ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ಸಕತ್ ಸೌಂಡ್ ಮಾಡಿತ್ತು. ಕಾಂತಾರ ಸಿನಿಮಾದ ಹಾಡುಗಳು ಸಹ ಅಷ್ಟರಮಟ್ಟಿಗೆ ಫೇಮಸ್ ಆಗಿದ್ದವು. ಹೀಗಾಗಿ ಕಾಂತಾರ ಸಿನಿಮಾದ ಹಾಡುಗಳನ್ನು ಕೆಲವು ಪರಭಾಷಾ ನಟಿಯರು, ಕೆಲವು ವಿದೇಶಿಯರು ಸಹ ಹಾಡಿದರು. ಇದೀಗ ಕಾಂತಾರ ಸಿನಿಮಾದ ‘ಕರ್ಮದ ಕಲ್ಲನು’ ಹಾಡನ್ನು ಹಿಂದಿ ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟಿ ತೇಜಸ್ವಿ ಪ್ರಕಾಶ್ ಹಾಡಿದ್ದಾರೆ.
ತೇಜಸ್ವಿ ಪ್ರಕಾಶ್ ಕಳೆದ ಬಾರಿಯ ಹಿಂದಿ ಬಿಗ್ ಬಾಸ್ ವಿನ್ನರ್. ಇವರು ಒಂದಲ್ಲ ಒಂದು ಸುದ್ದಿಯಲ್ಲಿ ಯಾವಾಗಲು ಗುರುತಿಸಿಕೊಳ್ಳುತ್ತಿದ್ದರು. ತನ್ನ ಸ್ಟೈಲ್, ಡ್ರೆಸ್ಸಿಂಗ್, ಲವ್ ಲೈಫ್‌ನಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇವರು ಸೀರಿಯಲ್, ಕತ್ರೋಂಕಿ ಖಿಲಾಡಿ, ಮತ್ತಿತರ ರಿಯಾಲಿಟಿ ಶೋ ಗಳಲ್ಲಿ ನಟಿಸುತ್ತಿದ್ದರು. ಬಿಗ್ ಬಾಸ್ ಗೆದ್ದ ನಂತರ ಇವರು ಮತ್ತಷ್ಟು ಫೇಮಸ್ ಆದರು. ಇದೀಗ ಕಾಂತಾರ ಸಿನಿಮಾದ ‘ಕರ್ಮದ ಕಲ್ಲನು’ ಹಾಡನ್ನು ಕನ್ನಡದಲ್ಲಿ ಹಾಡುವ ಮೂಲಕ ಮತ್ತಷ್ಟು ಫೇಮಸ್ ಆಗುತ್ತಿದ್ದಾರೆ.
ಇದೀಗ ಇವರು ಈ ಹಾಡನ್ನು ಹಾಡಿ “The stone of karma is a man who stumbles…The finger wound will not disappear…God will not wait…The darkness was filled with a lamp…Is it a flame that burns the city?” ಎಂಬ ಕ್ಯಾಪ್ಶನ್ ಹಾಕಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ, ಮತ್ತು ತೇಜಸ್ವಿ ಅವರ ಕನ್ನಡ ಪ್ರೀತಿಗೆ ಕನ್ನಡಿಗರು ಮನಸೋತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
