fbpx
ಸಮಾಚಾರ

ಬಿಗ್ ಬಾಸ್ ಮನೆಗೆ ಅಧಿಕೃತವಾಗಿ ವೈಲ್ಡ್ ಕಾರ್ಡ್ ಯಾಗಿದೆ! ಹಾಗಿದ್ದರೆ ಯಾರಿರಬಹುದು? ಕ್ಲೂ ನೀಡಿದ ಬಿಗ್ ಬಾಸ್ ಪ್ರೊಮೊ

ಬಿಗ್ ಬಾಸ್ ಕಾರ್ಯಕ್ರಮ ದಿನದಿಂದ ದಿನಕ್ಕೆ ಹೊಸ ರಂಗು ತರುತ್ತಿದೆ. ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ 9 ವಾರಗಳು ಕಳೆದಿದೆ. ಆದರೆ ಇಂದಿಗೂ ಸಹ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿಲ್ಲ. ಆದರೆ ಇದೀಗ ಕಲರ್ಸ್ ಕನ್ನಡ ಹಂಚಿಕೊಂಡಿರುವ ಒಂದು ಪ್ರೊಮೊ ದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕುರಿತು ಬಿಗ್ ಬಾಸ್ ಒಂದು ಸಣ್ಣ ಕ್ಲೂ ನೀಡಿದ್ದಾರೆ.

ಬಿಗ್ ಬಾಸ್ ಮನೆಯ ಗಾರ್ಡನ್ ಇದೀಗ ಕಾಡಾಗಿದೆ. ಸ್ಪರ್ಧಿಗಳು ಗಾರ್ಡನ್ ಏರಿಯಾದಲ್ಲಿ ಕೂತು ಅಡುಗೆ, ಊಟ, ತಿಂಡಿ ಎಲ್ಲವೂ ಮಾಡಬೇಕು. ಈ ವೇಳೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಂದು ಟಾಸ್ಕ್ ನೀಡುತ್ತಾರೆ. ಸ್ಪರ್ಧಿಗಳು ಆಟವನ್ನು ಗೆದ್ದು ತರಕಾರಿಯನ್ನು ಪಡೆಯಬೇಕು. ಮನೆಯ ಸ್ಪರ್ಧಿಗಳು ಆಟದಲ್ಲಿ ಸೋತಾಗ ಬಿಗ್ ಬಾಸ್ ಸದಸ್ಯರೊಬ್ಬರು ಆಟ ಗೆದ್ದು ಮನೆಗೆ ತರಕಾರಿ ಮರಳಿಸಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಆಗ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿನಾ ಎಂದು ಆಶ್ಚರ್ಯವ್ಯಕ್ತಪಡಿಸಿದ್ದಾರೆ.

 

 

ಸಾನ್ಯಾ ಅಯ್ಯರ್ ಬರುತ್ತಾರಾ?
ಈ ಹಿಂದೆಯೇ ಸಾನ್ಯಾ ಅಯ್ಯರ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಸಾನ್ಯಾ ಅವರು ಬಿಗ್ ಬಾಸ್‌ ಶೋಗೆ ಮತ್ತೆ ಬರಲಿ ಎಂದು ಟ್ವಿಟ್ಟರ್‌ನಲ್ಲಿ ಅಭಿಯಾನವೂ ನಡೆದಿತ್ತು. ಬಿಗ್ ಬಾಸ್ ಮನೆಯಿಂದಾಚೆ ಬಂದಿರುವ ಸಾನ್ಯಾ ಅಯ್ಯರ್ ಅವರು ಮಾಧ್ಯಮಕ್ಕೆ ಸಂದರ್ಶನ ಕೂಡ ನೀಡಿಲ್ಲ. ಹೀಗಾಗಿ ಬಿಗ್ ಬಾಸ್ ಮನೆಗೆ ಇವರು ಬರುತ್ತಾರಾ ಎಂದು ಕಾದು ನೋಡಬೇಕು.

ದೀಪಿಕಾ ದಾಸ್ ಬಂದಿದ್ದಾರಾ?
ಇದೀಗ ಪ್ರೊಮೊ ನೋಡಿದ ಪ್ರತಿಯೊಬ್ಬರಿಗೂ ಕಾಡುತ್ತಿರುವ ಅನುಮಾನ ಎಂದರೆ ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ಅವರ ರಿ-ಎಂಟ್ರಿಯಾಗಿದೆ ಎಂದು. ಪ್ರೋಮೋದಲ್ಲಿ ದೀಪಿಕಾ ದಾಸ್ ಹಾಕುತ್ತಿದ್ದ ಬ್ರೇಸ್ ಲೆಟ್ ಒಂದು ಕಾಣುತ್ತಿದೆ. ಹೀಗಾಗಿ ಇವರು ಬಿಗ್ ಬಾಸ್ ಮನೆಗೆ ಮರಳಿ ಬಂದಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಬಹಳ ಚೆನ್ನಾಗಿ ಆಡುತ್ತಿದ್ದರು. ಹೀಗಾಗಿ ಇವರು ಎಲಿಮಿನೇಟ್ ಆಗಿದ್ದು ಬಹಳಷ್ಟು ಜನರಿಗೆ ಬೇಸರ ತಂದಿತ್ತು.

ಸೋನು ಗೌಡ ಹೋಗ್ತಾರಾ?
ಈ ಹಿಂದೆ ಬಿಗ್ ಬಾಸ್ ಮನೆಗೆ ಸೋನು ಗೌಡ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಹೀಗಾಗಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಸೋನು ಬಿಗ್ ಬಾಸ್ ಮನೆಗೆ ಎಂಟ್ರಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಚಕ್ರವರ್ತಿ ಚಂದ್ರಚೂಡ್ ಹೋಗ್ತಾರಾ?
ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್ ಬಾಸ್ ಮನೆಗೆ ಬರುತ್ತಾರೆ, ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಭರ್ಗಿ ಅವರಿಗೆ ಟಫ್ ಕಾಂಪಿಟಿಷನ್ ಕೊಡುತ್ತಾರೆ ಎಂದು ಜನ ಅಂದುಕೊಳ್ಳುತ್ತಿದ್ದರು. ಹೀಗಾಗಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಯಾರು ಬಂದಿದ್ದಾರೆ ಎಂದು ನೋಡಲು ಇಂದಿನ ಸಂಚಿಕೆಯ ಬಿಗ್ ಬಾಸ್ ಅನ್ನು ವೀಕ್ಷಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top