fbpx
ಸಮಾಚಾರ

ನವೆಂಬರ್ 22: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 20, 2022 ಭಾನುವಾರ
ವರ್ಷ : 1944, ಶೋಭಾಕೃತ
ತಿಂಗಳು : ಕಾರ್ತೀಕ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಏಕಾದಶೀ : Nov 19 10:30 am – Nov 20 10:41 am; ದ್ವಾದಶೀ : Nov 20 10:41 am – Nov 21 10:07 am
ನಕ್ಷತ್ರ : ಹಸ್ತ: Nov 20 12:14 am – Nov 21 12:36 am; ಚಿತ್ತ: Nov 21 12:36 am – Nov 22 12:14 am
ಯೋಗ : ಪ್ರೀತಿ: Nov 20 12:25 am – Nov 20 11:03 pm; ಆಯುಷ್ಮಾನ್: Nov 20 11:03 pm – Nov 21 09:06 pm
ಕರಣ : ಬಾಲವ: Nov 19 10:41 pm – Nov 20 10:41 am; ಕುಲವ: Nov 20 10:41 am – Nov 20 10:30 pm; ತೈತುಲ: Nov 20 10:30 pm – Nov 21 10:07 am

Time to be Avoided
ರಾಹುಕಾಲ : 4:20 PM to 5:46 PM
ಯಮಗಂಡ : 12:05 PM to 1:30 PM
ದುರ್ಮುಹುರ್ತ : 04:15 PM to 05:00 PM
ವಿಷ : 08:29 AM to 10:03 AM
ಗುಳಿಕ : 2:55 PM to 4:20 PM

Good Time to be Used
ಅಮೃತಕಾಲ : 06:30 PM to 08:08 PM
ಅಭಿಜಿತ್ : 11:42 AM to 12:27 PM

Other Data
ಸೂರ್ಯೋದಯ : 6:24 AM
ಸುರ್ಯಾಸ್ತಮಯ : 5:46 PM

 

 

 

 

ನಿಮ್ಮ ಸೀದಾಸಾದಾ ಗುಣ ನಿಮ್ಮನ್ನು ಎಲ್ಲರೂ ಗೌರವಾದರಗಳಿಂದ ಕಾಣುವಂತೆ ಮಾಡುವುದು. ಒಂದು ದೊಡ್ಡ ಸಮಸ್ಯೆ ಮಂಜಿನಂತೆ ಕರಗಿ ಹೋಗುವುದರಿಂದ ಮನಸ್ಸು ನಿರಾಳವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು.

 

ಮಕ್ಕಳೇ ಮಾಣಿಕ್ಯ ಎಂದರು ಹಿರಿಯರು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳೇ ಪೀಡಕರು ಆಗಿ ಮನಸ್ಸಿಗೆ ಘಾಸಿಯನ್ನುಂಟು ಮಾಡುವರು. ಹಾಗಾಗಿ ಭಗವಂತನನ್ನು ಅನನ್ಯ ಭಕ್ತಿಯಿಂದ ಜಪಿಸಿ ಮಾನಸಿಕ ನೆಮ್ಮದಿ ಪಡೆಯಿರಿ.

 

ನಿಮಗೆ ನೂರಾರು ಕಡೆಗಳಿಂದ ಪ್ರಶಂಸೆಗಳು ಬರುವ ಸಾಧ್ಯತೆ ಅಧಿಕ ವಾಗಿರುವುದು. ನೀವು ಮಂಡಿಸಿದ ಪ್ರಬಂಧ ಮೇಲಧಿಕಾರಿಗಳಿಂದ ಒಪ್ಪಿಗೆ ಪಡೆಯುವುದರಿಂದ ಸಂತಸದ ಕ್ಷ ಣಗಳನ್ನು ಅನುಭವಿಸುವಿರಿ.

 

ವಿಶೇಷ ಯೋಜನೆಗಳನ್ನು ಕೈಗೊಂಡು ಅದರಲ್ಲಿ ಯಶಸ್ಸು ಹೊಂದುವ ಕನಸು ಕಾಣುವಿರಿ. ನಿಮ್ಮ ಕನಸು ನನಸಾಗುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿ ಮತ್ತು ಆಂಜನೇಯ ದೇವಸ್ಥಾನದಲ್ಲಿ ಎಳ್ಳುದೀಪ ಹಚ್ಚಿ.

 

 

ಮನೆ ಒಳಗಿನ ಅಸಮಾಧಾನದ ಹೊಗೆ ನಿಮಗೆ ಉಸಿರು ಕಟ್ಟಿಸುವ ವಾತಾವರಣವನ್ನು ಸೃಷ್ಟಿಸಿದೆ. ಆದಷ್ಟು ದೇವತಾ ಕ್ಷೇತ್ರಗಳಿಗೆ ಹೋಗಿ ಬನ್ನಿ. ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಿ.

 

 

ಖರ್ಚಿನ ದಾರಿಗಾಗಿ ನೂರೆಂಟು ರೀತಿಯ ಪಟ್ಟಿ ನಿಮ್ಮ ಎದುರಿಗೆ ಬಂದು ನಿಲ್ಲುವುದು. ಅತ್ಯಂತ ತುರ್ತು ಸಮಯದಲ್ಲಿ ಮಾತ್ರ ಹಣವನ್ನು ಖರ್ಚು ಮಾಡುವುದು ಒಳ್ಳೆಯದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ

 

 

ಆರೋಗ್ಯವೇ ಭಾಗ್ಯ ಎಂಬುದನ್ನು ನೆನೆಪಿನಲ್ಲಿಟ್ಟುಕೊಂಡರೆ ಸಾಲದು. ಅದಕ್ಕಾಗಿ ಸೂಕ್ತ ಯೋಗ , ಪ್ರಾಣಾಯಾಮಗಳನ್ನು ಮಾಡುವ ಮೂಲಕ ದೇಹ ದಂಡಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

 

 

ಕಾರ್ಯ ಸಾಧನೆಗೆ ನಿಮ್ಮ ತಾಳ್ಮೆಯೆ ಉತ್ತಮ ಅಡಿಪಾಯ. ಹಾಗಾಗಿ ಎದುರಾಗುವ ಸಮಸ್ಯೆಗಳನ್ನು ನಗು ಮುಖದಿಂದಲೇ ಸ್ವೀಕರಿಸಿ. ಕಷ್ಟಗಳು ಮನುಜನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುವುವು.

 

ಅಡಿಕೆ ಕದ್ದಮಾನ ಆನೆ ಕೊಟ್ಟರೂ ಹೋಗದು ಎಂಬಂತೆ ನೀವು ತಮಾಷೆಗಾಗಿ ಮಾತಾಡಿದ ಒಂದು ಪ್ರಸಂಗ ನಿಮ್ಮ ಗೌರವಕ್ಕೆ ಕುಂದು ತರಬಹುದು. ಹಿರಿಯರಾಗಿ ಹಿರಿತನದಿಂದ ಬಾಳ್ವೆ ನಡೆಸಿ.

 

 

ಮಾತೇ ಮುತ್ತು ಮಾತೇ ಶತ್ರು. ಹಾಗಾಗಿ ಬೇಡದ ಮಾತುಗಳನ್ನು ಮಾತನಾಡಿ ಸುಮ್ಮನೆ ಕಿರಿಕಿರಿಗೆ ಸಿಕ್ಕಿಹಾಕಿಕೊಳ್ಳದಿರಿ. ಕ್ಲಿಷ್ಟ ಸನ್ನಿವೇಶಗಳನ್ನು ಜಾಣ್ಮೆಯಿಂದ ಎದುರಿಸುವುದು ಒಳ್ಳೆಯದು.

 

ನಕಾರಾತ್ಮಕ ಧೋರಣೆಗಳನ್ನು ಕೈಬಿಡಿ. ಉತ್ತಮ ಜನರಿಂದ ನಿಮಗೆ ಬೆಂಬಲ ದೊರೆಯುವುದು. ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಮಕ್ಕಳ ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುವುದು.

 

ಧೈರ್ಯ ಸಾಹಸ ಪ್ರವೃತ್ತಿಯವರಾದ ನೀವು ಮುನ್ನುಗ್ಗುವುದರಲ್ಲಿ ಹಿಂದೆ ಬೀಳಬೇಡಿ. ಹಾಗಂತ ಆತುರದ ನಿರ್ಧಾರ ಸೂಕ್ತವಲ್ಲ. ಹಿರಿಯರ ಆಶೀರ್ವಾದದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top