fbpx
ಸಮಾಚಾರ

ಅಮ್ಮ ಆಗ್ತಿದ್ದಾರೆ ನಿಕ್ಕಿ ಗಲ್ರಾಣಿ? ಸ್ಪಷ್ಟನೆ ನೀಡಿದ ನಟಿ

ನಟ ಆದಿ ಪಿನಿಸೆಟ್ಟಿ ಮತ್ತು ನಟಿ ನಿಕ್ಕಿ ಗಲ್ರಾನಿ ಈ ವರ್ಷದ ಮೇ ತಿಂಗಳ ಆರಂಭದಲ್ಲಿ ವಿವಾಹವಾಗಿದ್ದರು. ಈ ದಂಪತಿ ಹಾಯಾಗಿ ಸಂಸಾರ ನಡೆಸಿಕೊಂಡು ಇದ್ದಾರೆ.. ಇದೀಗ ಈ ಸ್ಟಾರ್ ದಂಪತಿಗೆ ಸಂಬಂಧಿಸಿದಂತೆ ಹೊಸ ವಿಚಾರವೊಂದು ಹರಿದಾಡುತ್ತಿದ್ದು ಆದಿ ಪಿನಿಸೆಟ್ಟಿ ಮತ್ತು ನಟಿ ನಿಕ್ಕಿ ಗಲ್ರಾನಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

 

 

ನೆನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ನಿಕ್ಕಿ ಗಲ್ರಾಣಿ ಅವರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರವಾಗಿ ಇದೀಗ ಸ್ವತಃ ನಿಕ್ಕಿ ಗಲ್ರಾಣಿ ಅವರೇ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದು ಹರಿದಾಡುತ್ತಿರುವ ಈ ವಿಚಾರ ಸುಳ್ಳು ಎಂದು ಹೇಳಿದ್ದಾರೆ.

“ಈ ದೊಡ್ಡ ಸುದ್ದಿಯ ಬಗ್ಗೆ ನನಗೇ ತಿಳಿದಿಲ್ಲ, ಈಗ ನನ್ನ ಪರವಾಗಿ ಕೆಲವರು ವೈರಲ್ ಮಾಡಿದ್ದಾರೆ, ಆದರೆ ಈ ಸುದ್ದಿ ಸುಳ್ಳು” ಎಂದು ನಿಕ್ಕಿ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ನಿಕ್ಕಿ ಅವರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಗೆ ನಟಿ ತೆರೆ ಎಳೆದಿದ್ದಾರೆ.

ಅಂದಹಾಗೆ ನಿಕ್ಕಿ ಮತ್ತು ಆದಿ ಈ ಮೊದಲಿನಿಂದಲೂ ಡೇಟಿಂಗ್ ಮಾಡುತ್ತಿದ್ದರು. ಮಾರ್ಚ್​ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹೊಸ ಜೀವನ ಆರಂಭಿಸಲು ಮುನ್ನುಡಿ ಬರೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top