fbpx
ಸಮಾಚಾರ

ಟಿ20 ವಿಶ್ವಕಪ್ : ಇಂಗ್ಲೆಂಡ್ – ಪಾಕ್ ಫೈನಲ್ ಪಂದ್ಯ: ಮಳೆ ಬಂದರೆ ಇರುವ ಆಯ್ಕೆಗಳೇನು? ನಿಯಮಗಳು ಹೇಳುವುದೇನು?

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಅಂತಿಮ ಘಟ್ಟ ತಲುಪಿದ್ದು ಫೈನಲ್ ಪಂದ್ಯ ನವೆಂಬರ್ 13ರಂದು ನಡೆಯಲಿದ್ದು ಪಾಕಿಸ್ತಾನ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಜಯ ಗಳಿಸುವ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಸೆಮಿಫೈನಲ್ ಪಂದ್ಯಗಳು ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಇರಿಸಿದೆ. ಅದೇನೆಂದರೆ, ಮಳೆಯಿಂದಾಗಿ ಪಂದ್ಯ ಆರಂಭವಾಗದಿದ್ದರೆ ಮರುದಿನವೇ ಪಂದ್ಯ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಬೇಕಾದರೆ ಎರಡೂ ಇನಿಂಗ್ಸ್‌ಗಳಲ್ಲಿ ಕನಿಷ್ಠ 10 ಓವರ್‌ಗಳು ನಡೆಯಬೇಕು. ಇದು ಆಗದಿದ್ದಲ್ಲಿ ಮರುದಿನ (ಮೀಸಲು ದಿನ) ಪಂದ್ಯ ನಡೆಯಲಿದೆ. ಒಂದು ವೇಳೆ ಮೀಸಲು ದಿನವೂ ವಾಶ್ ಔಟ್ ಆಗಿದ್ದರೆ ಎರಡೂ ತಂಡಗಳು ಟ್ರೋಫಿಯನ್ನು ಹಂಚಿಕೊಳ್ಳಲಿವೆ, ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸಿಲ್ಲ.

ಫೈನಲ್ ಪಂದ್ಯದ ಮೊದಲು ಕ್ರಿಕೆಟ್ ಅಭಿಮಾನಿಗಳಿಗೆ ಯಾವುದೇ ಶುಭ ಸುದ್ದಿ ಇಲ್ಲ, ಏಕೆಂದರೆ ಮಳೆಯ ಸಂಪೂರ್ಣ ಸಾಧ್ಯತೆಯಿದೆ. ಹವಾಮಾನ ಇಲಾಖೆ ಪ್ರಕಾರ ಭಾನುವಾರ ಮತ್ತು ಸೋಮವಾರ ಎರಡೂ ದಿನ ಭಾರೀ ಮಳೆಯಾಗುವ ಸಾಧ್ಯತೆ ವ್ಯಕ್ತವಾಗಿದೆ. ಭಾನುವಾರ ಫೈನಲ್ ಪಂದ್ಯ ನಡೆಯಬೇಕಿದ್ದರೂ ಮಳೆಯಿಂದಾಗಿ ಪಂದ್ಯವನ್ನು ಆಡಲಾಗದು, ನಂತರ ಸೋಮವಾರವನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ. ಸೋಮವಾರವೂ ಪಂದ್ಯಕ್ಕೆ ಮಳೆ ಅವಕಾಶ ನೀಡದಿದ್ದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಬೇರೆ ಅಂದ್ಯಗಳಲ್ಲಿ ಮಳೆ ಬಂದಾಗ ಪ್ರತಿ ತಂಡಕ್ಕೆ ಕನಿಷ್ಟ 5 ಓವರ್‌ಗಳು ಸಿಗುವಂತೆ ರೂಪಿಸಲಾಗುತ್ತದೆ.. ಆದರೆ ಇಂದು ನಡೆಯುವ ಫೈನಲ್ ಪಂದ್ಯದಲ್ಲಿಯೂ ಎರಡು ತಂಡಗಳು ಕನಿಷ್ಟ 10 ಓವರ್ ಆಡಲೇಬೇಕಿದೆ. ಅಲ್ಲದೆ ಪಂದ್ಯ ನಡೆದು ಎರಡೂ ತಂಡಗಳು ಸಮವಾಗಿ ರನ್ ಗಳಿಸಿ ಪಂದ್ಯ ಟೈ ಆದರೆ ಆಗ ಸೂಪರ್ ಓವರ್ ಆಡಿಸಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top