fbpx
ಸಮಾಚಾರ

ಆರ್​ಸಿಬಿಗೆ ಡಿವಿಲಿಯರ್ಸ್ ಎಂಟ್ರಿ ಖಚಿತ; ಅಧಿಕೃತ ಹೇಳಿಕೆ ನೀಡಿದ ಫ್ರಾಂಚೈಸಿ..!

ಕ್ರಿಕೆಟ್‌ ಲೋಕದ ದಿಗ್ಗಜ, ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿ’ವಿಲಿಯರ್ಸ್‌ ಅವರಿಗೂ ಮತ್ತು ಬೆಂಗಳೂರಿಗೂ ಅವಿನಾಭಾವ ಸಂಭಂದವಿದೆ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಸುಮಾರು ಹತ್ತು ವರ್ಷ ಕಣಕ್ಕಿಳಿದಿದ್ದ ಎಬಿಡಿ ಕ್ರಿಕೆಟ್ ಪ್ರೇಮಿಗಳ ಅಚ್ಚುಮೆಚ್ಚು. ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಾದ್ಯಂತ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

 

 

ಎಬಿ ಡಿ ವಿಲಿಯರ್ಸ್2018 ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಹಾಗಿದ್ದರೂ ಐಪಿಎಲ್, ಪಿಎಸ್ಎಲ್ ಸೇರಿ ಕೆಲವು ದೇಶೀ ಟೂರ್ನಿಮೆಂಟ್ ಗಳಲ್ಲಿ ಭಾಗವಹಿಸಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದ್ದರು. ಆದರೆ ಕಳೆದ ವರ್ಷ ಇದೇ ದಿನ ಅಂದರೆ 19-11-2021ರಂದು ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ಗೂ ಗುಡ್ ಬೈ ಹೇಳಿ ಅಭಿಮಾನಿಗಳಿಗೆ ಮತ್ತೆ ಆಘಾತ ನೀಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಲ್ಲದೆ ಇದ್ದರೂ ಐಪಿಎಲ್ ನಂತಹ ದೇಶೀಯ ಟೂರ್ನಿಗಳಲ್ಲಿ ಎಬಿಡಿ ಆತ ನೋಡಿ ಕಣ್ತುಂಬಿಕೊಳ್ಳುತ್ತಿದ್ದ ಕ್ರಿಕೆಟ್ ಪ್ರೇಮಿಗಳು ಈಗ ಅದು ಸಾದ್ಯವಾಗುವುದಿಲ್ಲವಲ್ಲ ಎಂದು ಈಗಲೂ ಕೊರಗುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ಕಾಣಬಹುದು.

 

 

ಇದೀಗ ಬಂದಿರೋ ಸುದ್ದಿ ಪ್ರಕಾರ ಡಿ ವಿಲಿಯರ್ಸ್ ಸದ್ಯದಲ್ಲೇ ಆರ್​ಸಿಬಿ ತಂಡಕ್ಕೆ ಮರಳಲಿದ್ದಾರಂತೆ. ಆದರೆ ಆಟಗಾರನಾಗಿ ಅಲ್ಲ ಬದಲಾಗಿ ಸಹಾಯಕ ಸಿಬ್ಬಂದಿಯಾಗಿ. ಈ ವಿಚಾರವನ್ನು ಸ್ವತಃ RCB ತಂಡವೇ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಎಬಿಡಿ ಎಲ್ಲಾ ಸ್ವರೂಪದ ಕ್ರಿಕೆಟ್ ಗೆ ವಿದಾಯ ಹೇಳಿ ಇಂದಿಗೆ ಸರಿಯಾಗಿ ಒಂದು ವರ್ಷ. ಈ ಹಿನ್ನಲೆಯಲ್ಲಿ ಎಬಿಯನ್ನು ನೆನೆದು ಪೋಸ್ಟ್ ಮಾಡಿರುವ RCB “ಅಬ್ರಹಾಂ ಬೆಂಜಮಿನ್ ಡಿ ವಿಲಿಯರ್ಸ್ ಫಾರ್ ಎವರ್! ❤️ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ತಂದ ವ್ಯಕ್ತಿ, ನಮ್ಮ ನೆಚ್ಚಿನ ಸೂಪರ್ ಹೀರೋ ಎಬಿಡಿ ವಿಲಿಯರ್ಸ್ #ಕಳೆದ ವರ್ಷ ಈ ದಿನದಂದು ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಗೆ ನಿವೃತ್ತಿ ಘೋಷಿಸಿದರು. ಆದರೆ… ಅವರು ಶೀಘ್ರದಲ್ಲೇ ಬೆಂಗಳೂರಿಗೆ ಹಿಂತಿರುಗುತ್ತಾರೆ!” ಎಂದು ಬರೆದುಕೊಂಡಿದೆ.

ವಾಸ್ತವವಾಗಿ, ಎಬಿಡಿ ತನ್ನ ನಿವೃತ್ತಿಯನ್ನು ಘೋಷಿಸುವ ಸಮಯದಲ್ಲಿ, 2023 ರ ಸೀಸನ್​ನಲ್ಲಿ ಮತ್ತೆ RCB ಗೆ ಮರುಸೇರ್ಪಡೆಯಾಗುವುದಾಗಿ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top