fbpx
ಸಮಾಚಾರ

ಅಫ್ಘಾನ್ ದೇಶಕ್ಕೆ ತೆರಳಿದೆ ಕನ್ನಡದ ಯೌಟ್ಯೂಬ್ ವ್ಲಾಗ್ಗರ್ ಡಾ ಬ್ರೋ (Dr. Bro)! ಎಲ್ರೂ ಇಲ್ಲಿಗೆ ಹೋಗ್ತಿರೋದಕ್ಕೆ ಕಾರಣವೇನು ಗೊತ್ತಾ?

ಅಫ್ಘಾನಿಸ್ಥಾನ ಈ ಹೆಸರು ಕೇಳಿದರೆ ಒಂದು ಕ್ಷಣ ಮೈ ನಡುಗುತ್ತದೆ. ಕಳೆದ ವರ್ಷ ಈ ನಗರದಲ್ಲಿ ನಡೆದ ವಿಷಯ ನಮ್ಮ ಕಣ್ಣ ಮುಂದೆ ಬರುತ್ತದೆ. ಇದೀಗ ಅಫ್ಘಾನಿಸ್ಥಾನ ತಾಲಿಬಾನರ ಕೈವಶದಲ್ಲಿರುವುದು ನಮಗೆಲ್ಲ ತಿಳಿದಿದೆ. ಹೀಗಾಗಿ ಈ ದೇಶಕ್ಕೆ ಹೋಗಲು ಪ್ರತಿಯೊಬ್ಬರೂ ಸಹ ಹೆದರುತ್ತಾರೆ. ಹೋದವರು ಜೀವಂತ ವಾಪಾಸ್ ಬರೋದು ಡೌಟ್ ಎಂದು ಹೇಳಬಹುದು. ಆದರೆ ನಮ್ಮ ಕರ್ನಾಟಕದ ಡಾ ಬ್ರೋ ಎಂಬ ಯುಟ್ಯೂಬರ್ ಅಫ್ಘಾನಿಸ್ಥಾನಕ್ಕೆ ತೆರಳಿ ವ್ಲಾಗ್ ಮಾಡಿದ್ದಾರೆ.

ಅಫ್ಘಾನಿಸ್ಥಾನ ಇದೀಗ ಸಂಪೂರ್ಣ ತಾಲಿಬಾನರ ಕೈವಶದಲ್ಲಿದೆ. ಹೀಗಾಗಿ ಇಲ್ಲಿಗೆ ತೆರಳಲು ಪ್ರತಿಯೊಬ್ಬರಿಗೂ ಸಹಜವಾಗಿ ಭಯವಾಗುತ್ತದೆ. ಅಫ್ಘಾನ್​ ಜೊತೆ ಇದ್ದ ಸಂಬಂಧವನ್ನು ಎಲ್ಲ ರಾಷ್ಟ್ರಗಳು ಕೂಡ ಕಟ್ ಮಾಡಿಕೊಂಡಿದೆ. ಆದರೆ ಇಂತ ಕೆಟ್ಟ ಪರಿಸ್ಥಿತಿ ಇದ್ದರು ಯುಟ್ಯೂಬರ್ ಗಳು ಅಲ್ಲಿಗೆ ಹೋಗಿ ಹೇಗೆ ವ್ಲಾಗ್ ಮಾಡಿದರು ಎಂಬ ಅನುಮಾನ ನಿಮಗೆ ಬರುವುದು ಸಹಜ. ಆದರೆ ಇದಕ್ಕೆ ಉತ್ತರವಿದೆ.

ಅಫ್ಘಾನಿಸ್ಥಾನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಸಹ ಕಾತುರವಿರುತ್ತದೆ. ಹೀಗಾಗಿ ಕೆಲವು ಯುಟ್ಯೂಬರ್ ಗಳು ಅಫ್ಘಾನಿಸ್ಥಾನಕ್ಕೆ ತೆರಳಿ ವಿಡಿಯೋ ಮಾಡಿದ್ದಾರೆ. ಭಾರತದಿಂದ ನೀವು ನೇರವಾಗಿ ಅಫ್ಘನ್​ ದೇಶಕ್ಕೆ ಹೋಗುವುದಕ್ಕೆ ಸಾಧ್ಯವಿಲ್ಲ. ನೀವು ಗಲ್ಫ್​ ರಾಷ್ಟ್ರಕ್ಕೆ ತೆರಳಿ ಅಲ್ಲಿಂದ ಅಫ್ಘನ್​ಗೆ ಹೋಗುತ್ತಿದ್ದಾರೆ.

ನಿಮನ್ನು ಅಫ್ಘನ್​ಗೆ ಕರೆದುಕೊಂಡಲು ಹೋಗಲು ಅಲ್ಲಿನ ಏಜೆನ್ಸಿಗಳು ರೆಡಿ ಇದ್ದಾರೆ. ಸದ್ಯಕ್ಕೆ ಕವೇಲ ಗಂಡುಮಕ್ಕಳಿಗಷ್ಟೇ ಅಫ್ಘನ್​ಗೆ ಹೋಗಲು ಅನುಮತಿ ಇದೆ. ನಿಮ್ಮ ಜೊತೆ ಅವರೇ ಬಂದು ಗೈಡ್​ ಮಾಡುತ್ತಾರೆ. ಆಫ್ಘನ್​ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ನಿಮಗೆ ತಾಲಿಬಾನ್​ ಅನುಮತಿ ಪತ್ರ ಕೂಡ ಸಿಗುತ್ತೆ. ನಿಮ್ಮ ಕೈಗೆ ತಾಲಿಬಾನರ ಅನುಮತಿ ಪಾತ್ರ ಸಿಕ್ಕಮೇಲೆ ನೀವೇ ರಾಜ ಎಂದು ಹೇಳಬಹುದು. ನಿಮ್ಮನ್ನು ಯಾರೂ ಏನೂ ಕೇಳುವುದಿಲ್ಲ. ನಿಮ್ಮ ಗೈಡ್ ನಿಮ್ಮನ್ನು ತಾಲಿಬಾನರ ಬಳಿ ಸಹ ಕರೆದುಕೊಂಡು ಹೋಗುತ್ತಾರೆ. ಇದಕ್ಕೆ ನಿಮಗೆ ಒಂದು ದಿನಕ್ಕೆ 100 ಡಾಲರ್​ ಚಾರ್ಜ್ ಮಾಡುತ್ತಾರೆ. ಇದಲ್ಲದೆ ನಿಮ್ಮ ಊಟ, ವಸತಿ ಹೀಗೆ ಅಂತ ಒಂದು ನೂರು ನೂರೈವತ್ತು ಡಾಲರ್ ಖರ್ಚಾಗಬಹುದು.

ತಾಲಿಬಾನಿನಲ್ಲಿ ನೋಡಲು ಏನಿದೆ?
ಇಷ್ಟೊಂದು ಕಷ್ಟ ಪಟ್ಟು ತಾಲಿಬಾನ್ ಗೆ ಹೋಗುತ್ತಾರಲ್ಲಾ, ಅಲ್ಲಿ ನೋಡಲು ಅಂತದ್ದು ಏನಿದೆ ಎಂದು ನಿಮಗೂ ಸಹ ಅನುಮಾನ ಬರುತ್ತದೆ. ಆದರೆ ಸತ್ಯಂಶ ಏನೆಂದರೆ ತಾಲಿಬಾನಿನಲ್ಲಿ ನೋಡಲು ಸುಂದರವಾದ ತಾಣಗಳು ಯಾವುದು ಇಲ್ಲ. ಶೀತಲಗೊಂಡಿರುವ ಕಟ್ಟಡಗಳು, ಮುರುಕಲು ರಸ್ತೆ, ತಾಲಿಬಾನಿಗಳು, ಗನ್​, ದೊಡ್ಡ ದೊಡ್ಡ ಬಂಡೆಗಳು ಬಿಟ್ಟರೆ ಅಲ್ಲೇನು ಇಲ್ಲ.

ಇಷ್ಟೆಲ್ಲಾ ಹೇಳಿದಮೇಲೂ ನಿಮಗೆ ಅಫ್ಘಾನ್ ನಗರವನ್ನು ನೋಡಲು ಆಸೆಯಾದರು ನೀವು ಸಹ ಹೋಗಿ ಭೇಟಿ ಮಾಡಬಹುದು. ಇದಕ್ಕೆ ನಿಮಗೆ ಸುಮಾರು 1 ರಿಂದ 2 ಲಕ್ಷ ಖರ್ಚಾಗಬಹುದು. ಆದರೆ ನೀವು ಹೋದಮೇಲೆ ವಾಪಸ್ಸು ಜೀವಂತವಾಗಿ ಬರುವ ಜವಾಬ್ದಾರಿ ನಿಮ್ಮದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top