ಜಿ20 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ. ಜಿ20 ಶೃಂಗಸಭೆಯ ಹಿನ್ನಲೆಯಲ್ಲಿ ಬಾಲಿಯ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ಪರಸ್ಪರ ಮಾತುಕತೆ ನಡೆಸಿದರು.
PM Modi and US President Biden exchange greetings at the Mangrove forest visit in Bali, Indonesia during the #G20Summit2022 pic.twitter.com/qv7cqKWmab
— ANI (@ANI) November 16, 2022
ಈ ವೇಳೆ ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಎದುರು ಬಂದು ಕುಳಿತುಕೊಳ್ಳುವಾಗ ಮೋದಿ ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ. ಜೋ ಬೈಡನ್ ಅವರ ಸೆಲ್ಯೂಟ್‌ಗೆ ಮೋದಿ ಅವರು ಕೈ ಎತ್ತಿ ಹಾಯ್ ಹೇಳಿದ್ದಾರೆ.
ಶೃಂಗಸಭೆಯ ಮೊದಲ ದಿನ ಬೈಡೆನ್ ಮೋದಿಗೆ ಅವರಿಗ ಹಸ್ತಲಾಘವ ಮಾಡಲು ಓಡಿ ಬಂದಿದ್ದಲ್ಲದೆ, ಸಭೆಯಲ್ಲಿ ಅವರ ಪಕ್ಕದಲ್ಲಿಯೇ ಆಸೀನರಾಗಿದ್ದರು. ಆ ಬಳಿಕ ಮೋದಿ ಹಾಗೂ ಬೈಡೆನ್ ಅವರ ಚಿತ್ರ ವೈರಲ್ ಆಗಿದ್ದವು. ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಮ್ಯಾಂಗ್ರೋವ್ ಕಾಡುಗಳಲ್ಲಿ ಸಸಿ ನೆಡುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
