fbpx
ಸಮಾಚಾರ

ರಿಷಬ್ ಶೆಟ್ಟಿ ಅವರಂತೆ ಕಾಣುತ್ತಿದ್ದಾನೆ ಈ ಯುವಕ! ಆದರೆ ರಿಷಬ್ ಶೆಟ್ಟಿ ಅಲ್ಲ- ಮತ್ಯಾರಿದು?

ಕಾಂತಾರ ಸಿನಿಮಾ ಪ್ರಪಂಚಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ. ಅದರಲ್ಲೂ ಪ್ರತಿಯೊಬ್ಬರಿಗೂ ರಿಷಬ್ ಶೆಟ್ಟಿ ಅವರ ನಟನೆ ಸಕತ್ ಇಷ್ಟವಾಗಿದೆ. ಇದೀಗ ರಿಷಬ್ ಶೆಟ್ಟಿ ಅವರನ್ನು ಹೋಲುವಂತಹ ವ್ಯಕ್ತಿ ಉಡುಪಿಯಲ್ಲಿ ಕಾಣಿಸಿಕೊಂಡಿದ್ದು, ಇದೀಗ ಈ ಫೋಟೋ ಸಕತ್ ವೈರಲ್ ಆಗುತ್ತಿದೆ.

ಈತನ ಹೆಸರು ದೀಪ್ ಆಚಾರ್ಯ. ಈತ ಶಿರ್ವ ಗ್ರಾಮದಲ್ಲಿ ಮೊಬೈಲ್ ಅಂಗಡಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಚ್ಚರಿಯ ವಿಷಯ ಎಂದರೆ ಈ ವ್ಯಕ್ತಿ ಕಾಂತಾರ ಸಿನಿಮಾ ಬಿಡುಗಡೆಯಾಗುವ ತನಕ ಇವರು ನೋಡಲು ರಿಷಬ್ ಶೆಟ್ಟಿ ಅವರಂತೆ ಕಾಣುತ್ತಿದ್ದಾರೆ ಎಂದು ಯಾರು ಹೇಳಿರಲಿಲ್ಲ. ಆದರೆ ಕಾಂತಾರ ಸಿನಿಮಾ ಬಿಡುಗಡೆಯಾಗಿ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಸ್ಟೈಲ್, ಲುಕ್ ನೋಡಿದ ಜನ ಇವರು ರಿಷಬ್ ಶೆಟ್ಟಿ ಅವರ ತರ ಇದ್ದಾರಲ್ಲ ಎಂದು ಒಂದು ಕ್ಷಣ ಶಾಕ್ ಆಗಿದ್ದಾರೆ.

ಇದೀಗ ಈ ವ್ಯಕ್ತಿ ರಿಷಬ್ ಶೆಟ್ಟಿ ಅವರಂತೆ ಕಾಣಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಧರಿಸಿದ್ದ ಗ್ಲಾಸ್, ಬಟ್ಟೆ ಮತ್ತು ಅವರು ಉಪಯೋಗಿಸುತ್ತಿದ್ದ rx100 ಬೈಕ್ ಹೀಗೆ ಪ್ರತಿಯೊಂದರಲ್ಲೂ ಸಹ ಇವರು ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದಂತೆ ಗೆಟಪ್ ಚೇಂಜ್ ಮಾಡಿಕೊಂಡಿದ್ದಾರೆ. ಇದೀಗ ಇವರು ಕನ್ನಡಿ ಮುಂದೆ ನಿಂತಾಗ ಇವರಿಗೆ ತಾವು ಸೇಮ್ ರಿಷಬ್ ಶೆಟ್ಟಿ ಅವರಂತೆ ಕಾಣುತ್ತಿದ್ದೇನೆ ಎಂದು ಅನಿಸುತ್ತಿದೆ.

ಇದೀಗ ಇವರು ತಮ್ಮ ಸ್ನೇಹಿತರ ಒತ್ತಾಯದ ಮೇರೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ರೀಲ್ಸ್ ಕೂಡ ಮಾಡಿದ್ದಾರೆ. ಈ ರೀಲ್ಸ್ ವೈರಲ್ ಆಗುತ್ತಿದ್ದಂತೆ ಇವರನ್ನು ಹುಡುಕಿಕೊಂಡು ಅಭಿಮಾನಿಗಳು ಬರುತ್ತಿದ್ದು, ಇವರ ಜೊತೆ ಸೆಲ್ಫಿ ಕೂಡ ತೆಗೆಸಿಕೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top