ಮಕ್ಕಳಿಗೆ ಅತ್ಯಂತ ಜನಪ್ರಿಯವಾದ ಪಾನಿಯ ಎಂದರೆ ಅದು ರಸ್ನಾ. ಒಂದು ಕಾಲದಲ್ಲಿ ಈ ಜನಪ್ರಿಯ ರಸ್ನಾಗೆ ಬಹಳಷ್ಟು ಬೇಡಿಕೆ ಇತ್ತು. ಇದೀಗ ರಸ್ನಾದ ಸಂಸ್ಥಾಪಕ ಅಧ್ಯಕ್ಷ ಅರೀಜ್ ಪಿರೋಜ್‍ಶಾ ಖಂಬಟ್ಟಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅರೀಜ್ ಪಿರೋಜ್‍ಶಾ ಖಂಬಟ್ಟಾ ಅವರ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ನವೆಂಬರ್ 21 ಸೋಮವಾರ ಅಹಮದಾಬಾದ್‍ನಲ್ಲಿ (Ahmedabad) ಕೊನೆಯುಸಿರೆಳೆದಿದ್ದಾರೆ. ಇವರು ತಮ್ಮ ಪತ್ನಿ ಪರ್ಸಿಸ್ ಮತ್ತು ಮಕ್ಕಳಾದ ಪಿರುಜ್, ಡೆಲ್ನಾ, ರುಜಾನ್ ಅವರನ್ನು ಅಗಲಿದ್ದಾರೆ.
ಅಹಮದಾಬಾದ್ ಮೂಲದ ಅರೀಜ್ ಪಿರೋಜ್‌ಶಾ ಅವರು 1970ರ ದಶಕದಲ್ಲಿ ರಸ್ನಾ ಜ್ಯೂಸ್ ಕಂಪನಿ ಆರಂಭಿಸಿದರು. ದುಬಾರಿ ಪಾನೀಯಗಳಿಗೆ ಸೆಡ್ಡೊಡೆಯಲೆಂದೇ ಸ್ಥಾಪಿಸಿದ ಕಂಪನಿಯು ಕೆಲವೇ ವರ್ಷಗಳಲ್ಲಿ ದೇಶದ ಮನೆಮಾತಾಯಿತು. ಸದ್ಯ, ದೇಶದ 18 ಲಕ್ಷ ಚಿಲ್ಲರೆ ಮಳಿಗೆಗಳಲ್ಲಿ, ಅಂಗಡಿಗಳಲ್ಲಿ ರಸ್ನಾ ಪ್ಯಾಕೆಟ್ ಸಿಗುತ್ತದೆ. ಹಾಗೆಯೇ, ಜಗತ್ತಿನ 60 ರಾಷ್ಟ್ರಗಳಲ್ಲಿ ದೇಶೀಯ ಪಾನೀಯ ಲಭ್ಯವಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
