fbpx
ಸಮಾಚಾರ

64 ಮೊಬೈಲ್‌ ನಲ್ಲಿ ನಿತ್ಯ ʼಪೋಕೆಮಾನ್ ಗೋʼ ಗೇಮ್‌ ಆಡುತ್ತಾರೆ ಈ 74 ವರ್ಷದ ಅಜ್ಜ!

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಸಹ ಮೊಬೈಲ್ ಫೋನ್ ಬಳಸುತ್ತಾರೆ. ಫೋನ್ ಇಲ್ಲದೆ ಅವರಿಗೆ ಯಾವ ಕೆಲಸ ಕೂಡ ಮಾಡಲು ಇಂಟರೆಸ್ಟ್ ಬರದೇ ಇರುವ ರೀತಿ ಆಡುತ್ತಾರೆ. ಅದರಲ್ಲೂ ಯುವಜನತೆ ಇತ್ತೀಚಿಗೆ ಹೆಚ್ಚಾಗಿ ಮೊಬೈಲ್ ಗೇಮ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಆದರೆ ವಯ್ಯಸ್ಸಾದವರು ಕೂಡ ಇಂತಹ ಮೊಬೈಲ್ ಫೋನ್ ಗೇಮ್ ಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರೆ ನಂಬಲು ಅಸಾಧ್ಯ. ಆದರೆ ಇದು ಸತ್ಯ.

ಹೀಗಿನ ಕಾಲದಲ್ಲಿ ಪಬ್ ಜಿ, ಫ್ರೀ ಫೈರ್, ಹೀಗೆ ಹಲವಾರು ಆನ್ಲೈನ್ ಗೇಮ್ ಗಳಿವೆ. ಇದನೆಲ್ಲ ಮೀರಿಸಿ ಒಂದು ಗೇಮ್ ಇತ್ತು. ಅದು “ಪೋಕಿಮಾನ್ ಗೋ”. ಈ ಗೇಮ್ ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಸಕತ್ ಇಷ್ಟವಾಗಿತ್ತು. ಇದೀಗ 74 ವರ್ಷದ ಅಜ್ಜನೊಬ್ಬ ಈ ಆಟದ ದಾಸನಾಗಿದ್ದಾನೆ.

ತೈವಾನ್ ಮೂಲದ ಚೆನ್ ಸ್ಯಾನ್-ಯುವಾನ್ ಎಂಬ 74 ವರ್ಷದ ಅಜ್ಜನೊಬ್ಬ ಈ ಗೇಮ್‌ ನ ದಾಸನಾಗಿದ್ದಾನೆ. ಎಷ್ಟರಮಟ್ಟಿಗೆ ಅಂದರೆ ಕೇವಲ ಒಂದು ಘಂಟೆ, ಅಥವಾ ಒಂದು ದಿನ ಅಲ್ಲ, ದಿನದ 24 ಘಂಟೆ ಕೂಡ ಈತ ಈ ಆಟವನ್ನು ಆಡುತ್ತಿರುತ್ತಾನೆ.

 

 

2018 ರಲ್ಲಿ ಚೆನ್ ಸ್ಯಾನ್-ಯುವಾನ್ ಅವರ ಮೊಮ್ಮಗ ಪೋಕೆಮಾನ್ ಗೋ ಮೊಬೈಲ್‌ ಗೇಮ್‌ ನ್ನು ಅಜ್ಜನಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ಈತ ಈ ಗೇಮ್ ನಲ್ಲಿ ಮುಳುಗಿಹೋಗಿದ್ದಾನೆ. ಗೇಮ್‌ ಆಡಲು ಇವರು ಒಂದು ಸೈಕಲ್‌ ನಲ್ಲಿ ದೊಡ್ಡ ಪರದೆಯನ್ನೇ ಹಾಕಿರುವಂತೆ ಸ್ಟ್ಯಾಂಡ್‌ ವೊಂದನ್ನು ಇಟ್ಟು ಅದರಲ್ಲಿ ಒಂದೊಂದೇ ಮೊಬೈಲ್‌ ಇಟ್ಟಿದ್ದಾರೆ. ಇದರಲ್ಲಿ ಒಟ್ಟು 64 ಮೊಬೈಲ್ ಗಳಿದ್ದು, 64 ಮೊಬೈಲ್ ಗಳಲ್ಲಿಯೂ ಸಹ ಇವರು ಈ ಆಟವನ್ನು ಹಾಡುತ್ತಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಇವರನ್ನು ಸ್ಥಳೀಯರು ʼಪೋಕೆಮಾನ್ ಗೋ ಅಜ್ಜʼ ಎಂದೇ ಕರೆಯುತ್ತಾರೆ. ಆ ಹೆಸರಿನಿಂದಲೇ ಇವರು ಖ್ಯಾತಿಯನ್ನು ಗಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top