ಭಾರತದ ಆಟಗಾರ ಪೃಥ್ವಿ ಶಾ ಅವರ ಕಾರಿನ ಮೇಲೆ ಕಿಡಿಗೇಡಿಗಳು ಅಟ್ಯಾಕ್ ಮಾಡಿದ್ದು, ಇದರಿಂದ ಪೃಥ್ವಿ ಶಾ ಪಾರಾಗಿದ್ದಾರೆ. ಸೆಲ್ಫಿ ಗೆ ನಿರಾಕರಿಸಿದರು ಎಂಬ ಕಾರಣಕ್ಕೆ ಇವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದು, ಆದರೆ ಇವರು ತಪ್ಪಿಸಿಕೊಂಡಿದ್ದಾರೆ.
ಪೃಥ್ವಿ ಶಾ ಅವರು ಮುಂಬೈನ ಸಹಾರಾ ಸ್ಟಾರ್ ಹೋಟೆಲ್‌ನ ಮ್ಯಾನ್ಷನ್ ಕ್ಲಬ್‌ನಲ್ಲಿ ಬುಧವಾರ ರಾತ್ರಿ ಇದ್ದರು. ಈ ವೇಳೆ ಸನಾ ಗಿಲ್ ಮತ್ತು ಶೋಬಿತ್ ಠಾಕೂರ್ ಎಂಬ ಇಬ್ಬರು ಯುವಕರು ಪೃಥ್ವಿ ಶಾ ಬಳಿ ಸೆಲ್ಫಿಗೆ ಮನವಿ ಮಾಡಿದ್ದಾರೆ. ಅದಕ್ಕೆ ಪೃಥ್ವಿ ಶಾ ಒಪ್ಪಿದರು. ಇಷ್ಟಕ್ಕೆ ಸುಮ್ಮನಿರದ ಯುವಕರು ಮತ್ತೊಮ್ಮೆ ಸೆಲ್ಫಿ ತೆಗೆಸಿಕೊಳ್ಳಲು ಮುಂದಾದರು. ಇದರಿಂದ ಕೋಪಗೊಂಡ ಪೃಥ್ವಿ ಶಾ ಸೆಲ್ಫಿ ಗೆ ನಿರಾಕರಿಸಿ ಅಲ್ಲಿಂದ ಹೊರಟರು.
ನಂತರ ಸ್ಥಳಕ್ಕೆ ಬಂದ ಹೋಟೆಲ್ ಮ್ಯಾನೇಜರ್ ಇವರಿಬ್ಬರನ್ನು ಹೋಟೆಲ್ ನಿಂದ ಹೊರಗೆ ಕಳುಹಿಸಿದ್ದರು.ಇದರಿಂದ ಕೋಪಗೊಂಡ ಇವರಿಬ್ಬರು ಪೃಥ್ವಿ ಶಾ ಮತ್ತು ಅವರ ಸ್ನೇಹಿತರು ಕಾರಿನಿಂದ ಬರುವುದನ್ನು ಕಾಯುತ್ತಿದ್ದರು. ಬಳಿಕ ಜೋಗೇಶ್ವರಿ ಲಿಂಕ್ ರೋಡ್ ಲೋಟಸ್ ಗ್ಯಾಸ್ ಸ್ಟೇಷನ್ ಬಳಿ ಶಾ ಹಾಗೂ ಅವರ ಸ್ನೇಹಿತ ಕಾರಿನಲ್ಲಿ ಹೊಗುತ್ತಿದ್ದಾರೆ ಎಂಬ ಊಹೆಯ ಮೇರೆಗೆ ಕಾರನ್ನು ಹಿಂಬಾಲಿಸಿಕೊಂಡು ಬಂದು ಬೇಸ್ ಬಾಲ್ ಬ್ಯಾಟ್ನಿಂದ ಕಾರಿನ ಗಾಜು ಒಡೆದಿದ್ದಾರೆ.
ಆದರೆ ಅಲ್ಲಿ ನಡೆದಿದ್ದೇ ಬೇರೆ. ಏಕೆಂದರೆ ಆ ಕಾರಿನಲ್ಲಿ ಪೃಥ್ವಿ ಶಾ ಇರಲಿಲ್ಲ. ಇಂತಹ ಘಟನೆ ನಡೆಯಬಹುದು ಎಂದು ಎಂದು ಮೊದಲೇ ಊಹಿಸಿ ಪೃಥ್ವಿ ಶಾ, ಆಗಲೇ ಬೇರೆ ಕಾರಿನಲ್ಲಿ ಮನೆಗೆ ತೆರಳಿದ್ದರು. ಇದೀಗ ಮುಂಬೈ ಪೊಲೀಸರು ಪೃಥ್ವಿ ಶಾ ಹಾಗೂ ಅವರ ಸ್ನೇಹಿತನ ಕಾರಿನ ಮೇಲೆ ದಾಳಿ ನಡೆಸಿದ 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
