ಮಹಾರಾಷ್ಟ್ರ ಗಡಿ ವಿವಾದ ಬೂದಿ ಮುಚ್ಚಿದ ಕೆಂಡಂದಂತೆ ಆಗಾಗ್ಗೆ ಹೊಗೆಯಾಡುತ್ತಲೇ ಇರುತ್ತದೆ. ಸದ್ಯ ಈ ಕೇಸು ಸುಪ್ರೀಂ ಅಂಗಾಲದಲ್ಲಿದ್ದು ಗಡಿ ವಿವಾದ ವಿಚಾರದಲ್ಲಿ, ಸಮರ್ಥ ವಾದ ಮಂಡಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದೆ. ಆದರೆ, ಕರ್ನಾಟಕ ಸರ್ಕಾರ ತುರ್ತು ಸಿದ್ಧತೆಗಳನ್ನೂ ಮಾಡಿಕೊಳ್ಳದೆ ಗಾಢ ನಿದ್ರೆಗೆ ಜಾರಿದೆ.
ಬೆಳಗಾವಿ ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ಇದೇ 23ರಂದು ವಿಚಾರಣೆ ನಡೆಸಲಿದೆ. ಅದನ್ನು ಎದುರಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಭರದ ಸಿದ್ಧತೆ ನಡೆಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ರಾಜ್ಯ ಮಂಡಿಸಬೇಕಾದ ವಾದದ ಬಗ್ಗೆ ಸಮಾಲೋಚನೆ ನಡೆಸಲು ವಿರೋಧ ಪಕ್ಷಗಳ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಆ ರಾಜ್ಯ ರಚಿಸಿದೆ. ಆ ರಾಜ್ಯ ಗಡಿವಿವಾದವನ್ನು ಎಷ್ಟೊಂದು ಗಂಭೀರವಾಗಿ ಸ್ವೀಕರಿಸಿದ್ದು ವಿವಾದ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಸರ್ವಪಕ್ಷ ಸಭೆ ನಡೆಸಿದೆ.
ಭಾಷೆ ಮತ್ತು ಗಡಿ ವಿಚಾರದಲ್ಲಿ ಈ ಸರ್ಕಾರ ಆಲಸ್ಯ ಧೋರಣೆ ತೋರುತ್ತಿರುವುದು ವಿಷಾದನೀಯ. ಕರ್ನಾಟಕ ರಾಜ್ಯ ಸರ್ಕಾರದ ನಿರ್ಲಕ್ಷ ಸಲ್ಲ. ಇಷ್ಟೊತ್ತಿಗಾಗಲೇ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಮುಂದೆ ಬರಬಹುದಾದಂತ ಸಂದರ್ಭಗಳನ್ನು ಎದುರಿಸಲು ಸಜ್ಜಾಗಬೇಕಿತ್ತು. pic.twitter.com/cuMRWhRR9J
— GC ChandraShekhar (@GCC_MP) November 22, 2022
ಅತ್ತ ಮಹಾ ರಾಷ್ಟ್ರ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರೇ ಇತ್ತ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಯಾವುದೇ ಸಿದ್ಧತೆ ನಡೆಸದೆ ಗಡಿ ಕನ್ನಡಿಗರು ಹಾಗೂ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಇಷ್ಟೊತ್ತಿಗಾಗಲೇ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಮುಂದೆ ಬರಬಹುದಾದಂತ ಸಂದರ್ಭಗಳನ್ನು ಎದುರಿಸಲು ಸಜ್ಜಾಗಬೇಕಿತ್ತು ಆದರೆ ಆ ಕೆಲಸವನ್ನ ಬೊಮ್ಮಾಯಿ ಸರ್ಕಾರ ಮಾಡಿಲ್ಲ.
ಸದ್ಯ ಜಡತ್ವ ಸ್ಥಿತಿಯಲ್ಲಿ ನಿದ್ರೆಗೆ ಜಾರಿರುವ ಬೊಮ್ಮಾಯಿ ಸರ್ಕಾರ ಇನ್ಮುಂದೆಯಾದರೂ ನಿದ್ರೆಯಿಂದ ಎದ್ದು ನಾಡು ನುಡಿಯ ವಿಚಾರದಲ್ಲಿ ಸಕ್ರಿಯವಾಗುತ್ತದೆಯೇ ಎಂಬುದನ್ನು ಕಾದು ನೋಡಬೆಕ್ಷ್ಟೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
