುದು.

 

ಧನು ರಾಶಿ (Dhanu)

 

ನಿಮ್ಮ ಆದಾಯದ ಮೂಲಗಳು ಈ ವಾರ ದಿಢೀರನೇ ಕಡಿಮೆಯಾಗುವ ಸಾಧ್ಯತೆ ಇದೆ. ಹಾಗಾಗಿ ಅನಗತ್ಯ ಖರ್ಚು ವೆಚ್ಚಗಳನ್ನು ತಡೆ ಹಿಡಿಯುವುದು ಒಳ್ಳೆಯದು. ಉದಾಸೀನತೆ ಮತ್ತು  ಸೋಮಾರಿತನ ಕಂಡುಬರುವುದು. ಬಾಯಿ ತಪ್ಪಿ ಆಡಿದ ಮಾತಿಗೆ ಪಶ್ಚಾತ್ತಾಪ ಪಡಬೇಕಾಗುವುದು. ಗುರುವಿನ ಬಲ ಇರುವುದರಿಂದ ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಕಾಣುವಿರಿ.ಬಂಧು ಮಿತ್ರರಿಂದ ಆರ್ಥಿಕ ನೆರವು ದೊರೆಯಲಿದೆ. ಆಂಜನೇಯ ದೇವನ ದೇವಾಲಯ ಇಲ್ಲವೆ ಶನೈಶ್ಚರ ದೇವನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿರಿ.

 

ಮಕರ (Makara)

 

ಕೈಗೆ ಬಂದ ತುತ್ತು ಬಾಯಿಗಿಲ್ಲದಂತೆ ಆಗುವುದು. ಮಂಗಳ  ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದು. ಸ್ಥಳ ಬದಲಾವಣೆಯ ಸಂಭವವಿದೆ. ಮನೆಯ ಹೊರಗೆ ನಿಮಗೆ ಗೌರವ ಆದರಗಳು ದೊರೆಯುವುದು. ಆದರೆ ಮನೆಯ ಜನರೇ ನಿಮ್ಮನ್ನು ಆದರಿಸುವುದಿಲ್ಲ. ಸಾಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ತೋರಿ ಪತಿ ಪತ್ನಿಯಲ್ಲಿ ವಿರಸ ಕಂಡು ಬರುವುದು. ದುಷ್ಟ ಜನರಿಂದ ದೂರ ಇರುವುದು ಒಳ್ಳೆಯದು. ಮಹತ್ವವಾದ ಕೆಲಸಗಳನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.

 

ಕುಂಭರಾಶಿ (Kumbha)

ಮಾನಸಿಕ ಚಂಚಲತೆ ದೂರವಾಗಿ ಸ್ಥಿರತೆ ಕಂಡುಬರಲಿದೆ. ನಿಮಗೆ ವೈಯಕ್ತಿಕವಾಗಿ ಹೆಚ್ಚಿನ ಬೆಂಬಲ ವ್ಯಕ್ತವಾಗುವುದು. ಅನೇಕ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಬಗ್ಗೆ ಚಿಂತಿಸುವಿರಿ. ನಿಮ್ಮ ಆಸೆಗಳು ಈ ವಾರ ಪೂರ್ಣಗೊಳ್ಳುವವು. ನಿಮ್ಮ ಆಜ್ಞೆಯನ್ನು ನಿಮ್ಮ ಕೈ ಕೆಳಗಿನ ಸೇವಕರು ಶಿರಸಾ ವಹಿಸಿ ಪಾಲಿಸುವರು. ನೀವು ಮಾಡುವ ಉದ್ಯೋಗ ಸ್ಥಳದಲ್ಲಿ ನಿಮಗೆ ಹೆಚ್ಚಿನ ಗೌರವ ಸಿಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಮೀನರಾಶಿ (Meena)

ಗುರುವಿನ ಅಷ್ಟಮ  ಸ್ಥಾನದ ಸಂಚಾರದಿಂದಾಗಿ ವಿಪರೀತ ಕೋಪ ತಾಪಗಳು ನಿಮ್ಮ ಅಭ್ಯುದಯಕ್ಕೆ ಪೆಟ್ಟು ನೀಡುವುದು. ನೀವು ಸಹಾಯ ಮಾಡಿದ ವ್ಯಕ್ತಿಯೇ  ನಿಮ್ಮ ವಿರುದ್ಧವಾಗಿ ಸಾಕ್ಷಿ ಹೇಳುವ ಪ್ರಸಂಗ ಎದುರಾಗುವುದು.  ಹೊಟ್ಟೆನೋವು ಮತ್ತು ಉಷ್ಣ ಸಂಬಂಧದಿಂದ ಉಂಟಾಗುವ ಕೆಲವು ತೊಂದರೆಗಳು ನಿಮ್ಮನ್ನು ಕಾಡುತ್ತವೆ.ಮಕ್ಕಳು ನಿಮಗೆ ಅಗೌರವ ಕೊಡುವರು. ದುರ್ಗಾದೇವಿಯ ಆರಾಧನೆ ಮಾಡುವುದರಿಂದ ಒಳ್ಳೆಯದಾಗುವುದು.. ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆ ಹೆಚ್ಚಾಗಿ ಇದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top