777 ಚಾರ್ಲಿ ಸಿನಿಮಾದ ನಂತರ ರಕ್ಷಿತ್ ಶೆಟ್ಟಿ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಯಾವುದೇ ಕಾರ್ಯಕ್ರಮಗಳಲ್ಲಿಯೂ ಸಹ ರಕ್ಷಿತ್ ಶೆಟ್ಟಿ ಹೆಚ್ಚಾಗಿ ಭಾಗವಹಿಸುತ್ತಿರಲಿಲ್ಲ. ಇದರಿಂದ ಸಹಜವಾಗಿ ಅಭಿಮಾನಿಗಳಿಗೆ ರಕ್ಷಿತ್ ಶೆಟ್ಟಿ ಎಲ್ಲಿ ಹೋಗಿದ್ದಾರೆ ಎಂಬ ಅನುಮಾನ ಶುರುವಾಗುವುದು ಸಹ. ಆದರೆ ಇದಕ್ಕೆ ಒಂದು ಮುಖ್ಯ ಕಾರಣವಿದೆ.
ರಕ್ಷಿತ್ ಶೆಟ್ಟಿ ತಮ್ಮ ಮುಂದಿನ ಸಿನಿಮಾಕ್ಕಾಗಿ ಸಂಪೂರ್ಣ ಬದಲಾಗುತ್ತಿದ್ದಾರೆ. ಹೀಗಾಗಿ ಹೇರ್ ಸ್ಟೈಲ್ ಮತ್ತು ಬಾಡಿ ಶೇಪ್ ಬದಲಾಯಿಸಿಕೊಂಡಿದ್ದಾರೆ. ಅದು ಯಾರಿಗೂ ಸಹ ತಿಳಿಯಬಾರದೆಂದು ಅವರು ಹೆಚ್ಚಾಗಿ ಯಾವುದೇ ಕಾರ್ಯಕ್ರಮದಲ್ಲಿ ಆಗಲಿ ಅಥವಾ ಸಾರ್ವಜನಿಕವಾಗಲಿ ಕಾಣಿಸಿಕೊಳ್ಳುತ್ತಿಲ್ಲ.
ಹೀಗಾಗಿ ರಕ್ಷಿತ್ ಶೆಟ್ಟಿ ಅವರಿಗೆ ಯಾವುದೇ ಕಾರ್ಯಕ್ರಮಕ್ಕೆ ಅಹ್ವಾನ ಬಂದರು ಸಹ ಅವರು ಅದನ್ನು ತಿರಸ್ಕರಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ಅವರು ಒಂದು ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಅಲ್ಲೂ ಕೂಡ ಅವರು ಹೆಚ್ಚಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೆಲಸದಲ್ಲಿ ಇವರು ಬ್ಯುಸಿಯಾಗಿದ್ದಾರೆ. ಹೀಗಾಗಿ ಹೆಚ್ಚಾಗಿ ಅವರು ಸಿನಿಮಾ ತಂಡದ ಜೊತೆ ಕಾಲ ಕಳೆಯುತ್ತಿದ್ದಾರೆ. ಇದಲ್ಲದೆ ಇವರು ಬೆಂಗಳೂರಿನಲ್ಲಿ ಮನೆಯೊಂದನ್ನು ಸಹ ಕಟ್ಟಿಸುತ್ತಿದ್ದು, ಇದರ ಕೆಲಸದಲ್ಲಿ ಸಹ ಬ್ಯುಸಿಯಾಗಿದ್ದಾರೆ. ಮನೆಯಲ್ಲಿ ಸ್ಟುಡಿಯೋ, ಆಫೀಸ್ ಸೇರಿದಂತೆ ಸಿನಿಮಾ ಸಂಬಂಧಿ ಅಷ್ಟೂ ಚಟುವಟಿಕೆಗಳು ಅದೇ ಕಟ್ಟಡದಲ್ಲಿ ನಡೆಯಲಿದೆಯಂತೆ. ಇವೆಲ್ಲ ಕಾರಣಗಳಿಂದ ಇವರು ಹೆಚ್ಚಾಗಿ ಸಾರ್ವಜನಿಕವಾಗಿ ದೂರವಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
