fbpx
ಸಮಾಚಾರ

ಪುನೀತ್‌ ಪ್ರೇರಣೆ- ವಿಜಯ್‌ ದೇವರಕೊಂಡ ಮಾಡಿದ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ

ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ತಮ್ಮ ಜೀವನದಲ್ಲಿ ಅತ್ಯುತ್ತಮ ನಿರ್ಧಾರವೊಂದನ್ನು ತಗೆದುಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಗಲಿದ ನಂತರ ಅನೇಕರು ನೇತ್ರದಾನ, ಅಂಗಾಂಗ ದಾನ ಮಾಡಿದ್ದರು. ಇದೀಗ ಅಪ್ಪು ಅವರ ಪ್ರೇರಣೆಯೊಂದಿಗೆ ತೆಲುಗು ನಟ ವಿಜಯ್ ದೇವರಕೊಂಡ ಒಂದೊಳ್ಳೆ ನಿರ್ಧಾರ ತೆಗೆದುಕೊಂಡಿದ್ದಾರೆ. ಏನದು ಅಂತೀರಾ? ಮುಂದೆ ಓದಿ

ವಿಜಯ್ ದೇವರಕೊಂಡ ಅವರು ಸ್ವತಃ ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಸಿದ್ದಾರೆ. ವಿಜಯ್​ ದೇವರಕೊಂಡ ಮಾಡಿರುವ ಈ ಮಹತ್ವದ ಕಾರ್ಯಕ್ಕೆ ಅವರ ಕುಟುಂಬದವರು ಕೂಡ ಸಾಥ್​ ನೀಡಿದ್ದಾರೆ. ವಿಜಯ್​ ದೇವರಕೊಂಡ ಅವರ ತಾಯಿ ಮಾಧವಿ ಕೂಡ ಅಂಗಾಂಗ ದಾನದ ಸಂಕಲ್ಪ ಮಾಡಿದ್ದಾರೆ. ಆಸ್ಪತ್ರೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಜಯ್ ಅವರು ಅಂಗಾಂಗ ದಾನ ಮಾಡುತ್ತೇವೆ ಎಂದು ವಿಜಯ್ ದೇವರಕೊಂಡ ಹಾಗೂ ಅವರ ತಾಯಿ ಮಾತು ಕೊಟ್ಟು ಸಂಬಂಧಿಸಿದ ದಾಖಲೆಗಳಿಗೆ ಸಹಿ ಮಾಡಿದ್ದಾರೆ.

ನನಗೆ ಅಂಗಾಂಗ ದಾನ ಮಾಡುವ ಆಸೆ ಇದ್ದು ಈ ನಿಟ್ಟಿನಲ್ಲಿ ನನ್ನ ಅಂಗಾಗಗಳ ಕಾಳಜಿ ವಹಿಸುತ್ತೇನೆ. ನನ್ನ ಅಂಗಾಂಗ ಆರೋಗ್ಯವಾಗಿದ್ದರೆ ಅವುಗಳನ್ನು ಬಳಸಿಕೊಳ್ಳಬೇಕು. ಎಲ್ಲರೂ ಅಂಗಾಂದ ದಾನ ಮಾಡಲು ಮುಂದಾಗಿ ಎಂದು ಕರೆ ನೀಡಿದ್ದಾರೆ. ಅಪ್ಪು ಸಮಾಧಿಗೆ ಭೇಟಿ ಕೊಟ್ಟ ನಂತರ ವಿಜಯ್ ದೇವರಕೊಂಡ ಅವರು ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿರುವುದು ಅಪ್ಪು ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top