fbpx
ಸಮಾಚಾರ

ತಮ್ಮ ಹೆಂಡತಿ ಪರಿಮಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ನಟ ಜಗ್ಗೇಶ್! ಪೋಸ್ಟ್ ವೈರಲ್

ನಟ ಜಗ್ಗೇಶ್ ಸಿನಿಮಾ ರಂಗದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಆಕ್ಟಿವ್ ಆಗಿದ್ದಾರೆ. ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಲವಾರು ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಅವರು ತಾವು 10 ನೇ ತರಗತಿಯಲ್ಲಿ ತೆಗೆದ ಅಂಕಗಳನ್ನು ಶೇರ್ ಮಾಡಿದ್ದರು. ಇದೀಗ ತಮ್ಮ ಹೆಂಡತಿ ಪರಿಮಳ ಅವರ ಕುರಿತು ಒಂದು ಪೋಸ್ಟ್ ಮಾಡಿದ್ದಾರೆ.

 

 

ನಟ ಜಗ್ಗೇಶ್ ಫೇಸ್ಬುಕ್ ನಲ್ಲಿ ” ಮಡದಿ ಪರಿಮಳ SSLC ಓದಿದಾಗ ನನ್ನ ಮದುವೆ ಆದದ್ದು. ಪರಿಮಳ ನನ್ನ ಕೇಳಿಕೊಂಡದ್ದು ಓದಿಸು ಎಂದು. ನಾನು ಮಾತು ಕೊಟ್ಟದ್ದು ಆಕೆಗೆ ಎಲ್ಲಿಯವರೆಗೂ ಓದುತ್ತೀಯ ಅಲ್ಲಿಯವರೆಗೂ ಓದಿಸುವೆ ಎಂದು. ಅಂದು 1985 ಕಾಸು, ಕೆಲಸ ಇಲ್ಲದ ದಿನಗಳು ಹೇಗೆ ಅವಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಕೆ ಮಾಡುವೆ ದೇವರೆ ಬಲ್ಲ ಎಂಬ ಚಿಂತೆ ಇತ್ತು. PUC ಯಲ್ಲಿ ಮೆರಿಟ್ ಪಡೆದು BE ARC ಗೆ BMS ನಲ್ಲಿ Seat ಪಡದೇಬಿಟ್ಟಳು.
ಅಲ್ಲಿಂದ ಇಲ್ಲಿಯವರೆಗೂ NUTRITION ನಲ್ಲೇ 5 Certification ಪಡೆದು ತನ್ನದೇ ಸ್ವಂತ ಸಂಸ್ಥೆ ನಡೆಸುತ್ತಿದ್ದಾಳೆ. ಪ್ರಪ್ರಥಮವಾಗಿ ವಿದೇಶ ನೆಲದಲ್ಲಿ ತನ್ನ ಪ್ರತಿಭೆ ಅನಾವರಣ ಮಾಡುವ ಅದೃಷ್ಟ ಅವಳ ಪ್ರತಿಭೆಗೆ ಒದಗಿ ಬಂದಿದೆ. ಗಂಡನಾಗಿ ನನಗೆ ಮಡದಿಯ ಮೇಲೆ ಹೆಮ್ಮೆ. ಈಸಬೇಕು ಇದ್ದು ಜಯಿಸಬೇಕು ಎಂಬುದು ನನ್ನ ಉಪದೇಶ ಆಕೆಗೆ. ನಿಮ್ಮ ಶುಭಹಾರೈಕೆಯು ಇರಲಿ ” ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಸುಮಾರು 5 ಸಾವಿರಕ್ಕಿಂತಲೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. ಜಗ್ಗೇಶ್ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಸಹ ಮೆಚ್ಚುಗೆಯ ಕಮೆಂಟ್ ಕೂಡ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top