fbpx
ಸಮಾಚಾರ

ಮಕ್ಕಳಿಗೆ ಎಷ್ಟು ವರ್ಷದವರೆಗೆ ಎದೆಹಾಲು ಕೊಡಬಹುದು?

ಮಗುವಿನ ಪೋಷಣೆಗೆ ಬೇಕಾದ ಪ್ರತಿ ಅಂಶವೂ ತಾಯಿಯ ಹಾಲಿನಲ್ಲಿ ಇರುತ್ತದೆ. ಎದೆಹಾಲು ಕುಡಿದು ಬೆಳೆದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು. ನಿಮ್ಮ ಮಗುವಿಗೆ ನೀವು ಎಷ್ಟು ಸಮಯದವರೆಗೆ ಹಾಲುಣಿಸಬೇಕು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಕೆಲವರು ಆರು ತಿಂಗಳವರೆಗೆ ಸ್ತನಪಾನ ಮಾಡಿಸಿ ನಂತರ ರಾಗಿ ಸರಿಗೆ ಶಿಫ್ಟ್ ಆಗಿ ಬಿಡುತ್ತಾರೆ, ಸ್ತನಪಾನವನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಇದರಿಂದ ತಾಯಿ, ಮಗು ಇಬ್ಬರಿಗೂ ಸಮಸ್ಯೆ ತಪ್ಪಿದಲ್ಲ. ಮಗು ಹುಟ್ಟಿದಾಗಿನಿಂದ ಸುಮಾರು 2 ವರ್ಷಗಳವರೆಗೆ ಮಗುವಿಗೆ ಹಾಲುಣಿಸುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಮೊದಲ ಆರು ತಿಂಗಳು ಹಾಲು ಬಿಟ್ಟು ಇನ್ನೇನನ್ನೂ ಕೊಡುವಂತಿಲ್ಲ, ಇನ್ನು ಎರಡು ಅಥವಾ ಮೂರು ವರ್ಷದವರೆಗೂ ಹಾಲು ಕುಡಿಸಿದರೆ ಒಳ್ಳೆಯದು. ಈಗ ಸ್ತನಪಾನ ಮಾಡಿಸಿದಷ್ಟು ಸಮಯ ಮುಂದೆ ಆರೋಗ್ಯವಾಗಿ ಇರುತ್ತಾರೆ. ಶಿಶುವಿನ ಮೊದಲ 6 ತಿಂಗಳು ಸಂಪೂರ್ಣ ತಾಯಿಯು ಎದೆ ಹಾಲು ನೀಡುವುದರಿಂದ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಪೋಷಣೆಯನ್ನು ಒದಗಿಸುತ್ತದೆ. ಆರು ತಿಂಗಳ ನಂತರ ಸಾಲಿಡ್ ಆಹಾರದ ಜೊತೆ ಸ್ತನ್ಯಪಾನ ಮುಂದುವರಿಸಬೇಕು

ಮಗು ಜನಿಸಿದ ಆರು ತಿಂಗಳುಗಳವರೆಗೆ ಎದೆಹಾಲನ್ನು ಮಾತ್ರ ಕೊಡಬೇಕು. ಆರು ತಿಂಗಳ ನಂತರ ಪೂರಕ ಆಹಾರಗಳನ್ನು ಕೊಡುವ ಜೊತೆಗೆ 1 ವರ್ಷದವರೆಗೂ ಎದೆ ಹಾಲು ಉಣಿಸಬೇಕೆಂದು AAP ಮತ್ತು WHO ಶಿಫಾರಸ್ಸು ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top