ತೂಕ ಇಳಿಸುವುದು ಹಲವರ ಗುರಿಯಾಗಿರುತ್ತದೆ. ತೂಕ ಇಳಿಸಲು ಆರೋಗ್ಯಕರವಾದ ಸುಲಭವಾದ ಸಲಹೆಗಳು ಇಲ್ಲಿದೆ ಗಮನಿಸಿ;
*ನೆಲದ ಮೇಲೆ ಕುಳಿತು ಊಟ, ತಿಂಡಿ ತಿನ್ನುವುದು ತುಂಬಾ ಪ್ರಯೋಜನಕಾರಿ. ನೆಲದ ಮೇಲೆ ಕುಳಿತು ತಿಂದರೆ. ಸಾಕು ಹೊಟ್ಟೆ ತುಂಬಿದಂತಾಗುತ್ತದೆ. ಆದ್ದರಿಂದ ಹೆಚ್ಚು ತಿನ್ನಲು ಅವಕಾಶ ಸಿಗುವುದಿಲ್ಲ.
*ಒಮೆಗಾ-3 ಕೊಬ್ಬಿನಾಮ್ಲವು ಅಧಿಕವಾಗಿ ಇರುವ ಆಹಾರವು ಹೊಟ್ಟೆಯ ಕೊಬ್ಬು ಕರಗಿಸುವುದು ಮತ್ತು ಚಯಾಪಚಯವನ್ನು ವೃದ್ಧಿಸುವುದು.
*ಅತಿಯಾದ ಒತ್ತಡವಿದ್ದರೆ ಅದು ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಹೆಚ್ಚಿಸುವುದು, ಇದು ಹಸಿವನ್ನು ಉತ್ತೇಜಿಸುವುದು ಮತ್ತು ತೂಕ ಹೆಚ್ಚಾಗುವುದು. ಹಾಗಾಗಿ ಒತ್ತಡದಿಂದ ದೂರವಿರಬೇಕು.
*ಹೊಟ್ಟೆಯ ಕೊಬ್ಬನ್ನು ಕರಗಿಸಲು ಶುಂಠಿ, ನಿಂಬೆ ಬೆರೆಸಿದ ನೀರನ್ನು ಕುಡಿದರೆ ಉತ್ತಮ. ನೀರು ನಮ್ಮ ದೇಹವನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ ಹಾಗಾಗಿ
ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು.
*ಬೆಳಗಿನ ಉಪಾಹಾರದಲ್ಲಿ ನೀವು ಸಾಕಷ್ಟು ಪ್ರೋಟೀನ್ ಆಹಾರಗಳನ್ನು ಸೇವನೆ ಮಾಡಿದರೆ ದಿನವಿಡೀ ಕಡಿಮೆ ಆಹಾರ ಸೇವಿಸಬಹುದು. ಬೆಳಗ್ಗೆ ಲಿಂಬೆ ಜ್ಯೂಸ್ ಅನ್ನು ಸೇವಿಸುವುದು ದೇಹದಲ್ಲಿ ಹೆಚ್ಚಿರುವ ಕೊಬ್ಬನ್ನು ಕರಗಿಸಿ ತೀವ್ರ ಹಸಿವನ್ನು ನಿವಾರಿಸುತ್ತದೆ
*ಬೆಳಗ್ಗೆ ವ್ಯಾಯಾಮ ಮಾಡುವುದು ದೇಹಕ್ಕೆ ಉತ್ತಮ ಸಾಮರ್ಥ್ಯವನ್ನು ನೀಡುತ್ತದೆ. ಇದರಿಂದ ದೇಹ ಹಗುರಗೊಳ್ಳುತ್ತದೆ. ಬೆಳಗ್ಗಿನ ಸೂರ್ಯನ ಬೆಳಕು ತೂಕ ಇಳಿಕೆಗೆ ಅತಿ ಸಹಾಯಕ. ಹಾಗೂ ಅಧ್ಯಯನಗಳು ಕಂಡುಕೊಂಡಿರುವ ಪ್ರಕಾರ ಬೇಗನೆ ಎದ್ದರೆ ಅದರಿಂದ ದೇಹಕ್ಕೆ ಸರಿಯಾದ ಶಕ್ತಿ ಸಿಗುವುದು ಮತ್ತು ತೂಕ ಇಳಿಸುವ ಯೋಜನೆಯು ಪರಿಣಾಮಕಾರಿ ಆಗಿರುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
