ವಿಶ್ವದ ಜನಸಂಖ್ಯೆ ಬರೋಬ್ಬರಿ 800 ಕೋಟಿ! ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್ಪಿಎ) ಮಂಗಳವಾರ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದೆ. ಈ ಪೈಕಿ ಭಾರತದ ಜನಸಂಖ್ಯೆ ಪ್ರಮಾಣ 141 ಕೋಟಿ ಆಗಿದ್ದು, ಮುಂದಿನ ವರ್ಷ ಚೀನವನ್ನು ಮೀರಿಸಿ ಮೊದಲ ಸ್ಥಾನಕ್ಕೆ ಏರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಹವಾಸಂಸ್ಥೆಯ ವರದಿಯ ಪ್ರಕಾರ 2020ರ ನಂತರ ಜನಸಂಖ್ಯಾ ಏರಿಕೆ ಪ್ರಮಾಣ ಶೇ.1ಕ್ಕೆ ಇಳಿದಿದೆ. 2010ರಲ್ಲಿ ಜನಸಂಖ್ಯೆ 700 ಕೋಟಿಯಿತ್ತು.. 800 ಕೋಟಿ ಗಡಿ ತಲುಪಲು 12 ವರ್ಷ ತೆಗೆದುಕೊಂಡಿದೆ. 2037ರ ವೇಳೆಗೆ 900 ಕೋಟಿ ದಾಟಬಹುದು. 2050ಕ್ಕೆ ವಿಶ್ವದ ಜನಸಂಖ್ಯೆ 970 ಕೋಟಿಗೆ, 2100ರ ಹೊತ್ತಿಗೆ ಒಂದು ಸಾವಿರ ಕೋಟಿ (1,040 ಕೋಟಿ) ಗಡಿ ದಾಟಲಿದೆ ಎಂದು ಅಂದಾಜು ಮಾಡಲಾಗಿದೆ.
ಭಾರತದ ಮಟ್ಟಿಗೆ ಹೇಳುವಾದರೆ 2050ರ ವೇಳೆಗೆ ದೇಶದ ಜನಸಂಖ್ಯೆ 166 ಕೋಟಿಗೆ ಏರಿಕೆಯಾಗಲಿದೆ. ಪ್ರಸಕ್ತ ವರ್ಷ ದೇಶದಲ್ಲಿ 15ರಿಂದ 64 ವರ್ಷ ವಯೋಮಿತಿಯವರ ಪ್ರಮಾಣ ಶೇ.68, 65 ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋಮಾನದವರ ಪ್ರಮಾಣ ಶೇ.7 ಆಗಿದೆ ಎಂದು ದೃಢಪಡಿಸಿದೆ.
ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು:
ಚೀನಾ – 142 ಕೋಟಿ
ಭಾರತ – 141 ಕೋಟಿ
ಅಮೆರಿಕಾ – 33 ಕೋಟಿ
ಇಂಡೋನೇಷ್ಯಾ – 27 ಕೋಟಿ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
