ಕೇರಳದ ಕಣ್ಣೂರಿನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕಾರಿಗೆ ಬೆಂಕಿ ತಗುಲಿ ಗರ್ಭಿಣಿ ಸೇರಿದಂತೆ ಇಬ್ಬರು ಸಜೀವ ದಹನವಾಗಿದ್ದಾರೆ. ಮೃತರನ್ನು ಪ್ರಜಿತ್ ಮತ್ತು ಆತನ ಪತ್ನಿ ರಿಷಾ ಎಂದು ಗುರುತಿಸಲಾಗಿದೆ. ಕಣ್ಣೂರು ನಗರದ ಜಿಲ್ಲಾ ಆಸ್ಪತ್ರೆ ಬಳಿ ಬೆಳಗ್ಗೆ ಹತ್ತೂವರೆ ಗಂಟೆ ಸುಮಾರಿಗೆ ಈ ದಾರುಣ ಘಟನೆ ನಡೆದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು ಅಪಘಾತದ ವೇಳೆ ಕಾರಿನಲ್ಲಿ ಆರು ಮಂದಿ ಇದ್ದರು. ಗರ್ಭಿಣಿಯ ಪತಿ ಕಾರು ಚಾಲನೆ ಮಾಡುತ್ತಿದ್ದು, ಗರ್ಭಿಣಿ ಮುಂದಿನ ಸೀಟಿನಲ್ಲಿ ಮತ್ತು ನಾಲ್ವರು ಹಿಂದಿನ ಸೀಟಿನಲ್ಲಿದ್ದರು. ಅಪಘಾತ ಸಂಭವಿಸಿದಾಗ ಹಿಂಬದಿ ಸೀಟಿನಲ್ಲಿದ್ದ ನಾಲ್ವರು ಕೂಡಲೇ ಕಾರಿನಿಂದ ಇಳಿದರು. ಆದರೆ ಕಾರಿನ ಬಾಗಿಲು ಜಾಮ್ ಆಗಿದ್ದರಿಂದ ಮುಂದಿನ ಸೀಟಿನಲ್ಲಿದ್ದ ಇಬ್ಬರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಈ ಅವಘಡದಲ್ಲಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮೂರು ವರ್ಷದ ಮಗು ಸೇರಿದಂತೆ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯೊಂದರ ಪ್ರಕಾರ ಆರು ಸದಸ್ಯರ ಕುಟುಂಬ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮೃತರನ್ನು ಕುಟ್ಟಿಯತ್ತೂರಿನ ನಿವಾಸಿಗಳಾದ ರೀಶಾ (26) ಮತ್ತು ಆಕೆಯ ಪತಿ ಪ್ರಜಿತ್ (32) ಎಂದು ಗುರುತಿಸಲಾಗಿದೆ.
ಹಿಂದೆ ಇದ್ದವರು ಕಾರಿನಿಂದ ಹೊರಕ್ಕೆ ಧಾವಿಸುತ್ತಿದ್ದಂತೆ ಪ್ರಜಿತ್ ಮುಂಭಾಗದ ಬಾಗಿಲು ತೆರೆಯಲು ವಿಫಲರಾದರು. ಕಾರಿನಲ್ಲಿ ಸಿಲುಕಿದ್ದ ದಂಪತಿಗೆ ಬೆಂಕಿ ಹೊತ್ತಿಕೊಂಡಿದೆ. ದಂಪತಿಗಳು ಸಹಾಯಕ್ಕಾಗಿ ಕಿರುಚುತ್ತಿರುವುದನ್ನು ಸ್ಥಳೀಯರು ಅಸಹಾಯಕತೆಯಿಂದ ನೋಡಿದ್ದಾರೆ ಎಂದು ವರದಿಯಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
