ಅಪರೂಪದ ವಸ್ತುಗಳನ್ನ ಸಂಗ್ರಹಿಸುವುದನ್ನೇ ಕೆಲವು ಹವ್ಯಾಸವನ್ನಾಗಿ ಮಾಡಿಕೊಂಡಿರುತ್ತಾರೆ. ಹಳೆಯ ಪಗಡೆ, ಪಾತ್ರೆ, ನಾಣ್ಯ, ಅಂಚೆಚೀಟಿ, ಒಡವೆ ಅಥವಾ ಸೆಲೆಬ್ರಿಟಿಗಳು ಉಪಯೋಗಿಸಿದ ವಸ್ತುಗಳು, ಧರಿಸಿದ ವಸ್ತ್ರಗಳು ಹೀಗೆ ಸ್ಪೆಷಲ್ ಸಾಮಗ್ರಿಗಳನ್ನ ಸಂಗ್ರಹಿಸುತ್ತಾರೆ. ಇಂಥಾ ಹವ್ಯಾಸಗಾರರಲ್ಲಿ ಒಬ್ಬರು ವಿಶೇಷ ಚಪ್ಪಲಿಯನ್ನು 1.77 ಕೋಟಿಗೆ ಕೊಂಡುಕೊಂಡಿದ್ದಾರೆ! ಮುಂದೆ ಓದಿ
ಹೌದು, ಸುಪ್ರಸಿದ್ದ ಆ್ಯಪಲ್ ಕಂಪನಿಯ ಸಂಸ್ಥಾಪಕ ದಿ. ಸ್ಟೀವ್ ಜಾಬ್ಸ್ ಅವರು 1970ರ ದಶಕದಲ್ಲಿ ಧರಿಸುತ್ತಿದ್ದ ಚಪ್ಪಲಿ ಬರೋಬ್ಬರಿ 1.77 ಕೋಟಿಗೆ ಮಾರಾಟವಾಗಿದೆ. ಸ್ಟೀವ್ ಜಾಬ್ಸ್ ಅವರ ವ್ಯವಸ್ಥಾಪಕ ಮಾರ್ಕ್ ಶೆಫ್ ಬಳಿ ಇಷ್ಟು ದಿನ ಈ ಚಪ್ಪಲಿಗಳು ಇದ್ದವು. ಇವುಗಳನ್ನು ಆ್ಯಪಲ್ ಕಂಪನಿಯ ಅನೇಕ ಪ್ರಮುಖ ಕಾರ್ಯಕ್ರಮಗಳಲ್ಲಿ ಸ್ಟೀವ್ ಜಾಬ್ಸ್ ಧರಿಸಿದ್ದರು ಎನ್ನಲಾಗಿದೆ. ಇದೀಗ ಸ್ಟೀವ್ ಜಾಬ್ಸ್ ಧರಿಸುತ್ತಿದ್ದ ಚಪ್ಪಲಿ ಬರೋಬ್ಬರಿ 1.77 ಕೋಟಿಗೆ ಮಾರಾಟವಾಗಿದೆ.
ಹರಾಜು ವೆಬ್ಸೈಟ್ನಲ್ಲಿನ ವಿವರಗಳ ಪ್ರಕಾರ, ಆಪಲ್ ಕಂಪನಿಯ ಇತಿಹಾಸದಲ್ಲಿ ಅನೇಕ ಪ್ರಮುಖ ಕ್ಷಣಗಳಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಗಳನ್ನು ಧರಿಸಿದ್ದರು. 1976ರಲ್ಲಿ ಲಾಸ್ ಆಲ್ಟೋಸ್ ಗ್ಯಾರೇಜ್ನಲ್ಲಿ ಆಪಲ್ ಕಂಪ್ಯೂಟರ್ ಅನ್ನು ಆನ್ ಮಾಡುವ ಸಂದರ್ಭದಲ್ಲಿ ಸ್ಟೀವ್ ಜಾಬ್ಸ್ ಇದೇ ಚಪ್ಪಲಿಯನ್ನು ಧರಿಸಿದ್ದರು. ಜಾಬ್ಸ್ ಬಿರ್ಕೆನ್ಸ್ಟಾಕ್ಸ್ನ ಜಾಣ್ಮೆ ಮತ್ತು ಪ್ರಾಯೋಗಿಕತೆಯನ್ನು ಕಂಡು ಜನ ಬೆರಗಾಗಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
