fbpx
ಸಮಾಚಾರ

ಅರ್ಜುನನಿಗೆ ಊರ್ವಶಿ ನೀಡಿದ ಶಾಪ ಏನು? ಆ ಶಾಪ ವರವಾಯಿತೆ !

ಅರ್ಜುನನಿಗೆ ಊರ್ವಶಿ ನೀಡಿದ ಶಾಪ ಏನು? ಹಾಗೂ ಆ ಶಾಪ ಅರ್ಜುನನಿಗೆ ವರವಾಗಿದ್ದು ಹೇಗೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಸ್ವರ್ಗದ ಅಪ್ಸರೆಯಾದ ಊರ್ವಶಿಯು ಸ್ವರ್ಗಸಭೆಯ ವೇಳೆಯೇ ಅರ್ಜುನನ ಸೌಂದರ್ಯಕ್ಕೆ ಮನ ಸೋತಿರುತ್ತಾಳೆ. ಹೀಗೊಂದು ದಿನ ಅವಕಾಶ ಸಿಕ್ಕಿತು, ಊರ್ವಶಿ ಅರ್ಜುನನ ಮುಂದೆ ಪ್ರೀತಿಯ ಪ್ರಸ್ತಾಪವನ್ನು ಮಾಡುತ್ತಾಳೆ.

ಆದರೆ ಅರ್ಜುನ ಅದನ್ನು ನಿರಾಕರಿಸುತ್ತಾನೆ. ಊರ್ವಶಿಯನ್ನು ತಾಯಿ ಎಂದು ಕರೆಯುತ್ತಾನೆ. ಕಾಮದ ದಾಹದಲ್ಲಿದ್ದ ಊರ್ವಶಿಗೆ ಈ ಮಾತುಗಳು ರುಚಿಸುವುದಿಲ್ಲ. ಅವಳು ಅರ್ಜುನನಿಗೆ ಶಾಪ ನೀಡುತ್ತಾಳೆ. ‘ನನ್ನಂಥ ಹೆಣ್ಣನ್ನು ತೃಪ್ತಿ ಪಡಿಸದ ನೀನು ನಪುಂಸಕನಾಗಿ ಹೋಗು. ಯಾವತ್ತೂ ನೀನು ಒಂದು ಹೆಣ್ಣಿಗೆ ಸುಖ ಕೊಡದಂತವನಾಗು’ ಎಂದು ಶಪಿಸುತ್ತಾಳೆ.

ತನ್ನ ಪೂರ್ವಜರಾದ ಪುರೂರವ ಮತ್ತು ಊರ್ವಶಿ ಕೆಲವು ಷರತ್ತುಗಳೊಂದಿಗೆ ಪತಿ-ಪತ್ನಿಯಾಗಿ ಬದುಕುತ್ತಿದ್ದ ಕಾರಣ ಅರ್ಜುನ ಊರ್ವಶಿಯನ್ನು ತಾಯಿ ಎಂದು ಕರೆದಿದ್ದನು. ಶಾಪದ ವಿಚಾರವು ಅರ್ಜುನನ ತಂದೆ ದೇವರಾಜ ಇಂದ್ರನಿಗೆ ತಲುಪುತ್ತದೆ. ದೇವರಾಜ ಇಂದ್ರನು ಊರ್ವಶಿ ಅರ್ಜುನನನ್ನು ಶಪಿಸಿರುವುದು ತಿಳಿದಾಗ, ತುಂಬಾ ಕೋಪಗೊಳ್ಳುತ್ತಾನೆ. ಶಾಪ ವಿಮೋಚನೆ ಮಾಡೆಂದು ಅಪ್ಪಣೆ ಮಾಡುತ್ತಾನೆ. ಊರ್ವಶಿಯು ಕೊಟ್ಟ ಶಾಪವನ್ನು ನಾನು ಹಿಂಪಡೆಯಲು ಆಗದು. ಆದರೆ ಶಾಪದ ಅವಧಿಯನ್ನು ಒಂದು ವರ್ಷಕ್ಕೆ ಇಳಿಸುತ್ತೇನೆ. ಆ ಒಂದು ವರ್ಷದ ಅವಧಿಯನ್ನು ಅರ್ಜುನನೇ ಯಾವಾಗ ಬೇಕೆಂದು ನಿರ್ಧರಿಸಬಹುದು ಎನ್ನುತ್ತಾಳೆ. ಅರ್ಜುನ ಇದನ್ನು ಒಪ್ಪಿಕೊಂಡು ಭೂಲೋಕಕ್ಕೆ ಹಿಂದಿರುಗುತ್ತಾನೆ.

ಅರ್ಜುನನಿಗೆ ಊರ್ವಶಿಯು ನೀಡಿದ ಶಾಪವು ಅವನ ಒಂದು ವರ್ಷದ ಅಜ್ಞಾತವಾಸದ ಸಮಯದಲ್ಲಿ ಪ್ರಯೋಜನಕ್ಕೆ ಬರುತ್ತದೆ. ಅಜ್ಞಾತವಾಸದ ಸಮಯದಲ್ಲಿ ಬ್ರಹನ್ನಳೆಯಾಗಿ ಮತ್ಸ್ಯ ದೇಶದ ವಿರಾಟ ರಾಜನ ಮಗಳಾದ ಉತ್ತರೆಗೆ ಅರ್ಜುನ ನೃತ್ಯಾಭ್ಯಾಸ ಹೇಳಿಕೊಡುತ್ತಾನೆ. ಹೀಗೆ ಅಜ್ಞಾತವಾಸದಲ್ಲಿ ನಪುಂಸಕನಾದ ಅರ್ಜುನ ಒಂದು ವರ್ಷ ಮುಗಿದ ಕೂಡಲೇ ತನ್ನ ಪುರುಷತ್ವವನ್ನು ಮರಳಿ ಪಡೆಯುತ್ತಾನೆ. ಹೀಗೆ ಊರ್ವಶಿಯ ಶಾಪವು ಅರ್ಜುನನಿಗೆ ವರವಾಯಿತು ಎಂದು ಪುರಾಣಗಳು ಹೇಳುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top