fbpx
ಸಮಾಚಾರ

ಕರ್ನಾಟಕ ಮೂಲದ ತೆಲುಗಿನ ನಟ ಶ್ರೀಕಾಂತ್ ಸಂಸಾರದಲ್ಲಿ ಬಿರುಗಾಳಿ

ಕರ್ನಾಟಕ ಮೂಲದ ತೆಲುಗಿನ ನಟ ಶ್ರೀಕಾಂತ್ ಮೆಕಾ ಅವರು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಗಳಿಸಿದ್ದಾರೆ. ಶ್ರೀಕಾಂತ್ ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಇತರ ಭಾಷೆಗಳ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂಥಾ ದೈತ್ಯ ನಟನ ವೈವಾಹಿಕ ಬದುಕಲ್ಲಿ ಬಿರುಗಾಳಿ ಎದ್ದಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತರುವ ಸುದ್ದಿಗಳ ಪ್ರಕಾರ ಈ ಸ್ಟಾರ್ ದಂಪತಿ ವಿಚ್ಛೇದನ ಪಡೆದುಕೊಳ್ಳಲು ನಿರ್ಧಾರ ಮಾಡಿದೆಯಂತೆ. ಶ್ರೀಕಾಂತ್ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ನಟ ಆರ್ಥಿಕ ಸಂಕಷ್ಟವೇ ಡಿವೋರ್ಸ್ಗೆ ಕಾರಣ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಚಾರವಾಗಿ ಶ್ರೀಕಾಂತ್ ಆಗಲಿ ಅಥವಾ ಅವರ ಪತ್ನಿ ಊಹಾ ಆಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.

1997ರಲ್ಲಿ ಶ್ರೀಕಾಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ಇಬ್ಬರೂ ಗಂಡು ಮಕ್ಕಳು ರೋಷನ್, ರೋಹನ್ ಮತ್ತು ಮಗಳು ವೇದಾ. ಇನ್ನೂ ಪತ್ನಿ ಊಹಾ ಕೂಡ ನಟಿಯಾಗಿದ್ದು, ಸಾಕಷ್ಟು ಸೌತ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ವಯಕ್ತಿಕ ಭಿನ್ನಾಭಿಪ್ರಾಯಗಳ ಕಾರಣ ತಮ್ಮ ಇಪ್ಪತ್ತೈದು ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಡಲು ಶ್ರೀಕಾಂತ್ ಮತ್ತು ಊಹಾ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top