fbpx
ಸಮಾಚಾರ

ಸಾಹಸಸಿಂಹನ ಸ್ಮಾರಕಕ್ಕೆ ಕೊನೆಗೂ ಕೂಡಿಬಂತು ಕಾಲ: ವಿಷ್ಣು ಸ್ಮಾರಕ ಉದ್ಘಾಟನೆಗೆ ದಿನಾಂಕ ಫಿಕ್ಸ್

ಕನ್ನಡದ ಮೇರುನಟರಲ್ಲಿ ಒಬ್ಬರಾದ ಸಾಹಸಸಿಂಹ ಡಾ.ವಿಷ್ಣುವರ್ಧನ್ ದೈಹಿಕವಾಗಿ ನಮ್ಮಿಂದ ದೂರವಾಗಿ 13 ವರ್ಷಗಳು ಕಳೆದರೂ ಅಂಥಾ ಮಹಾನ್ ನಟನಿಗೆ ಸರ್ಕಾರಗಳಾಗಲಿ, ಚಿತ್ರರಂಗವಾಗಲಿ, ವಾಣಿಜ್ಯಮಂಡಳಿಯಾಗಲಿ ನೆಟ್ಟಗೆ ಒಂದು ಸ್ಮಾರಕ ಮಾಡಿಸುವ ಕೆಲಸ ಮಾಡಿಲ್ಲ ಎಂದು ವಿಷ್ಣು ಅಭಿಮಾನಿಗಳು ಇಷ್ಟು ದಿನ ಕೋಪಗೊಂಡಿದ್ದರು. ಇಂಥಾ ಅಸಂಖ್ಯಾತ ವಿಷ್ಣು ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್! ಮುಂದೆ ಓದಿ

ಹಲವು ವರ್ಷಗಳಿಂದ ವಿಷ್ಣು ಅಭಿಮಾನಿಗಳು ಕಾಯುತ್ತಿದ್ದ ವಿಷ್ಣು ಸ್ಮಾರಕಕ್ಕೆ ಕೊನೆಗೂ ಉದ್ಘಾಟನೆ ಭಾಗ್ಯ ಕೂಡಿ ಬಂದಿದೆ. ಮುಂದಿನ ತಿಂಗಳು ಡಿ.18ಕ್ಕೆ ಮೈಸೂರಿನಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಯಾಗಲಿದೆ. ದಿನಾಂಕ ನಿಗದಿಯಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮಾರಕ ಉದ್ಘಾಟಿಸಲಿದ್ದಾರೆ.

ಮೈಸೂರಿನ ಹಾಲಾಳು ಗ್ರಾಮದಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. ಸ್ಮಾರಕದ ಬಳಿ ವಿಷ್ಣುವರ್ಧನ್ ಸಿನಿ ಜರ್ನಿಯ ಆಡಿಯೋ ವಿಡಿಯೋ ಗ್ಯಾಲರಿ ಮತ್ತು ಪುಣೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಶಾಖೆ ಸಹ ಆರಂಭವಾಗುತ್ತಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ‌ ಸೇರಿದಂತೆ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ.

ಅಂದಹಾಗೆ ವಿಷ್ಣುವರ್ಧನ್ ಅವರು ತೀರಿಕೊಂಡಾಗ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲಾಗಿತ್ತು. ಆನಂತರ ಅದೇ ಜಾಗದಲ್ಲೇ ವಿಷ್ಣು ಸ್ಮಾರಕ ನಿರ್ಮಾಣ ಮಾಡುವುದಾಗಿ ಅಂದಿನ ಸರ್ಕಾರ ಸಹ ಘೋಷಣೆ ಮಾಡಿತ್ತು.. ಆದರೆ ಆ ಜಾಗದ ವಿಚಾರವಾಗಿ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿರುವ ಕಾರಣ ಅಭಿಮಾನ್ ಸ್ಟುಡಿಯೋದಲ್ಲಿ ಹತ್ತಾರು ವರ್ಷ ಕಳೆದರೂ ಸ್ಮಾರಕ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ವಿಷ್ಣು ಅಭಿಮಾನಿಗಳು ಈ ವಿಚಾರವಾಗಿ ಎಷ್ಟೇ ಹೋರಾಟ ನಡೆಸಿದರೂ ಕೂಡ ಪ್ರಯೋಜನವಾಗಲಿಲ್ಲ. ಬಳಿಕ ವಿಷ್ಣು ಸ್ಮಾರಕವನ್ನು ಮೈಸೂರಿಗೆ ಸ್ಥಳಾಂತರ ಮಾಡಲು ವಿಷ್ಣು ಕುಟುಂಬ ತೀರ್ಮಾನಿಸಿ ಇದೀಗ ಹದಿನಾಲ್ಕು ವರ್ಷದ ನಂತರ ಸ್ಮಾರಕ ನಿರ್ಮಾಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top