T20 ವಿಶ್ವಕಪ್ ಫೈನಲ್ ಪಂದ್ಯ ಮುಗಿದಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಜಯಭೇರಿ ಬಾರಿಸಿದೆ. ಈ ವೇಳೆ ಭಾರತದ ತಂಡದ ಬೌಲರ್ ಮೊಹಮ್ಮದ್ ಶಮಿ ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯಬ್ ಅಖ್ತರ್ ಅವರ ಕಾಲು ಎಳೆದಿದ್ದಾರೆ.
ಶೋಯಬ್ ಅಖ್ತರ್ ಭಾರತ ತಂಡ ಸೆಮಿಫೈನಲ್ಸ್ ನಲ್ಲಿ ಸೋತ ಬಾಳಿಕೆ ವಿಡಿಯೋ ಮಾಡಿ ಬಹಳಷ್ಟು ಗೇಲಿ ಮಾಡಿದ್ದರು. ಇದರಿಂದ ಭಾರತೀಯರು ಬಹಳಷ್ಟು ನೊಂದಿದ್ದರು. ಇದೀಗ ಪಾಕಿಸ್ತಾನ ತಂಡ ಫೈನಲ್ಸ್ ನಲ್ಲಿ ಸೋತ ಬಳಿಕ “ಸಾರಿ ಬ್ರದರ್ ಇದನ್ನೇ ಕರ್ಮ ಎನ್ನುವುದು” ಎಂದು ಟ್ವೀಟ್ ಮಾಡುವ ಮೂಲಕ ಶೋಯಬ್ ಅಖ್ತರ್ ಅವರಿಗೆ ಠಕ್ಕರ್ ನೀಡಿದ್ದಾರೆ.
Sorry brother
It’s call karma 💔💔💔 https://t.co/DpaIliRYkd
— Mohammad Shami (@MdShami11) November 13, 2022
ಪಾಕಿಸ್ತಾನ ತಂಡ ವಿಶ್ವಕಪ್ ಫೈನಲ್ಸ್ ಸೋತ ಬಳಿಕ ಶೋಯಬ್ ಅಖ್ತರ್ ಹಾರ್ಟ್ ಬ್ರೇಕ್ ಆಗಿರುವಂತಹ ಎಮೋಜಿ ಟ್ವೀಟ್ ಮಾಡಿದ್ದರು. ಇದಕ್ಕೆ ಶಮಿ ಪ್ರತ್ಯುತ್ತರವಾಗಿ “ಸಾರಿ ಬ್ರದರ್ ಇದನ್ನೇ ಕರ್ಮ ಎನ್ನುವುದು” ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
T20 ವಿಶ್ವಕಪ್ ಫೈನಲ್ಸ್ ನಲ್ಲಿ ಪಾಕಿಸ್ತಾನ ಕೇವಲ 137 ರನ್ ಗಳಿಸಿತು. ಇಂಗ್ಲೆಂಡ್ ತಂಡ ಗೆಲ್ಲಲು 138 ರನ್ ಬೇಕಿತ್ತು. ಈ ಸುಲಭ ಮೊತ್ತವನ್ನು ಗೆಲ್ಲುವ ವಿಶ್ವಾಸದಲ್ಲಿ ಫೀಲ್ಡ್ ಗೆ ಇಳಿದ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿತು. ನಂತರ ಅಲ್ಲ್ರೌಂಡರ್ ಅವರ ಅಮೋಘ ಪ್ರದರ್ಶನದಿಂದ ಇಂಗ್ಲೆಂಡ್ ತಂಡ ಫೈನಲ್ ಗೆದ್ದಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
