fbpx
ಸಮಾಚಾರ

ದೇವಸ್ಥಾನದಲ್ಲಿ ಗಂಟೆಗಳನ್ನು ಏಕೆ ಇಟ್ಟಿರುತ್ತಾರೆ?ಗಂಟೆ ಬಾರಿಸಿದರೆ ಈ ಎಲ್ಲಾ ಲಾಭಗಳಿವೆ

ನಮ್ಮ ಹಿಂದೂ ಧರ್ಮದ ಆಚರಣೆಯ ಪ್ರಕಾರ ಗಂಟೆಗಳನ್ನು ದೇವಸ್ಥಾನದಲ್ಲಿ ಇಟ್ಟಿರುತ್ತಾರೆ. ದೇವರ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಲೋಹದ ಘಂಟೆಯನ್ನು ಕಟ್ಟುತ್ತೇವೆ. ಅದನ್ನು ಬಡಿದು ನಂತರ ದೇವರಿಗೆ ನಮಸ್ಕಾರ ಮಾಡುತ್ತೇವೆ. ಇದರ ಹಿಂದೆ ಸಾಕಷ್ಟು ಧಾರ್ಮಿಕ ಹಾಗೂ ವೈಜ್ಞಾನಿಕ ವಿಷಯಗಳು ಅಡಗಿವೆ. 

ಸ್ಕಂದ ಪುರಾಣದ ಪ್ರಕಾರ ದೇವಸ್ಥಾನದಲ್ಲಿ ಇರುವ ಗಂಟೆಗಳನ್ನು ಹೊಡೆದಾಗ ಮನುಷ್ಯರಲ್ಲಿರುವ ಪಾಪಗಳು ತೊಲಗುತ್ತವೆ. ಗಂಟೆಯನ್ನು ಹೊಡೆಯುವುದರಿಂದ ಅದರ ವೈಬ್ರೇಷನ್ ಗಾಳಿಯ ಪ್ರಮಾಣದಿಂದ ದೂರದವೆರೆಗೂ ಸಾಗಿ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳು ಸತ್ತು ಹೋಗುತ್ತವೆ. ಇದರಿಂದ ನಮ್ಮ ಮೆದುಳಿನಲ್ಲಿ ಒಂದು ರೀತಿಯ ಪ್ರಶಾಂತತೆಯ ಭಾವ ಮೂಡುತ್ತದೆ. 7 ಸೆಕೆಂಡ್ ಬರುವ ಈ ಶಬ್ದ ನಮ್ಮ ದೇಹದ 7 ಶಕ್ತಿಗಳನ್ನು ಮುಟ್ಟುತ್ತದೆ. ಲೋಹಗಳ ಮಿಶ್ರಣದಲ್ಲಿ ತಯಾರಾದ ಘಂಟೆಗಳನ್ನು ಬಾರಿಸಿದಾಗ ನಮ್ಮ ಎಡ ಮತ್ತು ಬಲ ಮೆದುಳಿನ ಮೇಲೆ ಏಕತೆಯನ್ನು ಉಂಟುಮಾಡುತ್ತವೆ.

ಘಂಟೆಯ ನಾದ ನಮ್ಮ ಕಿವಿಗೆ ಹಾಗೂ ಮಾನಸಿಕ ಚಿಂತನೆಗಳ ಮೇಲೆ ಸಾಕಷ್ಟು ಉತ್ತಮ ಪರಿಣಾಮವನ್ನು ಬೀರುತ್ತದೆ. ಲೋಹದಲ್ಲಿ ಉದ್ಭವಿಸುವ ಘಂಟೆಯ ನಾದವು ಅತ್ಯಂತ ಶುಭ ಸೂಚಕ. ಈ ಶಬ್ದವು ನಮ್ಮ ಸೂಪ್ತ ಮನಸ್ಸಿನಲ್ಲಿ ಕೇಂದ್ರೀಕರಿಸುವ ಶಕ್ತಿಯನ್ನು ಜಾಗ್ರತಗೊಳಿಸುತ್ತವೆ. ಜೊತೆಗೆ ನಮ್ಮ ಚಂಚಲ ಹಾಗೂ ಕ್ರಿಯಾಶೀಲ ಮನಸ್ಸನ್ನು ಒಮ್ಮೆ ಕೇಂದ್ರೀಕರಿಸಲು ಸಹಾಯ ಮಾಡುವುದು.

ಘಂಟೆಯ ನಾದದಿಂದ ಮನಸ್ಸು ಪ್ರಶಾಂತಗೊಳ್ಳುವುದು. ಆರಾಧಕರ ಮತ್ತು ಭಕ್ತರ ಮನಸ್ಸಿನಲ್ಲಿ ದೇವರ ಮೇಲೆ ಭಕ್ತಿ, ಉತ್ಸಾಹ, ಏಕಾಗ್ರತೆ ಮತ್ತು ಆಂತರಿಕ ಶಾಂತಿ ಮತ್ತು ನಿರ್ಮಲ ಮನಸ್ಸನ್ನು ಪ್ರೇರೇಪಿಸುವುದು.

ಘಂಟೆಗಳು ಮೊಳಗಿದಾಗ ವಾತಾವರಣದಲ್ಲಿ ಕಂಪನವು ಸೃಷ್ಟಿಯಾಗುತ್ತದೆ. ಇದು ಗಾಳಿಯ ಹರಿವಿನೊಂದಿಗೆ ತುಂಬಾ ದೂರದಲ್ಲಿ ಹರಡುತ್ತವೆ. ಈ ಕಂಪನಕ್ಕೆ ಒಳಗಾಗುವ ಅಪಾಯಕಾರಿ ಕೀಟಗಳು, ಕಣಗಳು ಮತ್ತು ಋಣಾತ್ಮಕ ಶಕ್ತಿಗಳು ಸಾಯುತ್ತವೆ. ವಾತಾವರಣವು ಸ್ವಚ್ಛ ಹಾಗೂ ಆರೋಗ್ಯಕರವಾಗಿ ಇರುತ್ತದೆ ಎಂದು ಹೇಳಲಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top