fbpx
ಸಮಾಚಾರ

ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಪ್ರೇಮ! ಹೇಳಿದ್ದಿಷ್ಟು

ನಟಿ ಪ್ರೇಮಾ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿತ್ತು.. ಎರಡನೇ ಮದುವೆ ವಿಚಾರದ ಅಂತೆ ಕಂತೆಗಳಿಗೆ ಮೊದಲ ಭಾರಿಗೆ ಪ್ರೇಮ ಮೌನ ಮುರಿದು ಮಾತನಾಡಿ, ತಮ್ಮ ಮದ್ವೆ ವಿಚಾರವಾಗಿ ಗಾಸಿಪ್ ಹಬ್ಬಿಸಿದವರಿಗೆ ಖಡಕ್ ವಾರ್ನಿಂಗ್ ನೀಡದ್ದಾರೆ. ಜೊತೆಗೆ ಸೆಕೆಂಡ್‌ ಮದುವೆ ಬಗ್ಗೆಯೂ ಮಾತನಾಡಿದ್ದಾರೆ.

ನಟಿ ಎರಡನೇ ಮದುವೆ ಆಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಪ್ರೇಮ ಗರಂ ಆಗಿದ್ದಾರೆ. ನಾನು ಸದ್ಯಕ್ಕೆ ಎರಡನೇ ಮದುವೆ ಆಗುವುದಿಲ್ಲ ಎಂದಿದ್ದಾರೆ. ದೇವಸ್ಥಾನಕ್ಕೂ ಹೋಗೊದು ತಪ್ಪು ಅಂದರೆ ಏನು ಮಾಡುವುದು? ತುಂಬಾ ದಿನ ಆಗಿತ್ತು ಅಂತ ಕೊರಗಜ್ಜನ ದೇವಾಲಯಕ್ಕೆ ಹೋಗಿದ್ದೆ. ಅಲ್ಲಿ ನಾನು ನನ್ನ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾನು ಇನ್ನು ಸಾಕಷ್ಟು ಸಾಧಿಸಬೇಕಾದದ್ದು ಇದೆ. ನಾನು ಮದುವೆ ಅದರೆ ನನ್ನ ಕುಟುಂಬ ಹಾಗೂ ಅಭಿಮಾನಿಗಳ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

ಪ್ರೇಮಾ ತಮ್ಮ ಗಂಡನಿಗೆ ವಿಚ್ಛೇದನ ನೀಡಿ ಆರು ವರ್ಷಗಳು ಕಳೆದಿವೆ. ಈಗ ಪ್ರೇಮ ಎರಡನೇ ಮದ್ವೆ ಆಗ್ತಾರಂತೆ ಅನ್ನೋ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇತ್ತೀಚಿಗೆ ಉಡುಪಿಯ ಕಾಪುನಲ್ಲಿರುವ ಕೊರಗಜ್ಜ ದೇವಸ್ಥಾನಕ್ಕೆ ನಟಿ ಪ್ರೇಮಾ ಭೇಟಿ ನೀಡಿ, ದೈವದ ದರ್ಶನ ಪಡೆದಿದ್ದರು. ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ಹಿನ್ನೆಲೆಯಲ್ಲಿ ನಟಿ ಪ್ರೇಮಾ ಅಲ್ಲಿಗೆ ಹೋಗಿದ್ದು ತಮ್ಮ ಎರಡನೇ ಮದುವೆ ವಿಚಾರವಾಗಿ ಎನ್ನುವ ಸುದ್ದಿ ಹರಡಿತ್ತು. ಪ್ರೇಮಾ ಸದ್ಯ ಎರಡನೇ ಮದುವೆ ತಯಾರಿಯಲ್ಲಿದ್ದಾರೆ ಎಂದೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿತ್ತು. ಈ ಎಲ್ಲ ವಿಷಯಗಳ ಕುರಿತು ಸ್ವತಃ ಪ್ರೇಮಾ ಅವರೇ ಸ್ಪಷ್ಟನೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top