fbpx
ಸಮಾಚಾರ

ದೊಡ್ಮನೆ ಕುಟುಂಬದ ಯುವ ಕುಡಿ ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾದ ಟೀಸರ್ ಡೇಟ್ ಫಿಕ್ಸ್! ಯಾವತ್ತು ಗೊತ್ತಾ?

ದೊಡ್ಮನೆ ಕುಟುಂಬದ ಯುವ ಕುಡಿ ಯುವರಾಜ್ ಕುಮಾರ್ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಇವರು ನಟನೆಯ ಚೊಚ್ಚಲ ಸಿನಿಮಾದ ಮುಹೂರ್ತ ದಿನಾಂಕ ಕೂಡ ಫಿಕ್ಸ್ ಆಗಿದ್ದು, ಈ ದಿನದಂದು ಸಿನಿಮಾದ ಟೀಸರ್ ಮತ್ತು ಟೈಟಲ್ ಕೂಡ ಲಾಂಚ್ ಮಾಡಲಾಗುತ್ತಿದೆ.

ನಾಳೆ ಯುವರಾಜ್ ಕುಮಾರ್ ನಟನೆಯ ಚೊಚ್ಚಲ ಸಿನಿಮಾದ ಮುಹೂರ್ತ ನಡೆಯಲಿದೆ. ಮತ್ತೊಂದು ವಿಶೇಷ ಎಂದರೆ ಎಂದರೆ ನಾಳೆಯೇ ಇವರ ಸಿನಿಮಾದ ಟೈಟಲ್ ಮತ್ತು ಟೀಸರ್ ಕೂಡ ಲಾಂಚ್ ಮಾಡಲು ತಯಾರಿ ನಡೆಸಲಾಗುತ್ತಿದೆ. ಬೆಂಗಳೂರಿನ ಜೆ.ಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಸಂಜೆ 6ಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಇದಾದ ನಂತರ ಟೈಟಲ್ ಕೂಡ ಅನೌನ್ಸ್ ಆಗಲಿದೆ.

ಈ ಹಿಂದೆ ಯುವರಾಜ್ ಕುಮಾರ್ ನಟನೆಯ ಚೊಚ್ಚಲ ಸಿನಿಮಾದ ಟೈಟಲ್ ಮತ್ತು ಮುಹೂರ್ತವನ್ನು ಅಪ್ಪು ಹುಟ್ಟುಹಬ್ಬದಂದು ಲಾಂಚ್ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ ಅಪ್ಪು ಹುಟ್ಟುಹಬ್ಬದಂದು ಕಾರಣಾಂತರದಿಂದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಲಭ್ಯವಿಲ್ಲ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ. ಹೀಗಾಗಿ ಮಾರ್ಚ್ 3ಕ್ಕೆ ಮುಹೂರ್ತ, ಟೈಟಲ್ ಮತ್ತು ಟೀಸರ್ ಲಾಂಚ್ ಮಾಡಲು ಸಂಸ್ಥೆ ತೀರ್ಮಾನಿಸಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top