fbpx
ಸಮಾಚಾರ

ನವೆಂಬರ್ 19: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 19, 2022 ಶನಿವಾರ
ವರ್ಷ : 1944, ಶೋಭಾಕೃತ
ತಿಂಗಳು : ಕಾರ್ತೀಕ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದಶಮೀ : Nov 18 09:33 am – Nov 19 10:30 am; ಏಕಾದಶೀ : Nov 19 10:30 am – Nov 20 10:41 am
ನಕ್ಷತ್ರ : ಉತ್ತರ: Nov 18 11:08 pm – Nov 20 12:14 am; ಹಸ್ತ: Nov 20 12:14 am – Nov 21 12:36 am
ಯೋಗ : ವಿಷ್ಕಂಭ: Nov 19 01:11 am – Nov 20 12:25 am; ಪ್ರೀತಿ: Nov 20 12:25 am – Nov 20 11:03 pm
ಕರಣ : ವಿಷ್ಟಿ: Nov 18 10:07 pm – Nov 19 10:30 am; ಬಾವ: Nov 19 10:30 am – Nov 19 10:41 pm; ಬಾಲವ: Nov 19 10:41 pm – Nov 20 10:41 am

Time to be Avoided
ರಾಹುಕಾಲ : 9:14 AM to 10:39 AM
ಯಮಗಂಡ : 1:30 PM to 2:55 PM
ದುರ್ಮುಹುರ್ತ : 07:54 AM to 08:40 AM
ವಿಷ : 08:46 AM to 10:23 AM
ಗುಳಿಕ : 6:23 AM to 7:48 AM

Good Time to be Used
ಅಮೃತಕಾಲ : 04:42 PM to 06:23 PM
ಅಭಿಜಿತ್ : 11:42 AM to 12:27 PM

Other Data
ಸೂರ್ಯೋದಯ : 6:23 AM
ಸುರ್ಯಾಸ್ತಮಯ : 5:46 PM

 

 

 

 

ಸ್ವಾಭಿಮಾನದಿಂದ ಬದುಕಬೇಕೆನ್ನುವ ನೀವು ಇನ್ನೊಬ್ಬರ ಹಂಗಿನಲ್ಲಿ ಬದುಕಲು ಇಷ್ಟಪಡುವುದಿಲ್ಲ. ಇದನ್ನೇ ಇತರರು ಅಹಂಕಾರ ಎಂದು ಭಾವಿಸುವರು. ಬೇರೆಯವರು ಏನಾದರೂ ಅಂದುಕೊಳ್ಳಲಿ. ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಬೇಡಿ. ಸಹನೆಯನ್ನು ರೂಢಿಸಿಕೊಳ್ಳಿರಿ.

 

ನಂಬಿದವರೇ ಇಂದು ಕೈ ಕೊಡುವ ಸಾಧ್ಯತೆ. ಬಂಧುಮಿತ್ರರೊಡನೆ ವಿರೋಧದಿಂದಾಗಿ ಜೀವನ ಮತ್ತು ವೃತ್ತಿಯ ಬಗ್ಗೆ ಹೆಚ್ಚು ಆಸಕ್ತಿ ತೋರುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಕುಟುಂಬದವರ ನೈತಿಕ ಬೆಂಬಲ ನಿಮಗೆ ಸ್ಫೂರ್ತಿದಾಯಕವಾಗಲಿದೆ

 

ಈ ದಿನ ನಿಮ್ಮ ಮಾತಿಗೆ ಬೆಲೆ ಬರುವುದು. ನಿಮ್ಮ ಹಿತಚಿಂತಕರನ್ನು ಅಥವಾ ಬೆಂಬಲಿಸುವ ಸ್ನೇಹಿತರನ್ನು ಸಂಪರ್ಕಿಸುವುದು ನಿಮಗೆ ಲಾಭವನ್ನುಂಟು ಮಾಡುವುದು. ದೂರದ ಪ್ರಯಾಣವನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಅಲ್ಪ ಹಿನ್ನಡೆ.

 

ನೂತನ ಪರಿಸರದಲ್ಲಿ ಕೆಲಸ ಮಾಡುವ ಸಾಧ್ಯತೆ ಇದ್ದು ಇದು ನಿಮ್ಮ ವೃತ್ತಿಗೆ ಪೂರಕವಾಗಿದೆ. ನಿಮ್ಮ ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿರಿ.

 

 

ಸಂಪಾದನೆಗಿಂತ ಖರ್ಚು ಹೆಚ್ಚು ಎಂದು ರೋಸಿ ಹೋಗಿದ್ದೀರಿ. ಆದರೆ ಇದಕ್ಕೆ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣವೆಂದು ಹೇಳಬೇಕಾಗಿಲ್ಲ. ಹೆಚ್ಚು ಹಣ ಬಂದಾಗ ಅದರಲ್ಲಿ ಸ್ವಲ್ಪ ಭಾಗವಾದರೂ ಉಳಿತಾಯ ಮಾಡಿರಿ.

 

 

ಯಾವುದೇ ರೀತಿಯ ಹೊಸ ಯೋಜನೆಗಳ ಬಗ್ಗೆ ದಿಢೀರನೆ ಸ್ಪಂದಿಸದಿರಿ ಮತ್ತು ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡದಿರಿ. ನಿಮ್ಮ ಒಳ್ಳೆಯತನದ ದುರುಪಯೋಗಪಡಿಸಿಕೊಳ್ಳಲು ಇತರರು ಕಾದಿರುತ್ತಾರೆ. ಇದಕ್ಕೆ ಆಸ್ಪದ ನೀಡದಿರಿ.

 

 

ಎಲ್ಲರನ್ನು ತೂಗಿಸಿಕೊಂಡು ಹೋಗುವಂತಹ ನಿಮ್ಮ ಜಾಣ್ಮೆಯು ವಿಶೇಷವಾಗಿ ಎಲ್ಲರಿಂದ ಪ್ರಶಂಸೆಗೆ ಒಳಗಾಗುವುದು. ಭಗವಂತನು ಕೊಟ್ಟಿರುವ ಈ ಜಾಣ್ಮೆಯನ್ನು ಶುಭ ಕಾರ್ಯಗಳಿಗೆ ಉಪಯೋಗಿಸಿಕೊಂಡಲ್ಲಿ ಹೆಚ್ಚು ಅನುಕೂಲವಾಗುವುದು.

 

 

ನಿಮ್ಮ ಇಡೀ ಕುಟುಂಬವೇ ಸಂತಸ ಪಡುವಂತಹ ಬೆಳವಣಿಗೆಯೊಂದನ್ನು ಇಂದಿನ ದಿನ ನೀವು ಕಾಣುವಿರಿ. ಮನೆಯಲ್ಲಿ ಹರ್ಷದ ವಾತಾವರಣ. ಮನೆಗೆ ನೂತನ ಸದಸ್ಯೆನ ಆಗಮನವಾಗುವುದು.

 

ವೃಥಾ ಅಪವಾದದಲ್ಲಿ ಕಳೆಯುವಂತಹ ಸೋಮಾರಿಯಾದ ಗೆಳೆಯರನ್ನು ದೂರವಿಡಿ. ಒಳ್ಳೆಯ ದಿನಗಳು ನಿಮಗೆ ಕಾದಿವೆ. ನಿಮ್ಮ ಕುಲದೇವರನ್ನು ಪ್ರಾರ್ಥಿಸಿರಿ. ನಿಮ್ಮ ಕಾರ್ಯ ಸಾಧನೆಯಲ್ಲಿ ಗೆಲುವು ಸಿಗಲು ಸಾಧ್ಯವಿದೆ.

 

 

ಅನೇಕ ರೀತಿಯ ಅಡೆತಡೆಗಳನ್ನು ದಾಟಿಕೊಂಡು ಬಂದಿದ್ದೀರಿ. ಸಂಕಲ್ಪಶಕ್ತಿಯಿಂದ ದೊಡ್ಡದೊಂದು ಕಾರ್ಯವನ್ನು ಮಾಡಿ ಈದಿನ ಗೆಲುವು ಸಾಧಿಸುವಿರಿ. ಗ್ರಹಗಳು ಇದಕ್ಕೆ ಪೂರಕವಾಗಿ ನಿಮಗೆ ಸಹಾಯ ನೀಡುವುದು

 

ಯಾರದೋ ಸಹಾಯ ಬರಬಹುದು ಎಂಬ ಅತಿಯಾದ ನಿರೀಕ್ಷೆ ಬೇಡ. ಮುನ್ನುಗ್ಗಿ ನೀವು ಅಂದುಕೊಂಡ ಕಾರ್ಯವನ್ನು ಆರಂಭಿಸಿರಿ. ಕೆಲಸ ಸಿದ್ಧಿಸುವುದು ಮತ್ತು ಆ ಕೆಲಸದಲ್ಲಿ ಜಯವೂ ಲಭಿಸುವುದು.

 

ದಾಯಾದಿಗಳು ವಿಶ್ವಾಸದ ದುರುಪಯೋಗ ಮಾಡಿಯಾರು. ಕಾರ್ಯಧಿರಂಗದಲ್ಲಿ ಉತ್ತಮ ಅಭಿವೃದ್ಧಿಯು ಗೋಚರಕ್ಕೆ ಬರುವುದು. ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top