fbpx
ಸಮಾಚಾರ

ಬಿಗ್ ಬಾಸ್ ಮನೆಯಲ್ಲೂ ನಡೆಯಿತು ಕಳ್ಳತನ! ಚಿನ್ನದ ಬ್ರೇಸ್ಲೆಟ್ ಮತ್ತು ಉಂಗುರವನ್ನು ಕಳೆದುಕೊಂಡ ರೂಪೇಶ್ ರಾಜಣ್ಣ

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಹಲವಾರು ಘಟನೆಗಳು ನಡೆಯುತ್ತಾ ಬಂದಿದೆ. ಮೊದಲಿಗೆ ಬಿಗ್ ಬಾಸ್ ಮನೆಯಲ್ಲಿ ಜಗಳ ಪ್ರೀತಿ ನೋಡುತ್ತಿದ್ವಿ. ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಕಳ್ಳತನ ಕೂಡ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಬೆಲೆಬಾಳುವಂತಹ ಚಿನ್ನದ ಉಂಗುರ ಮತ್ತು ಬ್ರೇಸ್ಲೆಟ್ ಕಳೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯ ಮಂದಿಗೆ ಗೊಂಬೆ ತಯಾರಿಸುವ ಒಂದು ಟಾಸ್ಕ್ ನೀಡಿದ್ದರು. ಈ ಟಾಸ್ಕ್ ವೇಳೆ ಮನೆಯಲ್ಲಿ ಹಲವಾರು ಗಲಾಟೆಗಳು ನಡೆದವು. ಟಾಸ್ಕ್ ಮುಗಿದ ನಂತರ ರಾಜಣ್ಣ ತಮ್ಮ ಬೆರಳಿನಲಿದ್ದ ಉಂಗುರ ಮತ್ತು ತಮ್ಮ ಕೈಗೆ ಅಕಿಕೊಂಡ ಚಿನ್ನದ ಬ್ರೇಸ್ಲೆಟ್ ಕಾಣೆಯಾಗಿರುವುದನ್ನು ಗಮನಿಸುತ್ತಾರೆ. ಇದಾದ ನಂತರ ಇವರು ಬಿಗ್ ಬಾಸ್ ಬಳಿ ಬಂದು ತಮ್ಮ ಬ್ರೇಸ್ಲೆಟ್ ಕಳೆದುಹೋಗಿದೆ ದಯಮಾಡಿ ಹುಡುಕಿಕೊಡಿ ಎಂದು ಕೇಳಿಕೊಳ್ಳುತ್ತಾರೆ. ಈ ವೇಳೆ ರೂಪೇಶ್ ಶೆಟ್ಟಿ ಕೂಡ ಇವರಿಗೆ ಸಪ್ಪೋರ್ಟ್ ಮಾಡುತ್ತಾರೆ. ಆದರೆ ಅಸಲಿಗೆ ಸತ್ಯಾಂಶ ಬೇರೇನೇ ಇದೆ. ಏಕೆಂದರೆ ರೂಪೇಶ್ ರಾಜಣ್ಣ ಅವರ ಬ್ರೇಸ್ಲೆಟ್ ಮತ್ತು ಉಂಗುರ ರೂಪೇಶ್ ಶೆಟ್ಟಿ ಬಳಿ ಇರುತ್ತದೆ.

ರೂಪೇಶ್ ಶೆಟ್ಟಿ ರಾಜಣ್ಣ ಅವರ ಜೊತೆ ಬಿಗ್ ಬಾಸ್ ಬಳಿ ಉಂಗುರ ಮತ್ತು ಬ್ರೇಸ್ಲೆಟ್ ಹುಡುಕಿಕೊಡಲು ಮನವಿ ಮಾಡುತ್ತಿರುತ್ತಾರೆ. ರೂಪೇಶ್ ರಾಜಣ್ಣ ಒಳಗೆ ಹೋದ ಬಳಿಕ ರೂಪೇಶ್ ಶೆಟ್ಟಿ ಕ್ಯಾಮೆರಾ ಮುಂದೆ ಬ್ರೇಸ್ಲೆಟ್ ಮತ್ತು ಉಂಗುರ ತೆಗೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ನಂತರ ನಾನೆ ಇದನ್ನು ರಾಜಣ್ಣ ಅವರಿಗೆ ಕೊಡುವುದಾಗಿಯೂ ಸಹ ತಿಳಿಸಿದ್ದಾರೆ. ಈ ಹಿಂದೆ ಸಾನ್ಯ ರೂಪೇಶ್ ರಾಜಣ್ಣ ಅವರನ್ನು ಬಕ್ರ ಮಾಡಿದ್ದರು. ಇದೀಗ ರೂಪೇಶ್ ಶೆಟ್ಟಿ ತಮ್ಮ ಆಟವನ್ನು ಆಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top