fbpx
ಸಮಾಚಾರ

ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡಿದ್ದೀರಾ?ಚಿಂತಿಸಬೇಡಿ, ಈ ಸುಲಭ ವಿಧಾನವನ್ನು ಪಾಲಿಸುವ ಮೂಲಕ ಅದನ್ನು ಮರಳಿ ಪಡೆಯಿರಿ

ನೀವು ಭಾರತೀಯ ನಿವಾಸಿಯಾದರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇಟ್ಟುಕೊಳ್ಳುವುದು ಕಡ್ಡಾಯ. ಏಕೆಂದರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ ನೀವು ಕೆಲವೊಂದು ಸೌಲಭ್ಯಗಳಿಂದ ವಂಚಿತರಾಗುತ್ತೀರಾ. ಹೀಗಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಜೋಪಾನವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಒಂದು ವೇಳೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡರೆ ಏನು ಮಾಡಬೇಕು ಎಂದು ಚಿಂತಿಸುವ ಅವಶ್ಯಕತೆ ಇಲ್ಲ. ನಾವು ತಿಳಿಸುವ ಕೆಲವೊಂದು ಸುಲಭ ವಿಧಾನಗಳಿಂದ ನೀವು ಮರಳಿ ನಿಮ್ಮ ಆಧಾರ್ ಕಾರ್ಡ್ ಅನ್ನು ಪಡೆಯಬಹುದು.

ಕಳೆದುಕೊಂಡ ಆಧಾರ್ ಕಾರ್ಡ್ ಅನ್ನು ಮರಳಿ ಪಡೆಯಲು ಕೇಂದ್ರ ಸರ್ಕಾರ ಒಂದು ಅವಕಾಶವನ್ನು ನೀಡಿದೆ. ನೀವು ಸುಲಭವಾಗಿ ಅಧಿಕೃತ ಯುಐಡಿಎಐ ವೆಬ್‌ಸೈಟ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಬಳಸಿ ಮರಳಿ ಪಡೆಯಬಹುದು. ಆಧಾರ್ ಕಾರ್ಡ್ ನೋಂದಣಿ ಸಂಖ್ಯೆಯನ್ನು ನೀಡುವ ಮೂಲಕವೂ ಯುಐಡಿಎಐನ ಅಧಿಕೃತ ವೆಬ್​ಸೈಟ್‌ನಿಂದ ನಕಲಿ ಆಧಾರ್ ಕಾರ್ಡ್ ಪಡೆಯಲು ಅವಕಾಶವಿದೆ. ಆದರೆ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನೀಡಿದರೆ ಮಾತ್ರ ಒಟಿಪಿ ಬರುತ್ತದೆ. ಅದಕ್ಕೆ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಮೊಬೈಲ್ ನಂಬರ್ ಲಿಂಕ್ ಆಗಿದ್ದರೇ ನೋಂದಣಿ ಸಂಖ್ಯೆ ಅಗತ್ಯವಿಲ್ಲ.

ಒಟಿಪಿ ಯನ್ನು ನೀವು ಆಧಾರ್ ಗೆ ಲಿಂಕ್ ಮಾಡಿರುವ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಗೆ ಕಳುಹಿಸಲಾಗುತ್ತದೆ. ಒಟಿಪಿ ಬಂದ ಬಳಿಕ ನೀವು ಅದನ್ನು ನಮೂದಿಸಬೇಕು. ಇದಾದ ನಂತರ ನಿಮ್ಮ ಮೊಬೈಲ್ ಅಥವಾ ಇಮೇಲ್ ಐಡಿಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. . ಸ್ವೀಕರಿಸಿದ ಆಧಾರ್ ಸಂಖ್ಯೆಯನ್ನು ನಿಮ್ಮ ಆಧಾರ್ ಡೌನ್‌ಲೋಡ್ ಮಾಡಲು ಅಥವಾ ನಿಮ್ಮ ಆಧಾರ್‌ನ ಮರುಮುದ್ರಣಕ್ಕೆ ಆದೇಶಿಸಬಹುದು. ಆದರೆ ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶವೆಂದರೆ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡ ತಕ್ಷಣ ಅದನ್ನು ಲಾಕ್ ಮಾಡುವುದನ್ನು ಮಾತ್ರ ಮರೆಯಬಾರದು.

ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ?
1. ಮೊದಲಿಗೆ https://resident.uidai.in/ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.
2. ನಂತರ ‘ನನ್ನ ಆಧಾರ್’ ಆಯ್ಕೆಯಲ್ಲಿ ‘ಆಧಾರ್ ಸರ್ವೀಸ್’ ಸೆಲೆಕ್ಟ್ ಮಾಡಿ.
3. ಇಲ್ಲಿ ಲಾಕ್​ ಅನ್​ಬಯೋಮೆಟ್ರಿಕ್ ಆಧಾರ್ ಸರ್ವೀಸ್ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ.
4. 12 ಅಂಕಿಯ ಆಧಾರ್ ಸಂಖ್ಯೆಯನ್ನ ನಮೂದಿಸುವ ಮೂಲಕ ಲಾಗ್ ಇನ್ ಆಗಿ.
5. ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸೆಂಡ್ ಓಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
6. ಒಟಿಪಿ ಹಾಕಿದ ನಂತರ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವ ಆಯ್ಕೆ ಕಾಣಿಸುತ್ತದೆ.
7. ಈಗ ಬಯೋಮೆಟ್ರಿಕ್ ಡೇಟಾವನ್ನು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಲಾಕ್ ಆಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top