fbpx
ಸಮಾಚಾರ

ಕನ್ನಡತಿ ಅನುಷಾ ಶೆಟ್ಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೆಲುಗು ನಟ ನಾಗ ಶೌರ್ಯ

ತೆಲುಗು ಚಿತ್ರರಂಗದ ಖ್ಯಾತ ನಟ ನಾಗ ಶೌರ್ಯ ಅವರ ಮದುವೆಯು ಕನ್ನಡತಿ ಅನುಷಾ ಶೆಟ್ಟಿ ಅವರೊಂದಿಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ. ಹಲವು ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡುತ್ತಿದ್ದು, ಇದೀಗ ಮದುವೆ ಆಗಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮದುವೆ ನಡೆಯಿತು. ಎರಡು ಕಡೆಯ ಕುಟುಂಬಸ್ಥರು, ಬಂಧು ಮಿತ್ರರು ಈ ಮದುವೆಯಲ್ಲಿ ಭಾಗಿಯಾಗಿದ್ದರು.

ಬೆಂಗಳೂರಿನ ವಿಟ್ಟಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯು ಮ್ಯಾರಿಯಟ್ ಹೋಟೆಲ್‌ನಲ್ಲಿ ನಾಗ ಶೌರ್ಯ ಮತ್ತು ಅನುಷಾ ಶೆಟ್ಟಿ ಅವರ ಮದುವೆ ಸಮಾರಂಭ ನಡೆದಿದೆ. ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ. ಅನುಷಾ ಶೆಟ್ಟಿ ಮತ್ತು ನಾಗ ಶೌರ್ಯ ಮದುವೆಯ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ನವ ದಂಪತಿಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಕುಂದಾಪುರ ಮೂಲದವರಾದ ಅನುಷಾ ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಸಂಸ್ಥೆಯನ್ನ ಕೂಡ ತೆರೆದಿದ್ದಾರೆ. ಇನ್ನು, ನಾಗಶೌರ್ಯ 2011ರಲ್ಲಿ ತೆಲುಗು ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ನೀಡಿದರು. ರಶ್ಮಿಕಾ ಮಂದಣ್ಣ ಅವರ ಮೊದಲ ತೆಲುಗು ಸಿನಿಮಾ ‘ಛಲೋ’ದಲ್ಲಿ ಹೀರೋ ಆಗಿ ಕಾಣಿಸಿಕೊಂಡವರು ಇದೇ ನಾಗ ಶೌರ್ಯ. ಅವರ ಕೃಷ್ಣ ವೃಂದಾ ವಿಹಾರಿ ಈಚೆಗಷ್ಟೇ ತೆರೆಗೆ ಬಂದಿತ್ತು. ಸದ್ಯ ಅವರ ಕೈಯಲ್ಲಿ ಇನ್ನಷ್ಟು ಸಿನಿಮಾಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top