fbpx
ಸಮಾಚಾರ

ನಟ ಕೋಮಲ್ ಅವರಿಗೆ ಕೇತುದೆಸೆ ನಡೆಯುತ್ತಿದೆ! 7 ವರ್ಷ ಸಿನಿಮಾ ರಂಗದಿಂದ ದೂರವಿರಲು ಸೂಚಿಸಿದ ಜಗ್ಗೇಶ್

ಹಾಸ್ಯನಟ ಕೋಮಲ್ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕೊನೆಯದಾಗಿ ಇವರು ಕೆಂಪೇಗೌಡ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ನಂತರ ಸುಮಾರು 4 ರಿಂದ 5 ವರ್ಷಗಳ ಕಾಲ ಇವರು ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದರಲಿಲ್ಲ. ಹೀಗಾಗಿ ಸಹಜವಾಗಿ ಅಭಿಮಾನಿಗಳಿಗೆ ಇದರ ಕುರಿತು ಅನುಮಾನವಿತ್ತು. ಆದರೆ ಇದೀಗ ಇದಕ್ಕೆ ಉತ್ತರ ಸಿಕ್ಕಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ರಂಗ ಪ್ರಪಂಚದಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ. ಆದರೆ ಇಂತಹ ಸಮಯದಲ್ಲಿ ಕೋಮಲ್ ಸೈಲೆಂಟ್ ಆಗಿರುವುದು ಇವರ ಅಭಿಮಾನಿಗಳಿಗೆ ಬಹಳಷ್ಟು ಬೇಸರವನ್ನು ತಂದಿತ್ತು. ಆದರೆ ಇದಕ್ಕೆ ಅಸಲಿ ಕಾರಣವೇನೆಂದರೆ ನಟ ಕೋಮಲ್ ಅವರಿಗೆ ಕೇತುದೆಸೆ ಇತ್ತಂತೆ. ಹಾಗಾಗಿ ಸಿನಿಮಾದಲ್ಲಿ ನಟಿಸಬೇಡ ಎಂದು ಸ್ವತಃ ಜಗ್ಗೇಶ್ ಅವರೇ ಹೇಳಿದ್ದರಂತೆ. ಹೀಗಾಗಿ ಕೋಮಲ್ ತಮ್ಮ ಸಹೋದರನ ಮಾತಿಗೆ ಒಪ್ಪಿ ಸಿನಿಮಾ ರಂಗದಿಂದ ದೂರವಿದ್ದಾರೆ. ಈ ಕುರಿತು ಸ್ವತಃ ಜಗ್ಗೇಶ್ ಅವರೇ ತಿಳಿಸಿದ್ದಾರೆ.

‘ಕೋಮಲ್ ಗೆ ಕೇತುದೆಸೆ ಇತ್ತು. ಈ ವೇಳೆಯಲ್ಲಿ ಏನೇ ಕೆಲಸ ಮಾಡಿದರೂ, ಅದರಲ್ಲಿ ಯಶಸ್ಸು ಕಾಣುವುದಿಲ್ಲೆ ಎ‍ನ್ನುವುದು ಗೊತ್ತಿತ್ತು. ಹಾಗಾಗಿ ನಾನೇ ಸಿನಿಮಾ ಮಾಡಬೇಡ ಅಂತ ಕೋಮಲ್ ಗೆ ಹೇಳಿದ್ದೆ. ಇದೀಗ ಕೇತುದೆಸೆ ಕಳೆದಿದೆ. ಇನ್ಮುಂದೆ ಕೋಮಲ್ ಸಿನಿಮಾಗಳು ಹಿಟ್ ಆಗುತ್ತವೆ. ಸಿನಿಮಾ ರಂಗದಲ್ಲಿ ಮತ್ತೆ ಕೋಮಲ್ ಅಗಾಧವಾಗಿ ಬೆಳೆಯುತ್ತಾರೆ ಎಂದು ತಮ್ಮನ ಬಗ್ಗೆ ಜಗ್ಗೇಶ್ ಮಾತನಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top