fbpx
ಸಮಾಚಾರ

ಎದೆ ಮೇಲೆ ‘ನನ್ನ ಸೆಲೆಬ್ರಿಟೀಸ್‌’ ಎಂದು ಕನ್ನಡ ಅಕ್ಷರದಲ್ಲಿ ಅಚ್ಚೆ ಹಾಕಿಸಿಕೊಂಡ ಡಿಬಾಸ್! ದಾಸನ ಪ್ರೀತಿಗೆ ಸೋತ ಫ್ಯಾನ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ತಮ್ಮ ಅಭಿಮಾನಿಗಳೇ ಜೀವಾಳ. ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಎಂದು ಕರಿಯುತ್ತಾರೆ. ಇವರ ಅಭಿಮಾನಿಗಳು ಕೂಡ ಇವರನ್ನು ದೇವರ ರೂಪದಲ್ಲಿ ಪೂಜಿಸುತ್ತಾರೆ. ಇನ್ನು ಕೆಲವು ದಿನಗಳಲ್ಲಿ ಡಿಬಾಸ್ ಅವರ ಹುಟ್ಟುಹಬ್ಬ ಬರಲಿದೆ. ಇದರ ಮದ್ಯೆ ಇದೀಗ ಸ್ವತಃ ಡಿಬಾಸ್ ತಮ್ಮ ಅಭಿಮಾನಿಗಳಿಗೆ ಒಂದು ಬಿಗ್ ಸರ್ಪ್ರೈಸ್ ನೀಡಿದ್ದಾರೆ.

ತಮ್ಮ ಅಭಿಮಾನಿಗಳಿಗೆ ಗೌರವ ನೀಡುವ ಸಲುವಾಗಿ ದರ್ಶನ್‌ ತಮ್ಮ ಎದೆ ಮೇಲೆ ‘ನನ್ನ ಸೆಲೆಬ್ರಿಟೀಸ್‌’ ಎಂಬ ಕನ್ನಡ ಅಕ್ಷರದ ಟ್ಯಾಟೂ ಹಾಕಿಸಿದ್ದಾರೆ. ದರ್ಶನ್ ಯಾವಾಗಲು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಹೇಳುತ್ತಿದ್ದರು. ಇದೀಗ ಇವರಿಗೆ ತಮ್ಮ ಅಭಿಮಾನಿಗಳ ಮೇಲೆ ಎಷ್ಟರ ಮಟ್ಟಿಗೆ ಪ್ರೀತಿ ಇದೆ ಎಂದು ತೋರಿಸಲು ತಮ್ಮ ಎದೆಯ ಮೇಲೆ ‘ನನ್ನ ಸೆಲೆಬ್ರಿಟೀಸ್‌’ ಎಂದು ಒಂದು ಹಾರ್ಟ್ ಸಿಂಬಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಡಿಬಾಸ್ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಿಗೆ ದಾಸನ ಪ್ರೀತಿಗೆ ಸೋತು ಮೆಚ್ಚುಗೆಯ ಕಮೆಂಟ್ ಮಾಡುತ್ತಿದ್ದಾರೆ. ಬಹುಶಃ ಚಿತ್ರೋದ್ಯಮದ ಇತಿಹಾಸದಲ್ಲಿ ಅಭಿಮಾನಿಗಳ ಪ್ರೀತಿಯನ್ನು ಹಚ್ಚೆಯ ಮೂಲಕ ಎದೆಗೆ ಇಳಿಸಿಕೊಂಡ ಏಕೈಕ ನಟ ಅದು ದರ್ಶನ್ ಎಂದರೆ ತಪ್ಪಾಗಲಾರದು.

ಟ್ಯಾಟೂ ಹಾಕಿಸುವಾಗ ಇದರ ಹಿನ್ನೆಲೆ ಹೇಳಿಕೊಂಡ ದರ್ಶನ್, ʼಇದನ್ನು ನಾನು ತೋರಿಸುವುದಕ್ಕೆ ಹಾಕಿಸುತ್ತಿಲ್ಲ. ನಮ್ಮ ಸೆಲೆಬ್ರೆಟಿಗಳಿಗೋಸ್ಕರ ಹಾಕಿಸಿಕೊಳ್ಳುತ್ತಿದ್ದೇನೆ. ಇದೊಂದು ಥರ ಅಡಿಕ್ಷನ್. ಆಕ್ಚ್ಯುಲಿ ಇವನೆಲ್ಲ ಹಾಕಿಸಲು ಹೋಗಬಾರದುʼ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top