fbpx
ಸಮಾಚಾರ

ಬಿಳಿಗಿರಿರಂಗನ ಬೆಟ್ಟದಲ್ಲಿ ಬಹುವರ್ಣದ ಅಪರೂಪದ ಕಣಜ ಪತ್ತೆ!

ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಅಂಡ್ ಎನ್ವಿರಾನ್ಮೆಂಟ್​ನ ಕೀಟಶಾಸ್ತ್ರಜ್ಞರ ತಂಡ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಅರಣ್ಯದಲ್ಲಿ ಕಣಜ ಕುಲಕ್ಕೆ ಸೇರಿದ, ಬಹುವರ್ಣೀಯ ಹೊಸ ಕೀಟವನ್ನು ಪತ್ತೆ ಮಾಡಿದೆ.

ಏಟ್ರೀ ಸಂಶೋಧಕರಾದ ಡಾ.ರಂಜಿತ್‌ ಎ.ಪಿ., ಮತ್ತು ಡಾ.ಪ್ರಿಯದರ್ಶನ್‌ ಧರ್ಮ ರಾಜನ್‌ ಈ ಪರಾವಲಂಬಿ ಕೀಟವನ್ನು ಪತ್ತೆ ಮಾಡಿ ಅದಕ್ಕೆ ‘ಎಕಾರಿನಾಟ’ ಎಂದು ಹೆಸರಿಡಲಾಗಿದೆ. ಅರಣ್ಯ ಸಂರಕ್ಷಣೆ ಮಾಡುತ್ತಾ ಬಂದಿರುವ ಈ ಭಾಗದ ಆದಿವಾಸಿಗಳಾದ ಸೋಲಿಗರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದರು.

ಈ ಸಂಶೋಧನಾ ವರದಿಯನ್ನು ಯುರೋಪಿಯನ್ ಜರ್ನಲ್ ಆಫ್ ಟ್ಯಾಕ್ಸಾನಮಿಯಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಏಟ್ರೀಯು ಹಮ್ಮಿಕೊಂಡಿದ್ದ ಪಶ್ಷಿಮ ಘಟ್ಟದಲ್ಲಿ ಕೀಟಗಳ ಪತ್ತೆ ಯೋಜನೆಯ ಭಾಗವಾಗಿ 15 ವರ್ಷದ ಹಿಂದೆಯೇ ಈ ಹೊಸ ಕೀಟದ ಮಾದರಿಯನ್ನು ಸಂಶೋಧಕರು ಸಂಗ್ರಹಿಸಿದ್ದರು. ನಾಗಾಲ್ಯಾಂಡ್‌ನಿಂದಲೂ ಇದೇ ಜಾತಿಗೆ ಸೇರಿದ ಕೀಟಗಳ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಭಾರತದಲ್ಲಿ ಎರಡು ಕುಲಗಳು ಮಾತ್ರ ಕಂಡು ಬಂದಿದ್ದು, ದಕ್ಷಿಣ ಭಾರತದಲ್ಲಿ ಪತ್ತೆಯಾದ ಮೊದಲ ಕಣಜ ಕುಲ ಇದಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗದಗದ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್ ” ಈಗಾಗಲೇ ಬಿ.ಆರ್.ಟಿ ಅಭಯಾರಣ್ಯದಲ್ಲಿ 120 ಜಾತಿಯ ಇರುವೆ, 120 ಜಾತಿಯ ಚಿಟ್ಟೆಗಳು, 105 ಜಾತಿಯ ಜೀರುಂಡೆಗಳು ಪತ್ತೆಯಾಗಿವೆ. ಸೋಲಿಗರು ಬಿಳಿಗಿರಿ ರಂಗನ ಬೆಟ್ಟದಲ್ಲಿನ ಸ್ಥಳೀಯ ಸಮುದಾಯವಾಗಿದ್ದು ಅಭಯಾರಣ್ಯದ ಸೂಕ್ಷ್ಮತೆಗಳನ್ನು ಚೆನ್ನಾಗಿ ಅರಿತವರಾಗಿದ್ದಾರೆ. ಜೊತೆಗೆ ಭಾವನಾತ್ಮಕ ನಂಟನ್ನು ಹೊಂದಿದ್ದಾರೆ. ಹೀಗಾಗಿ ಹೊಸ ಕಣಜಕ್ಕೆ ಸೋಲಿಗರ ಹೆಸರನ್ನಿಟ್ಟಿರುವುದು ತುಂಬಾ ಸೂಕ್ತವಾಗಿದೆ” ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top