ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸತ್ಯ’ ಎಂಬ ಜನಪ್ರಿಯ ಧಾರಾವಾಹಿಯಲ್ಲಿ ಅಮ್ಮನ ಮಾತು ಕೇಳುವ ಮುಗ್ದ ಹುಡುಗನ ‘ಅಮುಲ್ ಬೇಬಿ ಕಾರ್ತಿಕ್’ ಪಾತ್ರ ವೀಕ್ಷಕರ ಮನಗೆದ್ದಿದೆ. ಅಮುಲ್ ಬೇಬಿ ಕಾರ್ತಿಕ್ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟನ ನಿಜ ಹೆಸರು ಸಾಗರ್ ಬಿಳಿಗೌಡ. ಇದೀಗ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಾಗರ್ ಬಿಳಿಗೌಡ ತೀರ್ಮಾನಿಸಿದ್ದಾರೆ.
ನಟಿ, ಮಾಡೆಲ್ ಆಗಿರುವ ಸಿರಿ ರಾಜು ಅವರ ಜೊತೆ ಸಾಗರ್ ಬಿಳಿಗೌಡ ಅವರು ಸಾಂಸಾರಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಾಗರ್ ಬಿಳಿಗೌಡ ಅವರನ್ನು ಮದುವೆ ಆಗುತ್ತಿರುವುದಾಗಿ ಸಿರಿ ರಾಜು ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.’ನಾನು ಮದುವೆಯಾಗುತ್ತಿರುವ ಅತ್ಯುತ್ತಮ ವ್ಯಕ್ತಿಯನ್ನ ಪರಿಚಯಿಸುತ್ತಿದ್ದೇನೆ’ ಎಂದು ಸಿರಿ ರಾಜು ಇನ್ಸ್ಟಾಗ್ರಾಮ್ ನಲ್ಲಿ ಸಾಗರ್ ಬಿಳಿಗೌಡ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ.
View this post on Instagram
.ಸದ್ಯದಲ್ಲೇ ಬೆಂಗಳೂರಿನಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದು, ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ. ಸಾಕಷ್ಟು ಸಮಯದಿಂದ ಸಾಗರ್ ಮತ್ತು ಸಿರಿ ರಾಜು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಇಬ್ಬರು ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ..
ಇನ್ನೂ ಸಿರಿ ರಾಜು ಕೂಡ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ ಅಭಿನಯದ ಹೊಸ ಚಿತ್ರದಲ್ಲಿ ಸಿರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
