ಬುದ್ದಿವಂತಿಕೆಯಲ್ಲಿ ಪ್ರಾಣಿಗಳು ಮನುಷ್ಯರಿಗಿಂತ ಮೇಲು ಎನ್ನುವ ವಿಚಾರ ಬಹಳಷ್ಟು ಬಾರಿ ಸತ್ಯವಾಗಿದೆ. ಇದಕ್ಕೆ ನಾವು ಹಲವಾರು ಉದಾಹರಣೆಗಳನ್ನು ಸಹ ನೋಡಿದ್ದೇವೆ. ಇದೀಗ ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋ.
ರಸ್ತೆ ದಾಟುವಾಗ ಮೈಯೆಲ್ಲಾ ಕಣ್ಣಾಗಿದ್ದರೆ ಒಳ್ಳೆಯದು. ಸ್ವಲ್ಪ ಯಾಮಾರಿದರು ಜೀವಕ್ಕೆ ಆಪತ್ತು. ಆದರೂ ಜನರು ರಸ್ಯೆ ದಾಟುವಾಗ ಗಳಿಗೆ ತೂರಿ ಹೋಗಿರುವುದನ್ನು ಸಹ ನಾವು ಹಲವು ಬಾರಿ ಗಮನಿಸಿದ್ದೇವೆ. ಆದರೆ ಇಲ್ಲೊಂದು ನಾಯಿ ರೆಡ್ ಸಿಗ್ನಲ್ ಬರೋವರ್ಗು ಕಾದು ನಂತರ ಜೀಬ್ರಾ ಕ್ರಾಸಿಂಗ್ ದಾಟಿದೆ.
They know 💙🐶 pic.twitter.com/p8QfXvyafw
— CCTV_IDIOTS (@cctv_idiots) February 8, 2023
ಈ ವೈರಲ್ ವಿಡಿಯೋ ದಲ್ಲಿ ರಸ್ತೆಯ ಎರಡು ಬದಿಯಲ್ಲಿ ಗಾಡಿಗಳು ಬರುತ್ತಿರುತ್ತವೆ, ರಸ್ತೆಯ ಒಂದು ಕಡೆ ಒಂದು ನಾಯಿ ರಸ್ತೆ ದಾಟಲು ಕಾಯುತ್ತಿರುತ್ತದೆ. ರೆಡ್ ಸಿಗ್ನಲ್ ಬಂದ ಕೂಡಲೇ ಎರಡು ಕಡೆ ಗಾಡಿಗಳು ಬರದೇ ಇರುವುದನ್ನು ಗಮನಿಸಿ ನಂತರ ನಾಯಿ ರಸ್ತೆ ದಾಟುತ್ತದೆ. ಈಗಾಗಲೇ ಈ ವಿಡಿಯೋ ಅನ್ನು 1.3 ಲಕ್ಷ ಜನರು ನೋಡಿದ್ದಾರೆ. 1,300ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಕೆಲವರು ನಾಯಿಗೆ ಇರುವಷ್ಟು ಜ್ಞಾನ ಮನುಷ್ಯರಿಗೆ ಇಲ್ಲ ಎಂದು ಸಹ ಕಮೆಂಟ್ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
