ಇತ್ತೀಚಿನ ದಿನಗಳಲ್ಲಿ ನಾವು ಸ್ಮಾರ್ಟ್ ಫೋನ್ ಯುಗದಲ್ಲಿ ಬದುಕುತ್ತಿದ್ದೇವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರತಿಯೊಬ್ಬರ ಕೈಯಲ್ಲೂ ಇದೀಗ ಸ್ಮಾರ್ಟ್ ಫೋನ್ ಗಳಿರುತ್ತವೆ. ಸ್ಮಾರ್ಟ್ ಫೋನ್ ಗಳು ಹಲವಾರು ಬಣ್ಣಗಳಲ್ಲಿ ಮತ್ತು ಹಲವಾರು ಬ್ರಾಂಡ್ ಗಳಲ್ಲಿ ಲಭ್ಯವಾಗಿರುತ್ತದೆ. ಆದರೆ ಸ್ಮಾರ್ಟ್ ಫೋನ್ ಚಾರ್ಜರ್ ಮಾತ್ರ ಕೇವಲ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಮಾತ್ರ ಲಭ್ಯವಿರುತ್ತದೆ. ಯಾಕೆ ಗೊತ್ತಾ?
ಇದೀಗ ಚಾರ್ಜರ್ ಗಳು ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಇರುವ ಕಾರಣ ಕೇಳಿದರೆ ನೀವು ಕೂಡ ಒಂದು ಕ್ಷಣ ಆಶ್ಚರ್ಯಚಕಿತರಾಗುತ್ತೀರಾ?
ಮೊಬೈಲ್ ಕಂಪನಿಗಳು ಬೇರೆ ಬಣ್ಣಗಳಲ್ಲಿ ಚಾರ್ಜರ್‌ಗಳನ್ನು ತಯಾರಿಸದಿರಲು ಮುಖ್ಯ ಕಾರಣ ಅದರ ಬಾಳಿಕೆ ಮತ್ತು ವೆಚ್ಚ. ಕಪ್ಪು ಮತ್ತು ಬಿಳಿ ಬಣ್ಣಗಳು ಚಾರ್ಜರ್‌ನ ಜೀವಿತಾವಧಿಯನ್ನು ಹೆಚ್ಚಿಸುತ್ತವೆ. ಇನ್ನು ವಿಶೇಷವಾಗಿ ಇತರ ಬಣ್ಣಗಳಿಗೆ ಹೋಲಿಸಿದರೆ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಚಾರ್ಜರ್‌ಗಳನ್ನು ತಯಾರಿಸಲು ಕಂಪೆನಿಗಳಿಗೆ ವೆಚ್ಚವೂ ಕಡಿಮೆ ಆಗುತ್ತದೆ.
ಇದೀಗ ಕಂಪನಿಗಳು ಬಿಳಿ ಬಣ್ಣದ ಚಾರ್ಜರ್ ಗಳನ್ನು ಉಪಯೋಗಿಸಲು ಕೆಲವು ಕಾರಣಗಳಿವೆ. ಮೊದಲನೆಯದಾಗಿ, ಬಿಳಿ ಬಣ್ಣವು ಬಾಹ್ಯ ಶಾಖವನ್ನು ಚಾರ್ಜರ್ ಒಳಗೆ ಪ್ರವೇಶಿಸದಂತೆ ತಡೆಹಿಡಿಯುತ್ತದೆ. ಈ ಕಾರಣಕ್ಕಾಗಿ ಚಾರ್ಜರ್ ಹೆಚ್ಚು ಬಿಸಿಯಾಗುವುದು ಕಮ್ಮಿಯಾಗುತ್ತದೆ. ಇನ್ನು ಬಿಳಿ ಬಣ್ಣವು ಸೌಮ್ಯತೆಯ ಸಂಕೇತವಾಗಿದ್ದು ಎಲ್ಲರಿಗು ಇಷ್ಟವಾಗುವ ಕಾರಣ ಇದನ್ನು ಹೆಚ್ಚಾಗಿ ಬಳಸುತ್ತಾರೆ.
ಇನ್ನು ಕಪ್ಪು ಬಣ್ಣದ ಚಾರ್ಜರ್ ಗಳ ವಿಶೇಷತೆಗೆ ಬಂದರೆ ಹಳೆ ಕಾಲದಿಂದಲೂ ಹೆಚ್ಚಾಗಿ ಪ್ರತಿ ಮೊಬೈಲ್ ಗು ಕಪ್ಪು ಬಣ್ಣದ ಚಾರ್ಜರ್ ಗಳನ್ನು ನೀಡುತ್ತಿದ್ದರು. ಏಕೆಂದರೆ ಇದು ಶಾಖವನ್ನು ಬೇಗನೆ ಹೀರಿಕೊಳ್ಳುತ್ತದೆ ಮತ್ತು ಚಾರ್ಜಿಂಗ್ ಸಮಯದಲ್ಲಿ ಉಂಟಾಗುವ ಶಾಖದಿಂದ ಚಾರ್ಜರ್ ಅನ್ನು ರಕ್ಷಿಸುತ್ತದೆ. ಹೀಗಾಗಿ ಚಾರ್ಜರ್ ಗಳನ್ನು ಕಪ್ಪು ಬಣ್ಣದಿಂದ ತಯಾರಿಸುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
