ಮೆಟಾ (Meta) ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಇಂದು ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಎಲ್ಲ ಫೀಚರ್ಗಳನ್ನು ಪರಿಯಿಸಿ ಜನಸಾಮಾನ್ಯರಿಗೆ ಸಾಕಷ್ಟು ಹತ್ತಿರವಾಗಿದೆ. ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ (WhatsApp Status) ಅಪ್ಲೋಡ್ ಮಾಡುವಾಗ ಯಾರಿಗೆ ಬೇಕು ಅವರಿಗೆ ಮಾತ್ರ ಕಾಣಿಸುವಂತೆ ಹಂಚಿಕೊಳ್ಳುವ ಆಯ್ಕೆ ಕೂಡ ಇದೆ.
ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಹಂಚಿಕೊಳ್ಳುವ ಮುನ್ನ ಸೆಟ್ಟಿಂಗ್ಗೆ ಹೋಗಿ ಅಲ್ಲಿ ನಾವು ಅಪ್ಲೋಡ್ ಮಾಡುವ ಸ್ಟೇಟಸ್ ಎಲ್ಲರಿಗೆ ಕಾಣಬೇಕಾ? ಅಥವಾ ಕೆಲವರಿಗೆ ಮಾತ್ರ ಕಾಣುವಂತೆ ಮಾಡಬೇಕಾ ಎಂಬ ಆಯ್ಕೆಯಿದೆ. ಇದರಿಂದ ನಿಮ್ಮ ಸ್ನೇಹಿತರು ನಿಮಗೆ ಮಾತ್ರ ಕಾಣದಂತೆ ಹಾಗೂ ಉಳಿದವರೆಲ್ಲರಿಗೂ ಕಾಣುವಂತೆ ಸ್ಟೇಟಸ್ ಹಾಕಬಹುದು. ಹೀಗಿದ್ದಾಗ ಇದನ್ನು ನೋಡಲು ನಿಮಗೆ ವಾಟ್ಸ್ಆ್ಯಪ್ನಲ್ಲಿ ಸಾಧ್ಯವಿಲ್ಲ. ಆದರೆ, ಇದಕ್ಕೊಂದು ಟ್ರಿಕ್ ಇದೆ.
ಯಾರು ವಾಟ್ಸಾಪ್ ಸ್ಟೇಟಸ್ ಅನ್ನು ಪರಿಶೀಲಿಸುತ್ತಾರೆ, ಅವರ ವಾಟ್ಸಾಪ್ ಸ್ಟೇಟಸ್ ಅನ್ನು ಯಾರು ಪರಿಶೀಲಿಸಿದ್ದಾರೆಂದು ಅವರಿಗೆ ತಿಳಿಯುತ್ತದೆ. ಇಂದು ಅಂತಹ ತಂತ್ರಗಳನ್ನು ನಾವು ನಿಮಗೆ ತಿಳಿಸುತ್ತೇವೆ, ಅದರ ಮೂಲಕ ನೀವು ಬೇರೆಯವರ ವಾಟ್ಸಾಪ್ ಸ್ಟೇಟಸ್ ಅನ್ನು ನೋಡಲು ಸಾಧ್ಯವಾಗುತ್ತದೆ
ಹೀಗೆ ಮಾಡಿದರೆ ನಿಮ್ಮನ್ನ ಹೈಡ್ ಮಾಡಿ ನಿಮ್ಮ ಸ್ನೇಹಿತರು ಸ್ಟೇಟಸ್ ಹಾಕಿದರೆ ಅದನ್ನು ನೋಡಬಹುದು. ವಾಟ್ಸ್ಆ್ಯಪ್ನಲ್ಲಿ ನೀವು ನಿಮ್ಮ ಕಾಂಟ್ಯಾಕ್ಟ್ನಲ್ಲಿರುವ ಸ್ನೇಹಿತರ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ಅವರಿಗೆ ತಿಳಿಯದಂತೆ ವೀಕ್ಷಿಸಬಹುದಾಗಿದೆ.
ಈ ಆಯ್ಕೆ ನೇರವಾಗಿ ವಾಟ್ಸ್ಆ್ಯಪ್ನಲ್ಲಿಲ್ಲ. ಬದಲಾಗಿ ಇದಕ್ಕೆ ಮೊದಲು ನೀವು ಥರ್ಡ್ ಪಾರ್ಟಿ ಆ್ಯಪ್ವೊಂದನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಅದೇ ಜಿಬಿ ವಾಟ್ಸ್ಆ್ಯಪ್ (GBWhatsApp). ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ ಬಳಿಕ ಆ್ಯಪ್ ಐಕಾಲ್ ಮೇಲೆ ಕ್ಲಿಕ್ ಮಾಡಿ. ಓಪನ್ ಆದ ಕೂಡಲೆ ಬಲ ಬದಿಯಲ್ಲಿರುವ ಮೂರು ಡಾಟ್ ಮೇಲೆ ಒತ್ತಿ. ಈ ಸಂದರ್ಭ ಕೆಳಗಡೆ ಹೈಡ್ ವೀವ್ ಸ್ಟೇಟಸ್ (Hide View Status) ಎಂಬ ಆಯ್ಕೆ ಕಾಣುತ್ತದೆ. ಇದನ್ನು ಒತ್ತಿದರೆ ನಿಮ್ಮನ್ನ ಹೈಡ್ ಮಾಡಿ ಸ್ಟೇಟಸ್ ಹಾಕಿದವರು ಯಾರು?, ಯಾವ ಸ್ಟೇಟಸ್ ಹಾಕಿದ್ದಾರೆ ಎಂಬುದು ಕಾಣಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮನ್ನ ಬ್ಲಾಕ್ ಮಾಡಿರುವವರ ಸ್ಟೇಟಸ್ ಕೂಡ ಇದರಲ್ಲಿ ನೋಡಬಹುದು.
ನಿಮ್ಮ ಫೋನಿನಲ್ಲಿನ ವಾಟ್ಸ್ಆ್ಯಪ್ ಅಪ್ಲಿಕೇಶನ್ಗೆ ಹೋಗಿ ಸೆಟ್ಟಿಂಗ್ ಮೆನು ತೆರೆಯಿರಿ. ನಂತರ ಪ್ರೈವಸಿ ಸೆಟ್ಟಿಂಗ್ ಕೆಳಗೆ ಸ್ಕ್ರಾಲ್ ಮಾಡಿ. ನೀವು ಅಲ್ಲಿ ಕೆಲವು ಆಯ್ಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ಸ್ಕ್ರೀನ್ ಕೆಳಭಾಗದಲ್ಲಿರುವ Read receipts ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ. ಅದನ್ನು ಸಕ್ರಿಯಗೊಳಿಸಿದ ನಂತರ, ನಿಮ್ಮ ಕಾಂಟ್ಯಾಕ್ಟ್ನಲ್ಲಿರುವ ಬಳಕೆದಾರರ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ನೀವು ವೀಕ್ಷಿಸಿದ್ದಿರಾ ಅಥವಾ ಇಲ್ಲವೇ ಎಂಬುದು ಅವರಿಗೆ ತಿಳಿಯುವುದಿಲ್ಲ.
ಇದೊಂದು ಥರ್ಡ್ ಪಾರ್ಟಿ ಆ್ಯಪ್ ಆಗಿದ್ದು ಬಳಕೆ ಮಾಡುವ ಮುನ್ನ ಎಚ್ಚರವಹಿಸಿ. ಈ ಆ್ಯಪ್ ನಿಮ್ಮ ಖಾಸಗಿ ಮಾಹಿತಿಯನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಈ ಆಯ್ಕೆ ಜಿಬಿ ವಾಟ್ಸ್ಆ್ಯಪ್ನ ನೂತನ ಆವೃತ್ತಿಯಲ್ಲಿ ಕೊಂಚ ಬದಲಾವಣೆ ಹೊಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
