ನಾವು ವಂಡರ್‌ಲಾ, ಜಿ. ಆರ್.ಎಸ್ ಮುಂತಾದ ಮನೋರಂಜನಾ ಪಾರ್ಕ್ ಗಳಲ್ಲಿ ಕೆಲವು ಆಟಗಳನ್ನು ನೋಡಿರುತ್ತೇವೆ. ಈ ಆಟ ನೋಡಲು ಎಷ್ಟು ಭಯಾನಕವಾಗಿರುತ್ತದೆಯೋ ಅದನ್ನು ಆಡಲು ಹೋದವರು ಎದೆಯಲ್ಲಿ ನಡುಕ ಉಂಟಾಗುವುದು ಸಹಜ. ಆದರೆ ಒಂದು ಕ್ಷಣ ಈ ಭಯಾನಕ ಆಟ ನಿಮ್ಮನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿ ಸ್ಥತಿಗೊಂಡರೆ ನಿಮ್ಮ ಸ್ಥಿತಿ ಹೇಗಿರಬಹುದು ಯೋಚಿಸಿ? ಇಂತದ್ದೇ ಒಂದು ಘಟನೆ ಚೀನಾ ದಲ್ಲಿ ನಡೆದಿದೆ.
ಚೀನಾದಲ್ಲೂ ಮನೋರಂಜನಾ ಪಾರ್ಕ್‌ನಲ್ಲಿ ಜನರ ರಂಜಿಸಲು ಇದ್ದಂತಹ ಆಟೋಪಕರಣವೊಂದು ತಾಂತ್ರಿಕ ದೋಷದ ಪರಿಣಾಮ ನಡು ಆಕಾಶದಲ್ಲಿ ಜನ ಇರುವಾಗಲೇ ಸ್ಥಗಿತಗೊಂಡ ಪರಿಣಾಮ ಪ್ರವಾಸಿಗರು ತಲೆ ಕೆಳಗಾಗಿ ನೇತಾಡುವಂತೆ ಆಗಿತ್ತು. ಇದರ ಕಾರಣ ಅದರಲ್ಲಿದ್ದ ಜನರಿಗೆ ಒಂದು ಕ್ಷಣ ನಡುಕ ಉಂಟಾಗಿ ಏನಾಗುತ್ತಿದೆ ಎಂಬುದು ಸಹ ತಿಳಿದೇ ಇರದಂತೆ ಆಗಿತ್ತು.
Amusement park-goers hung upside down for 10 minutes at the highest point of giant pendulum ride after it malfunctioned in China’s Fuyang city.
Workers had to clamber up to manually fix the ride and theme park officials said the malfunction was caused by a “weight issue.” pic.twitter.com/Xps63aGY4s
— TRT World (@trtworld) January 20, 2023
ಈ ಆಘಾತಕಾರಿ ಕ್ಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೀನಾದ ಮನೋರಂಜನಾ ಪಾರ್ಕ್ ಒಂದರಲ್ಲಿ ಈ ಘಟನೆ ನಡೆದಿದೆ. ಈ ಪಾರ್ಕ್ ನಲ್ಲಿ ಆಕಾಶದೆತ್ತರಕ್ಕೆ ಸಾಗಿ ಕೆಳಗಿಳಿಯುವ ಒಂದು ಆಟವಿತ್ತು. ಹೀಗಾಗಿ ಪ್ರವಾಸಿಗರು ಇದನ್ನು ಆಡಲು ಈ ಯಂತ್ರವನ್ನು ಅತ್ತಿದ್ದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ಯಂತ್ರ ಸ್ಥಗಿತಗೊಂಡಿತ್ತು. ಇದರಿಂದ ಪ್ರವಾಸಿಗಳು ಸುಮಾರು 10 ನಿಮಿಷಗಳ ಕಾಲ ಆಕಾಶದಿಂದ ತಲೆಕೆಳಗಾಗಿ ಇರುವಂತೆ ಆಗಿತ್ತು.
ನಂತರ ಏನೇ ಮಾಡಿದರು ಇದು ಸಹಜ ಸ್ಥಿತಿಗೆ ಬರಲಿಲ್ಲ. ನಂತರ ಅಧಿಕಾರಿಗಳು ಮೆಟ್ಟಿಲ ಮೂಲಕ ಕಂಬಗಳನ್ನು ಏರಿ ರೈಡ್ ಅನ್ನು ಹಸ್ತಚಾಲಿತವಾಗಿ ಸರಿಪಡಿಸಲು ನಿರ್ಧರಿಸಿದರು. ಮಿತಿ ಮೀರಿದ ತೂಕದಿಂದಾಗಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
