ಇನ್ನು ಎರಡು ದಿನಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್ (WPL) ಶುರುವಾಗಲಿದೆ. ಇದಕ್ಕಾಗಿ ಪ್ರತಿಯೊಬ್ಬರೂ ಸಹ ಕಾತುರದಿಂದ ಕಾಯುತ್ತಿದ್ದಾರೆ. ಇವೆಲ್ಲದರ ಮದ್ಯೆ ಬಿಸಿಸಿಐ ಪಂದ್ಯ ವೀಕ್ಷಿಸಲು ಬರುವ ಮಹಿಳೆಯರು ಮತ್ತು ಹುಡುಗಿಯರಿಗೆ ಒಂದು ಬಂಪರ್ ಆಫರ್ ಕೊಟ್ಟಿದ್ದಾರೆ.
ಮಾರ್ಚ್ 4 ರಿಂದ ಮಾರ್ಚ್ 26ರ ವರೆಗೆ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಬರುವ ಎಲ್ಲ ಮಹಿಳೆಯರು ಹಾಗೂ ಹುಡುಗಿಯರಿಗೆ ಉಚಿತ ಪ್ರವೇಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಜನರನ್ನು ಸ್ಟೇಡಿಯಂ ಕಡೆ ಆಕರ್ಷಿಸಲು ಮತ್ತು ಮಹಿಳೆಯರಿಗೂ ಸಹ ಕ್ರಿಕೆಟ್ ಪಂದ್ಯದ ಮೇಲೆ ಆಸಕ್ತಿ ಬೆಳೆಯಲು ಬಿಸಿಸಿಐ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
I am delighted to announce the #TataGroup as the title sponsor of the inaugural #WPL. With their support, we're confident that we can take women's cricket to the next level. @BCCI @BCCIWomen @wplt20 pic.twitter.com/L05vXeDx1j
— Jay Shah (@JayShah) February 21, 2023
WPL ನಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿದೆ. ಮಾರ್ಚ್ 4ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.
ಹೀಗಾಗಿ ಈ ಪಂದ್ಯದಿಂದ ಹಿಡಿದು ಮಾರ್ಚ್ 26 ರಂದು ನಡೆಯುವ ಫೈನಲ್ ಪಂದ್ಯದವರೆಗೂ ಪಂದ್ಯವನ್ನು ವೀಕ್ಷಿಸಲು ಬರುವ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಉಚಿತ ಪ್ರವೇಶ. ಪುರುಷರು ಹಾಗೂ ಹುಡುಗರಿಗೆ ಕ್ರಮವಾಗಿ 100 ರೂ. ಹಾಗೂ 400 ರೂ. ಟಿಕೆಟ್ ದರ ನಿಗದಿಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
