ಸಾಮಾನ್ಯವಾಗಿ ಕುಡಿದ ಮೇಲೆ ಮಂದಿ ಯಾಕೆ ಇಂಗ್ಲೀಷ್ ಮಾತನಾಡುತ್ತಾರೆ ಎಂಬ ಅನುಮಾನ ಎಲ್ಲರಿಗೂ ಇದ್ದೇ ಇರುತ್ತದೆ. ಇಂಗ್ಲೀಷ್ ಗೊತ್ತಿಲ್ಲದವರಿಗೂ ಅದ್ಯಾಗೋ ಇಂಗ್ಲೀಷ್ ಮೇಲೆ ಲವ್ ಹುಟ್ಟಿಕೊಳ್ಳುತ್ತೆ. ಇಲ್ಲಿದೆ ನೋಡಿ ವಿಚಿತ್ರ ಸಂಗತಿ.
ಲಿವರ್ಪೂಲ್ ವಿಶ್ವವಿದ್ಯಾನಿಲಯ, ಬ್ರಿಟನ್‌ನ ಕಿಂಗ್ಸ್ ಕಾಲೇಜ್ ಮತ್ತು ನೆದರ್ಲ್ಯಾಂಡ್ಸ್ ಮಾಸ್ಟ್ರಿಚ್ ವಿಶ್ವವಿದ್ಯಾಲಯದ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಮದ್ಯಪಾನ ಮಾಡಿದ ನಂತರದಲ್ಲಿ ಸಾಮಾನ್ಯವಾಗಿ ವ್ಯಕ್ತಿಗಳ ನಡುವಳಿಕೆಯಲ್ಲಿ ಬದಲಾವಣೆ ಕಂಡು ಬರುತ್ತದೆ. ಈ ನಡವಳಿಕೆ ಬದಲಾವಣೆ ಆಗಿದೆ ಎಂಬುದನ್ನು ತೋರಿಸುವುದರಲ್ಲಿ ಭಾಷಾಶೈಲಿಯೂ ಸಹ ಸೇರಿದೆ. ಮದ್ಯಪಾನ ಮಾಡಿದ ವ್ಯಕ್ತಿಯ ಮಾತಿನಲ್ಲಿ ತೊದಲಿಕೆಯ ಜೊತೆಗೆ ಬೇರೆ ಭಾಷೆಯ ಮೇಲೆ ಆತನಿಗಿರುವ ವ್ಯಾಮೋಹವು ಮದ್ಯದ ಅಮಲಿನಲ್ಲಿ ಹೊರಗೆ ಬೀಳುತ್ತದೆ. ಅದು ಇಂಗ್ಲೀಷ್ ಆಗಿರಬೇಕು ಅಂತೇನಿಲ್ಲ ಯಾವ ಭಾಷೆಯೂ ಆಗಬಹುದು.
ಕುಡುಕರು ಹಾಕಿಕೊಳ್ಳುವ ಎಣ್ಣೆಯ ಅಮಲು ಅವರನ್ನು ಬೇರೆ ಭಾಷೆ ಮಾತನಾಡುವುದಕ್ಕೆ ಸಹಾಯ ಮಾಡುತ್ತದೆ ಎಂದು ‘ಜರ್ನಲ್ ಆಫ್ ಸೈಕೋಫಾರ್ಮಕಾಲಜಿ’ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ಉಲ್ಲೇಖಿಸಲಾಗಿದೆ.
ಜರ್ನಲ್ ಆಫ್ ಸೈಕೋಫಾರ್ಮಾಕಾಲಜಿಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, 1 ರಿಂದ 2 ಪೆಗ್ ಆಲ್ಕೋಹಾಲ್ ಸೇವಿಸಿ ಅಮಲು ಹತ್ತುತ್ತಿದ್ದಂತೆ ಜನರ ಮನಸ್ಸಿನಲ್ಲಿದ್ದ ಭಯ ಅಥವಾ ಹಿಂಜರಿಕೆ ಅಲ್ಲಿಗೆ ಕೊನೆಯಾಗುತ್ತದೆ. ತನ್ನಿಂದ ಎಲ್ಲವೂ ಸಾಧ್ಯ ಎಂಬ ಮನೋಭಾವನೆ ಬರುತ್ತದೆ. ಮನಸ್ಸು ಮಾಡಿದರೆ ಏನು ಮಾಡಬಹುದು ಎಂಬುದು ಅವರಲ್ಲಿ ದೃಢವಾಗುತ್ತದೆ. ಈ ವೇಲೆ ಮಾತನಾಡುವ ಭಾಷೆ, ಸ್ಟೈಲ್ ಕೂಡ ಬದಲಾಗುತ್ತದೆ. ಭಾರತೀಯರಾದರೆ ಕುಡಿದ ನಂತರ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿಸಲು ಪ್ರಾರಂಭಿಸುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
