fbpx
ಸಮಾಚಾರ

‘ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕಿಡ್ನ್ಯಾಪ್: ಫೋಟೋ ವೈರಲ್

ಸೂಪರ್ ಹಿಟ್ ಸಿನಿಮಾ ‘ಕಾಂತಾರ’ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಕಿಡ್ನಾಪ್ ಆಗಿದೆ. ಅದಕ್ಕೆ ಸಂಭಂದಪಟ್ಟ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಯಾರಪ್ಪ ಕಿಡ್ನಾಪ್ ಮಾಡಿದ್ದು, ಯಾಕೆ ಮಾಡಿದ್ದು ಅಂತ ನೆಟ್ಟಿಗರು ಭಾರಿ ಚರ್ಚೆ ನಡೆಸುತ್ತಿದ್ದಾರೆ..

 

 

ಅಷ್ಟಕ್ಕೂ ಅಜನೀಶ್ ಅವರನ್ನು ನಿಜವಾಗಿಯೂ ಕಳ್ಳರ ಗುಂಪು ಕಿಡ್ನಾಪ್ ಮಾಡಿಬಿಟ್ಟಿತಾ ಅಂದುಕೊಂಡ್ರೆ ಅದು ತಪ್ಪು. ಯಾಕಂದ್ರೆ ಈ ಫೋಟೋ ಅಸಲಿಯತ್ತು ಬೇರೆನೇ ಇದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಪ್ರಮೋಷನ್ ಫೋಟೋ ಇದು. ಅಜನೀಶ್ ಲೋಕನಾಥ್ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಅದರ ಪ್ರಮೋಷನ್ ಗಾಗಿ ತೆಗೆದ ಫೋಟೋ ಇದಾಗಿದೆ. ಅಜನೀಶ್ ಲೋಕನಾಥ್ ಅವರನ್ನ ಕಿಡ್ನಾಪ್ ಮಾಡೋ ರೀತಿಯಲ್ಲಿ ಪ್ರಚಾರ ಮಾಡಿ ಗಮನಸೆಳೆದಿದೆ.

 

 

ಅಜನೀಶ್ ಲೋಕನಾಥ್ ಅಪಹರಣಗೊಂಡಿದ್ದಾರೆ ಎಂಬ ಪೋಸ್ಟರ್ ಒಂದನ್ನು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡ ಬಿಡುಗಡೆಗೊಳಿಸಿದ್ದು, ಇದರಲ್ಲಿ ಅಜನೀಶ್ ಲೋಕನಾಥ್ ಅವರನ್ನು ಅವರ ಸ್ಟುಡಿಯೋದಿಂದಲೇ ಅಪಹರಣಕಾರರ ಗುಂಪೊಂದು ಅಪರಹರಿಸಿದ್ದು ಇದರ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ ಎಂದು ಬರೆದುಕೊಂಡಿದೆ.

ಅಂದಹಾಗೆ ವಿಭಿನ್ನ ಹಾಗೂ ವಿಶಿಷ್ಟ ರೀತಿಯ ಪ್ರಮೋಷನ್ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಸ್ಯಾಂಡಲ್ ವುಡ್ ಸ್ಟಾರ್ ತಾರೆಯರು ಈ ಚಿತ್ರಕ್ಕೆ ಸಾಥ್ ನೀಡ್ತಿದ್ದಾರೆ. ಈ ಹಿಂದೆ ನಟಿ ರಮ್ಯಾ ಕೂಡ ಸಾಥ್ ನೀಡಿದ ವೀಡಿಯೋ ಟೀಸರ್ ಸಖತ್ ವೈರಲ್ ಆಗಿ ಗಮನ ಸೆಳೆದಿತ್ತು. ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್, ರಮ್ಯಾ ವಿಭಿನ್ನ ರೀತಿಯಲ್ಲಿ ಈ ಚಿತ್ರದ ಪ್ರೊಮೋಷನ್ ಈ ಸಾಥ್ ನೀಡಿದ್ದರು. ಇದೀಗ ಅಜನೀಶ್ ಲೋಕನಾಥ್ ಅವರನ್ನ ಕಿಡ್ನಾಪ್ ಮಾಡೋ ರೀತಿಯಲ್ಲಿ ಪ್ರಚಾರ ಮಾಡಿ ಗಮನಸೆಳೆದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top