fbpx
ಸಮಾಚಾರ

ವರಕವಿ ದ.ರಾ.ಬೇಂದ್ರೆ ಸೊಸೆ ನಿಧನ

ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಾರಾ ಬೇಂದ್ರೆ ಅವರ ಸೊಸೆ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ನಿಧನರಾದ ಪದ್ಮಾ ಪಾಂಡುರಂಗ ಬೇಂದ್ರೆಯವರು ಧಾರವಾಡ ಸಾಧನಕೇರಿಯ ದ.ರಾ ಬೇಂದ್ರೆ ಮನೆಯಲ್ಲಿ ಮೃತಪಟ್ಟಿದ್ದಾರೆ.

ಪದ್ಮ ಪಾಂಡುರಂಗ ಬೇಂದ್ರೆ ಅವರು ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪದ್ಮಾ ಪಾಂಡುರಂಗ ಬೇಂದ್ರೆ ಅವರಿಗೆ 90 ವರ್ಷ ವಯಸ್ಸಾಗಿತ್ತು.

ಪದ್ಮಾ ಪಾಂಡುರಂಗ ಬೇಂದ್ರೆ ಅವರಿಗೆ ಇವರಿಗೆ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಹೊಸ ಯಲ್ಲಾಪುರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top