fbpx
ಸಮಾಚಾರ

ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಗೋಮೂತ್ರದಿಂದ ಟ್ಯಾಂಕ್ ಸ್ವಚ್ಛ: ಗ್ರಾಮದ ಎಲ್ಲಾ‌ ತೊಂಬೆಗಳಲ್ಲಿ ನೀರು‌ ಕುಡಿದ ದಲಿತ ಯುವಕರು

ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ಮೇಲ್ವರ್ಗದ ಸದಸ್ಯರು ದಲಿತ ಮಹಿಳೆಯೊಬ್ಬರು ನೀರು ಕುಡಿದರೆಂದು ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಿಸಿರುವುದನ್ನು ದಲಿತ ಯುವಕರು ಖಂಡಿಸಿದ್ದು, ಭಾನುವಾರ ಗ್ರಾಮಕ್ಕೆ ತೆರಳಿ ಅಲ್ಲಿನ ಎಲ್ಲಾ ಟ್ಯಾಂಕ್ ಗಳಲ್ಲಿನ ನೀರನ್ನು ಕುಡಿದಿದ್ದಾರೆ.

ಘಟನೆಯು ತಾಲ್ಲೂಕು ಆಡಳಿತದ ಗಮನಕ್ಕೆ ಬಂದಿದ್ದು, ಸ್ಥಳೀಯ ಕಂದಾಯ ನಿರೀಕ್ಷಕ ಸೇರಿದಂತೆ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ತಹಶೀಲ್ದಾರ್‌ಗೆ ವರದಿ ನೀಡಿದ್ದಾರೆ. ಎಲ್ಲಾ ತೊಂಬೆ ನಲ್ಲಿಗಳಿಗೆ ತೆರಳಿ ದಲಿತ ಯುವಕರಿಂದ ನೀರು ಕುಡಿಸಿದ್ದಾರೆ.‌ ಜೊತೆಗೆ, ತೊಂಬೆಗಳ ಮೇಲೆ ‘ ಇದು ಸಾರ್ವಜನಿಕ ಆಸ್ತಿಯಾಗಿದ್ದು, ಎಲ್ಲಾ ಸಮುದಾಯದವರು ಇದನ್ನು ಬಳಸಬಹುದು’ ಎಂದು ಬರೆಸಿದ್ದಾರೆ.

ಏನಿದು ಘಟನೆ?
ದಲಿತ ಸಮುದಾಯದ ಮದುವೆಯೊಂದಕ್ಕೆ ಎಚ್‌ಡಿ ಕೋಟೆ ತಾಲೂಕಿನ ಸರಗೂರಿನಿಂದ ಬಂದಿದ್ದ ಮಹಿಳೆಯೊಬ್ಬರು ವಾಪಾಸ್‌ ತೆರಳುವಾಗ ಮೇಲ್ವರ್ಗದವರು ವಾಸಿಸುವ ಬೀದಿಯಲ್ಲಿದ್ದ ಟ್ಯಾಂಕ್ ನ ನೀರು ಕುಡಿದಿದ್ದಾರೆ. ಇದನ್ನು ಗಮನಿಸಿದ ಅದೇ ಬೀದಿಯವರು ಇಡೀ ಟ್ಯಾಂಕ್ ನೀರನ್ನು ಖಾಲಿ ಮಾಡಿಸಿ ಗಂಜಲ ಹಾಕಿ ತೊಳೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top